ಮೂರು ಗ್ರಾ.ಪಂ.ಗೆ ಒಬ್ಬರೇ ಪಿ.ಡಿ.ಒ!!

ಪಾವಗಡ :

      ತಾಲ್ಲೂಕಿನ ನಿಡಗಲ್ ಹೋಬಳಿಯ ಸಿ.ಕೆ.ಪುರ ಗ್ರಾಮ ಪಂಚಾಯ್ತಿ ಹಾಗೂ ಕನ್ನಮೇಡಿ ಗ್ರಾ.ಪಂ. ಜೊತೆಗೆ ನಾಗಲಮಡಿಕೆ ಹೋಬಳಿಯ ರ್ಯಾಪ್ಟೆ ಗ್ರಾಮ ಪಂಚಾಯ್ತಿಯಲ್ಲಿ ಗ್ರೇಡ್-2 ಕಾರ್ಯದರ್ಶಿಯೊಬ್ಬರು ಪಿ.ಡಿ.ಒ.ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

      ಸಿ.ಕೆ.ಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ್-2 ಕಾರ್ಯದರ್ಶಿ ಆದ ಸಂತೋಷ್ ಅವರನ್ನು ಇಲ್ಲಿನ ತಾ.ಪಂ.ಈ.ಒ.ನಿಯೋಜನೆ ಮಾಡಿದ್ದಾರೆ ಎನ್ನಲಾಗಿದೆ. ಸದರಿ ಪಿ.ಡಿ.ಒ.ದೂರದ ನಾಗಲಮಡಿಕೆ,ರ್ಯಾಪ್ಟೆ,ನಿಡಗಲ್ ಹೋಬಳಿಯ ಸಿ.ಕೆಪುರ ಹಾಗೂ ಕನ್ನಮೇಡಿ ಗ್ರಾ.ಪಂ.ಗೆ ಒಬ್ಬರೇ ಕಾರ್ಯ ನಿರ್ವಹಿಸುವುದು ಎಷ್ಟು ಸಮಂಜಸ ಎಂದು ಪ್ರಜ್ಞಾವಂತ ನಾಗರಿಕರು ದೂರಿದ್ದಾರೆ.

      ಸಿ.ಕೆ.ಪುರ ಗ್ರಾಮ ಪಂಚಾಯ್ತಿಗೆ ಪಿ.ಡಿ.ಒ.ಪರೀಕ್ಷೆಯಲ್ಲಿ ಪಾಸಾದ ಅಧಿಕಾರಿಯನ್ನು ನೇಮಿಸುವಂತೆ ಜಿ.ಪಂ.ಸಿ.ಇ.ಒ ರವರಿಗೆ ಜನತೆ ಮನವಿ ಮಾಡಿದ್ದು ಜನರ ನೋವಿಗೆ ಕಿವಿಯಾಗುವ ಅಧಿಕಾರಿಯನ್ನು ನೇಮಿಸುವಂತೆ ನಾಗರೀಕರು ಜಿ.ಪಂ.ಗೆ ಮನವಿ ಮಾಡಿದ್ದಾರೆ.

(Visited 15 times, 1 visits today)

Related posts

Leave a Comment