ತುಮಕೂರು: ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋ ಲನ-ಕರ್ನಾಟಕದ ಸಂಚಾಲಕರಾದ ಎ.ನರ ಸಿಂಹಮೂರ್ತಿರವರ ೫೦ನೇ ವರ್ಷದ ಜನ್ಮದಿ ನದ ಅಂಗವಾಗಿ ಕ್ಯಾತ್ಸಂದ್ರ ಎಳ್ಳರಬಂಡೆ, ಮಾರಿಯಮ್ಮ ನಗರ, ಸ್ಲಂ ಭವನದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ, ಅನ್ನದಾನ, ಸ್ನೇಹಕೂಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರಾಜ್ಯದಲ್ಲಿ ಸ್ಲಂ ಜನರನ್ನು ಸಂವಿಧಾನದ ಆಶ ಯದೊಂದಿಗೆ ಕಳೆದ ೨೫ನೇ ವರ್ಷಗಳಿಂದ ಸ್ಲಂ ಜನಾಂದೋಲನ ಕರ್ನಾಟಕದ ಕಾರ್ಯದರ್ಶಿ ಯಾಗಿ, ಸಂಚಾಲಕರಾಗಿ ಜವಾಬ್ದಾರಿ ತೆಗೆದು ಕೊಂಡು ಸ್ಲಂ ಜನರ ಸಂಘಟನೆಗೆ ಅವಿರತವಾಗಿ ಶ್ರಮಿಸಿ, ಹಲವಾರು ಯಶಸ್ಸುಕಂಡು ರಾಜ್ಯದಲ್ಲಿ ಸ್ಲಂ ಜನರ ಧ್ವನಿಯಾಗಿ ಸ್ಲಂ ಜನರ ಭೂಮಿ, ವಸತಿ ಹೋರಾಟಗಳು ಹಲವಾರು ಜಿಲ್ಲೆಗಳಲ್ಲಿ ಕಾಲಕಾಲಕ್ಕೆ ಹಮ್ಮಿಕೊಳ್ಳುತ್ತ ನಗರಗಳ ಮೇಲಿನ ಹಕ್ಕನ್ನು ಸ್ಪಾಪಿಸಲು ನಗರವಂಚಿತ ಸಮುದಾಯಗಳು ಮುಂದಾಗಿರುವುದು ಶ್ಲಾಘನೀಯವಾದದ್ದು ಹಗಲು ರಾತ್ರಿಯನ್ನದೆ ರಾಜ್ಯಾದ್ಯಂತ ಸ್ಲಂ ಜನರನ್ನು ಎ.ನರಸಿಂಹಮೂರ್ತಿ ಸಂಘಟಿಸಿರುವುದು ಮತ್ತು ಜಾಗೃತರನ್ನಾಗಿಸುತ್ತಿರುವುದು ಅಭಿನಂದನೀಯ ವಾಗಿದೆ ಎಂದು ಉಪಾದ್ಯಕ್ಷರಾದ ದೀಪಿಕಾ ಹೇಳಿದ್ದರು.
ಮಾಜಿ ಶಾಸಕರಾದ ಡಾ. ರಫೀಕ್ ಅಹ್ಮದ್ ಶುಭ ಹಾರೈಸಿ ಮಾತನಾಡಿ ಅರ್ಧ ದಶಕ ಪೂರೈಸಿರುವ ಎ.ನರಸಿಂಹಮೂರ್ತಿ ರಾಜ್ಯದಲ್ಲಿ ನಮ್ಮ ನಗರ ವಂಚಿತ ಸಮುದಾಯ ಗಳೊಡನೆ ತಾವು ನಿಮ್ಮ ಬದುಕಿನ ಅಮೂಲ್ಯ ವಾದ ಕ್ಷಣಗಳನ್ನು ಕಳೆದಿರುವುದು ಶ್ನಾಘ ನೀಯ ಮುಂದಿನ ಕಿರಿಯ ಪೀಳಿಗೆಗೆ ಎ. ನರಸಿಂಹಮೂರ್ತಿಯವರ ಹೋರಾಟ ಅನುಕ ರಣೀಯವಾದುದ್ದು ನಗರದಲ್ಲಿ ಸ್ಲಂ ಜನರಿಗೆ ಸಾಮಾಜಿಕ ನ್ಯಾಯ ಸಮಾನತೆಗಾಗಿ ಹೋರಾ ಡುತ್ತಿರುವ ನಿಮಗೆ ಇನ್ನಷ್ಟ್ಟು ಶಕ್ತಿ ಬರಲಿ ಎಂದು ಶುಭ ಹಾರೈಯಿಸಿದರು.
ನಗರದ ವಿವಿಧ ಸ್ಲಂಗಳಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ ಮತ್ತು ಮಾರಿಯಮ್ಮ ನಗರದ ಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಅಧ್ಯಕ್ಷರಾದ ಎ.ನರಸಿಂಹಮೂರ್ತಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಪದಾಧಿಕಾರಿಗಳಾದ ಕಣ್ಣನ್, ಅರುಣ್, ಶಂಕ್ರಯ್ಯ, ಜಾಬೀರ್ಖಾನ್, ,ತಿರುಮಲಯ್ಯ, ಧನಂಜಯ್, ಕೃಷ್ಣಮೂರ್ತಿ, ಮೋಹನ್.ಮುಬಾರಕ್, ಶಾಬುದ್ದೀನ್, ಅಶ್ವತ್, ವೆಂಕಟೇಶ್ ಹಾಗೂ ಸಾವಿತ್ರಿ ಬಾಯಿಪುಲೆ ಮಹಿಳಾ ಘಟಕದ ಅನುಪಮಾ, ಮಂಗಳಮ್ಮ, ಹನುಮಕ್ಕ, ಪೂರ್ಣಿಮಾ ಮುಂತಾದವರು ಪಾಲ್ಗೊಂಡಿದ್ದರು,
(Visited 1 times, 1 visits today)