ತುರುವೇಕೆರೆ: ಸಾರ್ವಜನಿಕರು ನೀಡಿದ ದೂರುಗಳ ಪರಿಶೀಲನೆಗಾಗಿ ಜಿಲ್ಲಾ ಲೋಕಾ ಯುಕ್ತ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿಯವರು ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ಲೋಕಾಯುಕ್ತರಿಗೆ ಬಂದಿದ್ದ ದೂರು ಗಳ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಂ ಡಿದ್ದಾರೆಂದು ಪರಿವೀಕ್ಷಣೆ ಮಾಡಿದರು.ಈ ವೇಳೆ ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿಯ ಸಿಬ್ಬಂದಿಯೇ ತಮಗೆ ನೀಡಲಾಗಿದ್ದ ನಿವೇಶನದ ಬದಲಿಗೆ ಹೊಂದಿ ಕೊಂಡAತಿರುವ ಪಂಚಾಯಿತಿಯ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದಾರೆ ಎಂದು ರಂಗ ಸ್ವಾಮಿ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತದಿಂದ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದಾಗ್ಯೂ ಸಹ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂ ಡಿಲ್ಲವೆಂದು ಪುನಃ ರಂಗಸ್ವಾಮಿ ಉಪ ಲೋಕಾ ಯುಕ್ತರಿಗೇ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿ ತಮ್ಮ ಸಿಬ್ಬಂದಿ ಸಹಿತ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಮುಖ್ಯಾದಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಪಟ್ಟಣ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎನ್.ಶಿವರಾಜ್ ಎಂಬುವವರು ಪಟ್ಟಣದ ಸಹಕಾರಿ ಬ್ಯಾಂಕ್ ನಲ್ಲಿನ ಸಿಬ್ಬಂದಿಯೋರ್ವರು ಸುಮಾರು ೨೫ ಲಕ್ಷಕ್ಕೂ ಹೆಚ್ಚು ವಂಚನೆ ಮಾಡಿದ್ದರು. ಇದು ಸಾಬೀತು ಸಹ ಆಗಿತ್ತು. ವಸೂಲು ಕ್ರಮ ಕೈಗೊಳ್ಳುವ ವೇಳೆ ಸಿಬ್ಬಂದಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಡ್ಡಿ ಸೇರಿ ಇದುವರೆಗೂ ಸುಮಾರು ಐವತ್ತು ಲಕ್ಷಕ್ಕೂ ಹೆಚ್ಚು ಹಣ ಪಟ್ಟಣದ ಸಹಕಾರ ಬ್ಯಾಂಕ್ ಗೆ ಬರಬೇಕಿದೆ. ಆದರೆ ಈಗಿನ ಆಡಳಿತ ಮಂಡಲಿ ಸಿಬ್ಬಂದಿಯೊAದಿಗೆ ಒಳ ಒಪ್ಪಂದ ಮಾಡಿಕೊಂಡು ಅಸಲು ಕಟ್ಟಿಸಿಕೊಳ್ಳಲು ಮುಂದಾಗಿದೆ. ಇದರಿಂದಾಗಿ ಬ್ಯಾಂಕಿಗೆ ನಷ್ಠ ಉಂಟಾಗಲಿದೆ ಎಂದು ದೂರಿದರು. ಕೂಡಲೇ ಮಧ್ಯ ಪ್ರವೇಶಿಸಿ ಬ್ಯಾಂಕಿಗೆ ಬರಬೇಕಿರುವ ಎಲ್ಲಾ ಹಣವನ್ನೂ ವಸೂಲು ಮಾಡಿಸಬೇಕೆಂದು ಮನವಿ ಮಾಡಿದರು. ತಿಪಟೂರು ರಸ್ತೆಯ ಹರೀಶ್ ಸೇರಿದಂತೆ ಹಲವಾರು ಮಂದಿ ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸಿ ತಮ್ಮ ಸಮಸ್ಯೆಯನ್ನು ಲೋಕಾಯುಕ್ತರಲ್ಲಿ ಹೇಳಿಕೊಂಡರು.
(Visited 1 times, 1 visits today)