BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಡಾ. ಬಾಬು ಜಗಜೀವನ ರಾಂ ೪೦ನೇ ಪುಣ್ಯಸ್ಮರಣೆ
  • ಬೋಟಿಂಗ್ ಟೆಂಡರ್ ಸ್ಥಳೀಯರಿಗೆ ನೀಡುವಂತೆ ಆಗ್ರಹ
  • ಮಕ್ಕಳೊಂದಿಗೆ ಬಿಸಿ ಊಟ ಸವಿದ ಜಿ.ಪಂ ಸಿಇಒ
  • ವಿಶೇಷ ಚೇತನರಿಂದ ಎಸ್‌ಐಆರ್ ಕುರಿತು ಜಾಗೃತಿ ಜಾಥಾ
  • ಗ್ರಾಮೀಣಾಭಿವೃದ್ಧಿಗೆ ಸಹಕಾರ ತತ್ವವೇ ಬುನಾದಿ
  • ಪ್ರತಿವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದರೂ ನ್ಯಾಯಾಲಯಗಳಲ್ಲಿ ಬಾಕಿ
  • ಆರೋಗ್ಯಕರ ಬದುಕಿಗೆ ಕಲೆಯಂತಹ ಹವ್ಯಾಸಗಳು ಅವಶ್ಯಕ
  • ವರದಿಯ ನಂತರ ಹೆದ್ದಾರಿ ಬದಿಯಲ್ಲಿ ಎತ್ತರದ ಶಾಶ್ವತ ತಡೆಗೋಡೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಹಿರಿಯರು ಕಟ್ಟಿದ ಕೆರೆಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿ : ಡಾ.ಜಿ.ಪರಮೇಶ್ವರ್
ತುಮಕೂರು

ಹಿರಿಯರು ಕಟ್ಟಿದ ಕೆರೆಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿ : ಡಾ.ಜಿ.ಪರಮೇಶ್ವರ್

