BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ
  • ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ
  • ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ
  • ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ
  • ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ
  • ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್
  • ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ
  • ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜಿಲ್ಲೆಯ ರೈತರಿಗೆ ಮರಣ ಶಾಸನವಾದ ಲಿಂಕ್ ಕೆನಾಲ್
ತುಮಕೂರು

ಜಿಲ್ಲೆಯ ರೈತರಿಗೆ ಮರಣ ಶಾಸನವಾದ ಲಿಂಕ್ ಕೆನಾಲ್

ಅವೈಜ್ಞಾನಿಕ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ರೈತರಿಂದ ಹೋರಾಟದ ಎಚ್ಚರಿಕೆ
By News Desk BenkiyabaleUpdated:May 29, 2025 4:16 pm

ತುರುವೇಕೆರೆ: ಜಿಲ್ಲೆಯ ರೈತರಿಗೆ ಮರಣ ಶಾಸನದಂತಾಗಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಅವೈಜ್ಞಾನಿಕ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಲಿಂಕ್ ಕೆನಾಲ್ ಕಾಮಗಾರಿಯಿಂದ ಜಿಲ್ಲೆಯ ಏಳೆಂಟು ತಾಲ್ಲೂಕಿಗೆ ದೊಡ್ಡ ಅಪಾಯವಾಗಲಿದೆ. ಕುಣಿಗಲ್ ತಾಲ್ಲೂಕಿಗೆ ನೀರು ಹರಿಸಬೇಕೆಂದರೆ ಮೂಲ ನಾಲೆಯ ಮೂಲಕ ತೆಗೆದುಕೊಂಡು ಹೋಗಲಿ ನಮ್ಮದ್ದು ಯಾವುದೇ ಅಭ್ಯಂತರವೇನಿಲ್ಲ. ಆದರೆ ನೀವು ಲಿಂಕ್ ಕೆನಾಲ್ ಮಾಡಿ ಪೈಪ್ ಗಳನ್ನು ಮೂಲಕ ನೀರನ್ನು ತೆಗೆದುಕೊಂಡು ಹೋದಲ್ಲಿ ಜಿಲ್ಲೆಯ ಏಳೆಂಟು ತಾಲ್ಲೂಕುಗಳಿಗೆ ಮರಣ ಶಾಸನವಾಗಲಿದೆ. ಕೂಡಲೇ ಈ ಕಾಮಗಾರಿಯನ್ನು ಸರ್ಕಾರ ವಾಪಸ್ ಪಡೆಯಬೇಕೆಂದು ನಾವುಗಳು ಒತ್ತಾಯ ಮಾಡುತ್ತೇವೆ ಎಂದರು.
ಸುಮಾರು ಒಂದೂವರೆ ವರ್ಷದಿಂದಲೂ ನಾವುಗಳು ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ. ನೀವು ೭೦ನೇ ಕಿ.ಮೀ.ನಲ್ಲಿ ೫೦೦ ಕ್ಯೂಸೆಕ್ಸ್ ನೀರನ್ನು ಕುಣಿಗಲ್ ಭಾಗಕ್ಕೆ ಹರಿಸಿದರೆ ಇನ್ನು ಏಳು ತಾಲ್ಲೂಕಿಗೆ ೬೦೦ ಕ್ಯುಸೆಕ್ಸ್ ನೀರು ಹರಿಸಲಿಕ್ಕೆ ಹೋದಲ್ಲಿ ಬಹಳ ವೇಗವಾಗಿ ಎತ್ತರಕ್ಕೆ ಹರಿಯಲು ಉಪನಾಲೆಗಳಿಗೆ ಅವಕಾಶವಿಲ್ಲದಂತಾಗುತ್ತದೆ. ಸರ್ಕಾರ ಹತ್ತಾರು ಕೋಟಿ ಖರ್ಚು ಮಾಡಿ ಮಾಡಿದಂತ ನಾಲೆಗಳು ಅನುಕೂಲವಿಲ್ಲದಂತಾಗುತ್ತವೆ. ಹಾಗಾಗಿ ಈ ಕಾಮಗಾರಿಯನ್ನು ಕೈಬಿಡಬೇಕು. ಕೆಲವೇ ಮಂದಿ ರಾಜಕಾರಣಿಗಳು ಹಾಗೂ ಗುತ್ತಿಗೆದಾರರಿಗೆ ಅನುಕೂಲ ಮಾಡುವ ಸಲುವಾಗಿ ತೆರಿಗೆಯ ಸಾರ್ವಜನಿಕರ ೧೧೦೦ಕೋಟಿ ಹಣವನ್ನು ವ್ಯಯ ಮಾಡದೆ ಕುಣಿಗಲ್ ತಾಲ್ಲೂಕಿನಲ್ಲಿ ಅಗತ್ಯವಿರುವಂತ ಬೇರೆ ಕಾಮಗಾರಿಗಳಿಗೆ ಬಳಸಿ ಈಗಿರುವ ಮೂಲ ನಾಲೆಯ ಮೂಲಕವೇ ಕುಣಿಗಲ್ ಹಾಗೂ ಮಾಗಡಿಗೆ ನೀರನ್ನು ಹರಿಸಿ ಎಂದು ಮನವಿ ಮಾಡುತ್ತೇವೆ. ರಾಜ್ಯ ಸರ್ಕಾರ ಇಂದು ಯಾವುದೇ ಒಂದು ನಾಲೆಯನ್ನು ತೆಗೆದುಕೊಂಡು ಹೋಗಬೇಕಾದಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳಾಗಬೇಕು. ಆದರೆ ಈ ಯಾವುದೇ ಭೂಸ್ವಾಧೀನ ಪ್ರಕ್ರಿಯೆಗಳಿಲ್ಲದೆ ಅಕ್ರಮವಾಗಿ ಇಂದು ಸುಂಕಾಪುರದ ಬಳಿ ಕಾಮಗಾರಿ ಪ್ರಾರಂಬಿಸಿದ್ದೀರಿ. ಇದನ್ನ ವಿರೋದಿಸಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರನ್ನು ತಾವು ಬಂದಿಸಿದ್ದೀರಿ. ಅಕ್ರಮವಾಗಿ ಭೂಸ್ವಾಧೀನ ಪ್ರಕ್ರಿಯೆಯಿಲ್ಲದೆ ಕೆಲಸ ಮಾಡುತ್ತಿರುವಂತ ಗುತ್ತಿಗೆದಾರರಿಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಸರ್ಕಾರ ಅವರಿಗೆ ರಕ್ಷಣೆ ಕೊಡುತ್ತಿದೆ. ಈ ನೀತಿಯನ್ನು ವಿರೋಧ ಮಾಡದೆ ಅನೇಕ ಮೌನ ಶಾಸಕರ ನಡೆಯನ್ನು ಖಂಡಿಸಿ ಎಲ್ಲ ಪಕ್ಷಗಳ ಮುಖಂಡರು, ಹಲವಾರು ಸಂಘ ಸಂಸ್ಥೆಗಳ ಮಠಾಧೀಶರು, ಮಹಿಳಾ ಸಂಘಟನೆಗಳು ಒಗ್ಗೂಡಿ ಒಂದು ಹೋರಾಟ ಸಮಿತಿಯನ್ನು ಮಾಡಿದ್ದು ಆ ವೇದಿಕೆ ಮುಖಾಂತರ ಸರ್ಕಾರದ ಈ ನಡೆಯನ್ನು ಖಂಡಿಸಿ ಗುಬ್ಬಿ ತಾಲ್ಲೂಕು ೭೦ನೇ ಕಿ.ಮೀ.ನ ಸುಂಕಾಪುರದ ಬಳಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಸರ್ಕಾರಕ್ಕೆ ಎಚ್ಚರಿಸಲು ಮೇ.೩೧ರಂದು ಬೆಳಿಗ್ಗೆ ೧೦ಗಂಟೆಗೆ ಬೃಹತ್ ಮಟ್ಟದಲ್ಲಿ ಪ್ರತಿಭಟನಾ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಆ ಸಭೆಗೆ ಪಕ್ಷಾತೀತವಾಗಿ ಶಾಸಕರು, ಮಾಜಿ ಶಾಸಕರು, ಮಠಾಧೀಶರು ಸೇರಿದಂತೆ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ರೈತಪರ ಸಂಘಟನೆಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರೈತರು ಅಂದು ಸಭೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಂಡರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ ಲಿಂಕ್ ಕೆನಾಲ್ ನಿಂದ ರೈತರಿಗೆ ಯಾವುದೇ ರೀತಿಯಿಂದಲು ಅನುಕೂಲವಾಗುವುದಿಲ್ಲ. ಇದರ ಸಾದಕ ಬಾದಕಗಳನ್ನು ನೋಡುವುದಾದರೆ ಗುಬ್ಬಿ, ತುಮಕೂರು, ಶಿರಾ, ತುಮಕೂರು ಗ್ರಾಮಾಂತರ, ಚಿಕ್ಕನಾಯಕನಹಳ್ಳಿ , ತುರುವೇಕೆರೆ ತಾಲ್ಲೋಕಿನ ರೈತರಿಗೆಮರಣ ಶಾಸನ ಬರೆದಂತಿದೆ. ನೀರನ್ನು ತೆಗೆದುಕೊಂಡು ಹೋಗುವ ಬಗ್ಗೆ ಯಾವ ರೈತರ ತಕರಾರು ಇರುವುದಿಲ್ಲ. ಆದೇ ನೀರನ್ನು ಈಗೀರುವ ಕೆನಾಲ್ ನಲ್ಲಿ ತೆಗೆದುಕೊಂಡು ಹೋಗಿ ಎನ್ನುವುದಷ್ಟೆ ನಮ್ಮಗಳ ಒತ್ತಾಯ. ಆದರೆ ಕೆಲವು ಲಂಚ ಬಾಕ ರಾಜಕಾರಣಿಗಳು ತಮಗೆ ಬರುವ ಲಂಚದ ಹಣಕ್ಕೆ ಬೇಕಿಲ್ಲದ ಕಾಮಗಾರಿಗಳನ್ನು ಮಾಡುತ್ತಾ. ಅವರ ಮನಸೋ ಇಚ್ಚೆ ನಡೆದುಕೊಳ್ಳುತ್ತಿದ್ದಾರೆ. ಇದನ್ನು ಖಂಡಿಸಿ ೩೧ರ ಹೋರಾಟಕ್ಕೆ ನಮ್ಮ ತಾಲ್ಲೂಕಿನಿಂದಲೂ ಸಾವಿರಾರು ರೈತರು ಬಾಗವಹಿಸುವುದಾಗಿ ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ರೈತಸಂಘದ ತಾಲೂಕು ಪದಾಧಿಕಾರಿಗಳಾದ ರಹಮತ್, ಪುರುಶೋತ್ತಮ್, ರಾಜಶೇಖರ್, ರಾಜಣ್ಣ, ತಂಡಗ ಅಶೋಕ್, ಲಕ್ಕಸಂದ್ರ ಗೋವಿಂದರಾಜ್, ರವಿಕೀರ್ತೀ, ಜಯರಾಮಯ್ಯ, ರಂಗಸ್ವಾಮಿ, ಗುರುದತ್, ನಾಗರಾಜು, ಸಿಐಟಿಯು ಸಂಘದ ಸತೀಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಣ್ಣ, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮಾರುತಿ ಸೇರಿದಂತೆ ಇತರರು ಇದ್ದರು.

(Visited 1 times, 1 visits today)
tumkur
Previous Articleಪ.ಪಂ ಕಚೇರಿಗೆ ಜಿಲ್ಲಾ ಲೋಕಾಯುಕ್ತರ ಭೇಟಿ: ದೂರುಗಳ ಪರಿಶೀಲನೆ
Next Article ಮಣ್ಣಿನಿಂದ ಕೆಸರು ಗದ್ದೆಯಾದ ಡಾಂಬರ್ ರಸ್ತೆ
News Desk Benkiyabale

Related Posts

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm news
ತಾಜಾ ಸುದ್ಧಿಗಳು
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm
news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm
news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm
news

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
news

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
news

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm
Our Youtube Channel
Our Picks

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

By News Desk BenkiyabaleOctober 01, 2026 5:34 pm

ತುಮಕೂರು: ಪ್ರವಾದಿ ಮುಹಮ್ಮದ್(ಸ) ರವರ ಜೀವನ ಮತ್ತು ಸಂದೇಶಗಳನ್ನು ಯುವಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಮಾಆತೆ ಇಸ್ಲಾಮಿಕ್ ಹಿಂದ್ ಆಯೋಜಿಸಿರುವ…

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.