ಪಟ್ಟನಾಯಕನಹಳ್ಳಿ: ಜನ್ಮ ಕೊಟ್ಟ ತಂದೆ-ತಾಯಿ, ವಿದ್ಯೆ ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಜ್ಞಾನವನ್ನು ನೀಡುವ ಗುರುಗಳನ್ನು ನಮ್ಮ ಬದುಕಿನಲ್ಲಿ ಆದರ್ಶವಾಗಿಟ್ಟುಕೊಂಡು ಮುನ್ನಡೆ ದಾಗ ಯಶಸ್ಸು ತಾನಾಗಿಯೇ ಲಭಿಸಲಿದೆ ಎಂದು ನಾರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಹೇಳಿದರು.
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಚಂಗಾವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿ.ಜಿ. ಮಂಜುನಾಥ್ ರವರಿಗೆ ಬೀಳ್ಕೊಡುಗೆ ಮತ್ತು ಗುರುವಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ
ಜ್ಞಾನ ಎಂಬ ವಿದ್ಯ ನೀಡಿ ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಯಾಗಿ ಬದುಕಲು ದಾರಿದೀಪವಾದ ಶಿಕ್ಷಕರು ದೈವ ಸ್ವರೂಪಿಗಳು ಎಂದರು.
ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಮಾತನಾಡಿ ಹಲವಾರು ದಶಕ ಗಳಿಂದ ಚಂಗಾವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಕಲಿಸಿ ಯಶಸ್ವಿ ವ್ಯಕ್ತಿಗಳಾಗಿ ರೂಪಿಸಿದ ಮುಖ್ಯ ಶಿಕ್ಷಕರಾದ ಪಿ.ಜಿ. ಮಂಜುನಾಥ್ ರವರ ಸೇವೆ ಅವಿಸ್ಮರಣೀಯ ಎಂದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವ ಹಣಾಧಿಕಾರಿ ಆರ್. ಹರೀಶ್ ಮಾತನಾಡಿ ತಾನು ಕಲಿತ ಶಾಲೆಗೆ ಏನಾದರೂ ಸಹಾಯ ಮಾಡಬೇಕು, ಗುರುವಿನ ಋಣ ತೀರಿಸಬೇಕೆಂಬ ಸಂಕಲ್ಪದೊAದಿಗೆ ಹಳೆ ವಿದ್ಯಾರ್ಥಿಗಳು ಮುನ್ನಡೆದಾಗ ಸರ್ಕಾರಿ ಶಾಲೆಗಳು ಸಮೃದ್ಧಿ ಕಾಣಲಿವೆ, ವಿದ್ಯೆ ಕಲಿಸಿದ ಗುರುವಿನ ಋಣ, ಜನ್ಮ ನೀಡಿದ ತಂದೆ ತಾಯಿಯ ಋಣ ಎಂದು ಮರೆಯಲು ಸಾಧ್ಯವಿಲ್ಲ. ಗುರು ಹಿರಿಯರನ್ನು ಗೌರವಿಸುವಂತಹ ಸಂಸ್ಕಾರ ತಮ್ಮ ಮಕ್ಕಳಿಗೂ ಕಲಿಸಬೇಕು ಎಂದರು.
ಖ್ಯಾತ ಅಂತರಾಷ್ಟ್ರೀಯ ಜನಪದ ಗಾಯಕ ಗೋ ನಾ ಸ್ವಾಮಿ ಮಾತನಾಡಿ ತಾವು ಎಷ್ಟೇ ಎತ್ತರಕ್ಕೆ ಬೆಳೆದರೂ ವಿದ್ಯೆ ಕಲಿಸಿದ ಗುರುವನ್ನು ಯಾವತ್ತಿಗೂ ಮರೆಯಬಾರದು ಎಂದರು.
ಚಂಗಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಡಲಗಿರಿಯಪ್ಪ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ. ಗೋಪಾಲಕೃಷ್ಣ, ಮಾಜಿ ಅಧ್ಯಕ್ಷೆ ಈರ ಸಿದ್ದಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ನಾಗರಾಜ್, ಕಾಡುಗೊಲ್ಲ ಅಭಿ ವೃದ್ಧಿ ನಿಗಮ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಕನಕಪ್ಪ, ಮುಖಂಡ ಡಿ ಎಂ ಪಿ ಕರಿಯಪ್ಪ, ಸಮಾಜ ಸೇವಕ ಮಂಟೆ ಲಿಂಗಚಾರಿ, ಬರಗೂರು ಬಾಲಕೃಷ್ಣ, ರಾಮಕೃಷ್ಣ, ಪಿ ಡಿ ಓ ಸತೀಶ್, ಜಿ ವಿ ಕೆ ಗೌಡ, ನಿವೃತ್ತ ಶಿಕ್ಷಕ ಕೃಷ್ಣಪ್ಪ, ಆತ್ಮರಾಮ್, ಪ್ರಧಾನ ಮುಖ್ಯ ಶಿಕ್ಷಕ ಎನ್. ಕೃಷ್ಣಮೂರ್ತಿ, ಶಿಕ್ಷಕ ಮಹಾಲಿಂಗಪ್ಪ ಸೇರಿದಂತೆ ಹಲವಾರು ಮುಖಂಡರು ಹಳೆ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು.
(Visited 1 times, 1 visits today)