By News Desk BenkiyabaleUpdated:October 04, 2023 4:09 pm

ತುಮಕೂರು


ಊರಿನ ಅನುಕೂಲಕ್ಕಾಗಿ ರಾಜಮಹಾರಾಜರು, ಗ್ರಾಮಸ್ಥರು ಆಗ ಕಟ್ಟಿದ್ದ ಕೆರೆಗಳನ್ನು ಸಂರಕ್ಷಣಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಕಾಪಾಡಲು ಕೆರೆಗಳ ಉಳಿವು ಅತ್ಯಗತ್ಯ ಎಂದು ಗೃಹ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಉಪ್ಪಾರಹಳ್ಳಿ ಕೆರೆ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ನಗರದ ಉಪ್ಪಾರಹಳ್ಳಿ ಕೆರೆ ಆವರಣದಲ್ಲಿ ಬುಧವಾರ ನಡೆದ ನಮ್ಮೂರ ನಮ್ಮ ಕೆರೆ ಎಂಬ ಕೆರೆ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ತಮ್ಮೂರಿನ ಕೆರೆ ಉಳಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿ ಅವರ ಸಹಭಾಗವಹಿಸುವಿಕೆಯೊಂದಿಗೆ ಕೆರೆಗಳ ಪುನಶ್ಚೇತನ ಮಾಡಿ ಸಂರಕ್ಷಣೆ ಮಾಡುವ ಧರ್ಮಸ್ಥಳ ಸಂಸ್ಥೆಯ ಸೇವೆ ಶ್ಲಾಘನೀಯ ಎಂದರು.
ಮಹಿಳೆಯರಿಗೆ ºಣಕಾಸಿನ ಸಾಲ ನೀಡುವುದು, ಅವರಲ್ಲಿ ಉಳಿತಾಯ ಮನೋಭಾವ ಬೆಳೆಸುವುದು, ಸ್ವಯಂ ಉದ್ಯೋಗ ಆರಂಭಿಸಿ ಹೆಣ್ಣುಮಕ್ಕಳನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವುದು, ಸಂಸಾರದ ನೆಮ್ಮದಿ ಕೆಡಿಸುವ ಕುಡಿತದ ಚಟ ಬಿಡಿಸಲು ಅನೇಕ ಮದ್ಯವ್ಯಸನ ಶಿಬಿರ ಆಯೋಜಿಸಿ, ಕುಡಿತದ ಚಟ ಬಿಡಿಸಿ ಸಂಸಾರಗಳ ನೆಮ್ಮದಿಗೆ ನೆರವಾಗುವಂತಹ ಅನೇಕ ಜನಪರ ಯೋಜನೆಗಳನ್ನು ಮಾಡಿ ಧರ್ಮಸ್ಥಳ ಸಂಸ್ಥೆ ಜನಮನ್ನಣೆ ಪಡೆದಿದೆ. ಕೆರೆಗಳ ಪುನಶ್ಚೇತನ, ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮೂಲಕ ಜನರಿಗೆ ಅನುಕೂಲ ಮಾಡುವ ಸಂಸ್ಥೆ ಸರ್ಕಾರ ಮಾಡಲಾಗದ ಅನೇಕ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಮಾಡಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆರೆಗಳ ಪುನಶ್ಚೇತನ ಕಾರ್ಯ ಕಠಿಣ ಕೆಲಸ, ಆದರೂ ಧರ್ಮಸ್ಥಳ ಸಂಸ್ಥೆ ರಾಜ್ಯದಲ್ಲಿ ೬೨೬ಕ್ಕೂ ಹೆಚ್ಚು ಕೆರೆಗಳ ಹೂಳು ತೆಗೆದು, ಏರಿ ಭದ್ರಗೊಳಿಸಿ ಕೆರೆಗಳ ಪುನಶ್ಚೇತನ ಮಾಡಿ ನೀರು ಸಂಗ್ರಹವಾಗಲು ಅನುಕೂಲ ಮಾಡಿದೆ. ಇಂತಹ ಅನೇಕ ಸೇವಾ ಕಾರ್ಯಗಳ ನೇತೃತ್ವ ವಹಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರಿಗೆ ಅರ್ಹವಾಗಿಯೇ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿ ಗೌರವಿಸಿದೆ ಎಂದು ಸಚಿವರು ಹೇಳಿದರು.
ಉಪ್ಪಾರಹಳ್ಳಿ ಕೆರೆ ಜಾಗವನ್ನು ಸರ್ವೆ ಮಾಡಿ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಗಡಿ ನಿಗಧಿಗೊಳಿಸಿ, ಅಗತ್ಯ ಸೌಲಭ್ಯ ಒದಗಿಸಿ ಎಂದು ಸಚಿವ ಡಾ.ಪರಮೇಶ್ವರ್ ಅವರು ನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಸೂಚಿಸಿದರು.
ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೆರೆಗಳಲ್ಲಿ ನಾವು ಮುಳುಗುವ ಸಾಧ್ಯತೆಗಳಿವೆ. ಆದರೆ ಈಗ ಕೆರೆಯನ್ನೇ ಮುಳಗಿಸುವವರಿದ್ದಾರೆ. ಕೆರೆಗಳನ್ನು ರಕ್ಷಣೆ ಮಾಡಬೇಕು. ನಾಗರೀಕತೆ ಬೆಳೆದಂತೆ ನಿಸರ್ಗ ನಾಶವಾಗುತ್ತಿದೆ. ಪ್ರಕೃತಿ ಸಂಪತ್ತನ್ನು ಬೆಳೆಸುವುದರೊಂದಿಗೆ ನಾವೂ ಬೆಳೆಯಬೇಕು. ಉತ್ತಮ ಪರಿಸರ ಕಾಪಾಡಬೇಕು ಎಂಬ ಜವಾಬ್ದಾರಿ ಎಲ್ಲರಲ್ಲೂ ಮೂಡಬೇಕು. ಸರ್ಕಾರ ಮಾಡುವ ರೀತಿಯಲ್ಲಿ ಅನೇಕ ಸಮಾಜಮುಖಿ ಕಾರ್ಯ ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆಯನ್ನು ಛಾಯಾ ಸರ್ಕಾರ ಎಂದು ಸ್ವಾಮೀಜಿ ಬಣ್ಣಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿAದ ಕ್ರಾಂತಿಕಾರಕ ಕೆಲಸಗಳಾಗುತ್ತಿವೆ. ಲಕ್ಷಾಂತರ ಮಹಿಳೆಯರಿಗೆ ಕಿರು ಸಾಲ ನೀಡಿ ಅವರು ಆರ್ಥಿಕ ಚಟುವಟಿಕೆ ನಡೆಸಿ ಸ್ವಾವಲಂಬಿಯಾಗಿ ಬಾಳಲು ಸಹಕಾರ ನೀಡುತ್ತಿದೆ. ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆಗಳ ಪುನಶ್ಚತನಕ್ಕೆ ಒತ್ತು ನೀಡುತ್ತಾ ನಮ್ಮ ಸಂಸ್ಕೃತಿ, ಜೀವನ ಕ್ರಮವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.
ಉಪ್ಪಾರಹಳ್ಳಿ ಕೆರೆಯನ್ನು ಧರ್ಮಸ್ಥಳ ಸಂಸ್ಥೆ ಪುನಶ್ಚತನಗೊಳಿಸಿದರೆ ಅದರ ಮುಂದುವರೆದ ಕಾರ್ಯಕ್ರಮವಾಗಿ ಕೆರೆಯ ಒತ್ತುವರಿ ತೆರವುಗೊಳಿಸಿ, ಕೆರೆ ಅಂಗಳದ ಸುತ್ತ ಫೆನ್ಸಿಂಗ್, ವಾಕಿಂಗ್ ಟ್ರಾಕ್ ಮಾಡಲು ಸಚಿವ ಡಾ.ಪರಮೇಶ್ವರ್ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆರೆಯನ್ನು ಸ್ವಚ್ಛವಾಗಿಟ್ಟುಕೊಂಡು ಉತ್ತಮ ಪರಿಸರ ಕಾಪಾಡಿಕೊಳ್ಳುವಂತೆ ಶಾಸಕರು ನಾಗರೀಕರಿಗೆ ಮನವಿ ಮಾಡಿದರು.
ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಪಾಲಿಕೆ ಸದಸ್ಯರಾದ ಮುಜಿದಾ ಖಾನಂ, ಶಿವರಾಂ, ವಿಷ್ಣುವರ್ಧನ್, ಆಯುಕ್ತೆ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ಜಿಲ್ಲಾ ನಿರ್ದೇಶಕಿ ಜಯಶೀಲಾ, ಯೋಜನಾಧಿಕಾರಿ ಸುನಿತಾ ಪ್ರಭು, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಶೋತ್ತಮ್ ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)
Chikkanayakanahalli crime Gubbi kodigenahalli Mla mlc r.rajendra Protest tumkur Tumkur dc yspatil
Previous Articleತುಮಕೂರು ರಿಸರ್ಚ್ ಫೌಂಡೇಶನ್ ಉದ್ಘಾಟನೆ
Next Article ಜನಾಗ್ರಹ ಚಳಿವಳಿ : ಅ.೭ ರಂದು ಪ್ರತಿಭಟನೆ ಮತ್ತು ಮೆರವಣಿಗೆ
News Desk Benkiyabale

