ತುಮಕೂರು: ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಭಾರತರತ್ನ ಪ್ರಶಸ್ತಿ ಪಡೆದ ಡಾ.ಭಿದಾನ್ ಚಂದ್ರರಾಯ್ ಅವರನ್ನು ಇಂದಿನ ವೈದ್ಯರು ಆದರ್ಶವಾಗಿಟ್ಟುಕೊಂಡು ಸೇವೆ ಮಾಡಬೇಕು. ೧೯೪೮-೧೯೬೨ ರವರೆಗೆ ಸುಮಾರು ೧೪ ವರ್ಷಗಳ ಕಾಲ ಭಾರತದ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು, ಇತಿಹಾಸದಲ್ಲಿ ಕೆಲವರು ತಮ್ಮ ಎಫ್.ಆರ್.ಸಿ.ಎಸ್. ಮತ್ತು ಎಂ.ಆರ್.ಸಿ.ಪಿ. ಏಕಕಾಲದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಪದವಿಯನ್ನು ಪಡೆದರು. ಉತ್ತಮ ಆರೋಗ್ಯ ಸೇವೆಗಳ ಜನಸಾಮಾನ್ಯರಿಗೆ ದೊರಕುವಂತೆ ಸೇವೆ ನಿರ್ವಹಿಸಬೇಕು. ಭಾರತದಲ್ಲಿ ರಾಷ್ಟಿçÃಯ ವೈದ್ಯರ ದಿನವನ್ನು ಪ್ರತಿ ವರ್ಷ ಜುಲೈ ೧ ರಂದು ಹುಟ್ಟಿದ ದಿನ ಮತ್ತು ಮರಣ ಹೊಂದಿದ ದಿನಾಂಕವನ್ನು ಆಚರಿಸಲಾಗುತ್ತದೆ ಎಂದು ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್.ಇ.ಡಿ.ರವರು ತಿಳಿಸಿದರು.
ನಗರದ ಶೆಟ್ಟಿಹಳ್ಳಿ ಹೊರವಲಯದ ಜಯನಗರ ದಕ್ಷಿಣದಲ್ಲಿರುವ ವರದರಾಜ ಚಾರಿಟಬಲ್ ಟ್ರಸ್ಟ್ನ ವತಿಯಿಂದ ವರದರಾಜ ನರ್ಸಿಂಗ್ ಕಾಲೇಜು ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟಿçÃಯ ವೈದ್ಯರ ದಿನಾಚರಣೆಯನ್ನು-೨೦೨೫ ಜಾಥಾವನ್ನು ಟೌನ್‌ಹಾಲ್ ಸರ್ಕಲ್‌ನಿಂದ ಆರಂಭವಾಗಿ ಎಸ್.ಎಸ್.ಪುರಂನ ಕಸ್ತೂರ್ಬಾ ಆಸ್ಪತ್ರೆಯವರೆಗೆ ಜಾಗೃತಿ ಜಾಥಾವನ್ನು ಜುಲೈ ೧ ರಂದು ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ನಡೆಸಲಾಗಿತ್ತು. ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುತ್ತಾ ಡಾ.ಚಂದ್ರಶೇಖರ್‌ರವರು ಮಾತನಾಡುತ್ತಾ “ವೈದ್ಯರು ಸಮಾಜದ ನಿಜವಾದ ನಾಯಕರು. ರೋಗಿಗಳ ಬದುಕಿಗೆ ಆಸೆ, ಆರೈಕೆ ಹಾಗೂ ಆರೋಗ್ಯ ನೀಡುವವರೇ ನಮ್ಮ ವೈದ್ಯರು. ಇವರ ಸೇವೆಯನ್ನು ಗುರುತಿಸಲು ಈ ದಿನ ಒಂದು ಸ್ಮರಣೆಯಾಗಿದೆ” ಎಂದರು.
ವರದರಾಜ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ವರುಣ್ ಅಸ್ರಣ್ಣರವರು ಮಾತನಾಡುತ್ತಾ ಹಿರಿಯರಾದ ಡಾ.ಬಿ.ಸಿ.ರಾಯ್‌ರವರು ಹಾಕಿಕೊಟ್ಟ ಮಾರ್ಗದರ್ಶನ, ಜೀವನ ಶೈಲಿ, ಸಮಾಜದ ರಾಜಕೀಯವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಗಣನೀಯ ಸೇವೆಗಳನ್ನು ಸ್ಮರಿಸುವುದು ಅದೇ ದಾರಿಯಲ್ಲಿ ನಮ್ಮ ವೈದ್ಯರು. ಡಾ.ಬಿ.ಸಿ.ರಾಯ್‌ರವರ ಬದುಕು ಮತ್ತು ಅವರು ಅನುಸರಿಸಿದ ಮಾರ್ಗಗಳು ವೈದ್ಯರಿಗೆ ದಾರಿದೀಪವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಕಸ್ತೂರ್ಬಾ ಆಸ್ಪತ್ರೆಯ ಸ್ತಿçÃರೋಗ ಮತ್ತು ಪ್ರಸ್ತೂತಿ ವಿಭಾಗದ ತಜ್ಞೆ ಡಾ. ಅಪೂರ್ವ ಅಸ್ರಣ್ಣರವರು ಮಾತನಾಡುತ್ತಾ ವೈದ್ಯರ ದಿನದ ನುಡಿಯಾದ “ಒಬ್ಬ ವೈದ್ಯನ ಒಬ್ಬ ದಿನದ ಸೇವೆ, ನೂರಾರು ಜನರ ಜೀವ ಉಳಿಸಬಹುದು”. ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ “ಆರೋಗ್ಯ ಎಂಬುದು ಧನದಕ್ಕಿಂತ ಶ್ರೇಷ್ಠವಾದ ಸಂಪತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವರದರಾಜ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ನ ನಿರ್ದೇಶಕರಾದ ಡಾ. ಮುಬಾರಕ್‌ರವರು ಮಾತನಾಡುತ್ತಾ ವರದರಾಜ ಸಂಸ್ಥೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ನಿರಂತರ ಪ್ರಯತ್ನಿಸುತ್ತಿವೆ. ನಮ್ಮ ವಿದ್ಯಾರ್ಥಿಗಳು ಮಾತ್ರವಲ್ಲ, ಇಡೀ ಸಮುದಾಯಕ್ಕೆ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದು ಸಂತೋಷಕರವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವರದರಾಜ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಟಿ.ಪಿ.ತ್ರಿವೇಣಿ ಹಾಗೂ ವರದರಾಜ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮದನ್‌ಪ್ರಸಾದ್ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(Visited 1 times, 1 visits today)