Related Posts

ಡಾ. ಬಾಬು ಜಗಜೀವನ ರಾಂ ೪೦ನೇ ಪುಣ್ಯಸ್ಮರಣೆ

July 06, 2026 5:50 pm news

ಬೋಟಿಂಗ್ ಟೆಂಡರ್ ಸ್ಥಳೀಯರಿಗೆ ನೀಡುವಂತೆ ಆಗ್ರಹ

July 06, 2026 5:48 pm news

ಮಕ್ಕಳೊಂದಿಗೆ ಬಿಸಿ ಊಟ ಸವಿದ ಜಿ.ಪಂ ಸಿಇಒ

July 06, 2026 5:47 pm news
ತಾಜಾ ಸುದ್ಧಿಗಳು

ಡಾ. ಬಾಬು ಜಗಜೀವನ ರಾಂ ೪೦ನೇ ಪುಣ್ಯಸ್ಮರಣೆ

July 06, 2026 5:50 pm

ಬೋಟಿಂಗ್ ಟೆಂಡರ್ ಸ್ಥಳೀಯರಿಗೆ ನೀಡುವಂತೆ ಆಗ್ರಹ

July 06, 2026 5:48 pm

ಮಕ್ಕಳೊಂದಿಗೆ ಬಿಸಿ ಊಟ ಸವಿದ ಜಿ.ಪಂ ಸಿಇಒ

July 06, 2026 5:47 pm

ವಿಶೇಷ ಚೇತನರಿಂದ ಎಸ್‌ಐಆರ್ ಕುರಿತು ಜಾಗೃತಿ ಜಾಥಾ

July 04, 2026 5:05 pm

ಗ್ರಾಮೀಣಾಭಿವೃದ್ಧಿಗೆ ಸಹಕಾರ ತತ್ವವೇ ಬುನಾದಿ

July 04, 2026 4:20 pm

ಪ್ರತಿವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದರೂ ನ್ಯಾಯಾಲಯಗಳಲ್ಲಿ ಬಾಕಿ

July 04, 2026 4:18 pm
Our Youtube Channel
Our Picks

ಡಾ. ಬಾಬು ಜಗಜೀವನ ರಾಂ ೪೦ನೇ ಪುಣ್ಯಸ್ಮರಣೆ

July 06, 2026 5:50 pm

ಬೋಟಿಂಗ್ ಟೆಂಡರ್ ಸ್ಥಳೀಯರಿಗೆ ನೀಡುವಂತೆ ಆಗ್ರಹ

July 06, 2026 5:48 pm

ಮಕ್ಕಳೊಂದಿಗೆ ಬಿಸಿ ಊಟ ಸವಿದ ಜಿ.ಪಂ ಸಿಇಒ

July 06, 2026 5:47 pm

ವಿಶೇಷ ಚೇತನರಿಂದ ಎಸ್‌ಐಆರ್ ಕುರಿತು ಜಾಗೃತಿ ಜಾಥಾ

July 04, 2026 5:05 pm

ಗ್ರಾಮೀಣಾಭಿವೃದ್ಧಿಗೆ ಸಹಕಾರ ತತ್ವವೇ ಬುನಾದಿ

July 04, 2026 4:20 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಡಾ. ಬಾಬು ಜಗಜೀವನ ರಾಂ ೪೦ನೇ ಪುಣ್ಯಸ್ಮರಣೆ

By News Desk BenkiyabaleJuly 06, 2026 5:50 pm

ತುಮಕೂರು: ಹಸಿರು ಕ್ರಾಂತಿಯ ಹರಿಕಾರ, ರಾಷ್ಟçನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ…

ಬೋಟಿಂಗ್ ಟೆಂಡರ್ ಸ್ಥಳೀಯರಿಗೆ ನೀಡುವಂತೆ ಆಗ್ರಹ

July 06, 2026 5:48 pm

ಮಕ್ಕಳೊಂದಿಗೆ ಬಿಸಿ ಊಟ ಸವಿದ ಜಿ.ಪಂ ಸಿಇಒ

July 06, 2026 5:47 pm

ವಿಶೇಷ ಚೇತನರಿಂದ ಎಸ್‌ಐಆರ್ ಕುರಿತು ಜಾಗೃತಿ ಜಾಥಾ

July 04, 2026 5:05 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.