ತುಮಕೂರು: ರಾಜ್ಯ ಕಾಂಗ್ರೆಸ್ ಸರಕಾರದ ಸಾರ್ವಜನಿಕರು, ರೈತರ ಪರ ಕೆಲಸ ಮಾಡದೆ, ದಲ್ಲಾಳಿಗಳು, ವ್ಯಾಪಾರಿಗಳ ಪರ ಕೆಲಸ ಮಾಡುತಿದ್ದು,ಸಂಪೂರ್ಣವಾಗಿ ರೈತರ ಹಿತ ಕಡೆಗಣಿಸಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಆರೋಪಿಸಿದ್ದಾರೆ.
ಜೆಡಿಎಸ್ ಪಕ್ಷದವತಿಯಿಂದ ಇಂದು ಹಮ್ಮಿಕೊಂಡಿದ್ದ ಸರಕಾರದ ವಿರುದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡುತಿದ್ದ ಅವರು,ರಾಜ್ಯ ಸರಕಾರ ರೈತರಿಗೆ ಸ್ಪಂದಿಸುತ್ತಿಲ್ಲ.ಹಾವಾಮಾನ ಇಲಾಖೆಯ ಮುನ್ಸೂಚನೆ ಇದ್ದರೂ ರಸಗೊಬ್ಬರ, ಬಿತ್ತನೆ ಬೀಜಗಳಿಗೆ ಸಮರ್ಪಕ ವಿತರಣೆಗೆ ಪೂರ್ವ ತಯಾರಿ ಮಾಡಿಕೊಳ್ಳದೆ, ರೈತರು ಪರದಾಡುವಂತೆ ಮಾಡಿದ್ದಾರೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕೃಷಿ ಸಚಿವರು ಸಂಪೂರ್ಣ ವಿಫಲರಾಗಿದ್ದು, ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಕಳೆದ ೨ ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಲಂಚಗುಳಿತನ, ದುರಾಡಳಿ, ಆಡಳಿತ ವೈಫಲ್ಯತೆಯಿಂದ ಜನರ ಆಕ್ರೋಶಕ್ಕೆ ತುತ್ತಾಗಿದೆ.ಉತ್ತಮ ಮಳೆಯಾಗಿ ರೈತರು ಕೃಷಿ ಚಟುಟವಟಿಕೆ ಆರಂಭಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಸರಕಾರ ರಸಗೊಬ್ಬರ, ಬಿತ್ತನೆಬೀಜ ಪೂರೈಸುವಲ್ಲಿ ವಿಫಲವಾಗಿದೆ.ಮುಂಜಾಗೃತವಾಗಿ ರಸಗೊಬ್ಬರನ್ನು ದಾಸ್ತಾನು ಮಾಡದೆ ನಿರ್ಲಕ್ಷ ಮಾಡಿದ ಪರಿಣಾಮ ಇಂದು ರೈತರು ಗಿಬ್ಬರ ಸಿಗದೆ ಪರಿತಪಿಸುವಂತಾಗಿದೆ.ಅಲ್ಲದೆ, ಮಳೆ ಹಾಗೂ ನೆರೆ ಹಾವಳಿಯಿಂದ ಫಸಲು ನಷ್ಟವಾದ ಹಾಗೂ ಮಳೆ ಅಭಾವದ ಕಡೆ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ, ವಿಮಾ ಹಣವನ್ನು ತಪುಪಿಸುವಲ್ಲಿ ಸರಕಾರ ವಿಫಲವಾಗಿದೆ.ಇಂತಹ ಹೊಣೆಗೇಡಿ ಸರಕಾರಕ್ಕೆ ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದು ಅರ್.ಸಿ.ಆಂಜನಪ್ಪ ನುಡಿದರು.
ಕುಣಿಗಲ್ ಮುಖಂಡರಾದ ಜಗದೀಶ್ ನಾಗರಾಜಯ್ಯ ಮಾತನಾಡಿ,ಎರಡೂ ವರ್ಷಗಳಿಂದ ರೈತರಿಗೆ ಅನ್ಯಾಯ ಮಾಡಿಕೊಂಡು ಬರಲಾಗುತ್ತಿದೆ.ರಾಜ್ಯದಲ್ಲಿ ಭಷ್ಟ ಸರಕಾರ ಅಧಿಕಾರದಲ್ಲಿದೆ.ಜನಸಾಮಾನ್ಯರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರು ರಸಗೊಬ್ಬರಕ್ಕಾಗಿ ಹೋರಾಟ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರದ ನಾಯಕರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಸರಬರಾಜು ಮಾಡಿದ್ದ ರಸಗೊಬ್ಬರವನ್ನು ರೈತರಿಗೆ ಹಂಚಿಕೆ ಮಾಡದೆ ದಳ್ಳಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ.ಕೃಷಿ ಮಂತ್ರಿ ಚಲುವರಾಯಸ್ವಾಮಿ ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ. ದೇವೇಗೌಡರ ಕುಟುಂಬದವರನ್ನು ಜರಿಯುವುದನ್ನು ಬಿಟ್ಟರೆ ಬೇರೆ ಉದ್ಯೋಗವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಿಪಟೂರು ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಕೇಂದ್ರ ಸರಕಾರದ ಜೊತೆ ವ್ಯವಹರಿಸಿ ಅಗತ್ಯ ಗೊಬ್ಬರ ಪಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರ, ಸಮಸ್ಯೆಗೆ ಪರಿಹಾರ ಕಂಡುಕೊAಡು ರೈತರಿಗೆ ಗೊಬ್ಬರ ನೀಡದೆ, ಕೇಂದ್ರದ ಮೇಲೆ ಆರೋಪ ಮಾಡುತ್ತಾ ಸಮಸ್ಯೆಯನ್ನು ಮತ್ತಷ್ಟು ಜಟಿಲ ಮಾಡುತ್ತಿದೆ. ಇರುವ ಗೊಬ್ಬರವನ್ನು ಬ್ರೋಕರ್‌ಗಳ ಮೂಲಕ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಆಡಳಿತಕ್ಕೆ ರೈತರು ರೋಸಿಹೋಗಿದ್ದಾರೆ.ಗ್ಯಾರಂಟಿ ಆಸೆ ತೋರಿಸಿ ಜನರಿಂದ ವೋಟು ಪಡೆದ ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ ನಂತರ ಜನರ ಹಿತ ಮರೆತಿದ್ದಾರೆ. ರೈತರನ್ನು ಕಡೆಗಣಿಸಿದ್ದಾರೆ. ಎಲ್ಲಾ ಕಡೆ ಭ್ಯಷ್ಟಾಚಾರ ತುಂಬಿದೆ. ಸರಕಾರಿ ಕಚೇರಿಗಳಲ್ಲಿ ರೈತರ ಅಹವಾಲು ಕೇಳುವವರಿಲ್ಲ. ಜಿಲ್ಲಾಡಳಿತವೂ ಹದಗೆಟ್ಟಿದೆ. ಎಕ್ಸ್ಪ್ರೆಸ್ ಕೆನಾಲ್ ವಿರುದ್ಧ ಹೋರಾಟಕ್ಕಿಳಿದ ರೈತರನ್ನು ಪೊಲೀಸರನ್ನು ಬಳಸಿ ಬೆದರಿಸಲಾಗಿದೆ.ಆದರೆ ಕಾಂಗ್ರೆಸ್‌ನ ಸಚಿವರಾಗಲಿ, ಶಾಸಕರಾಗಲಿ ರೈತರ ಪರ ನಿಲ್ಲಲಿಲ್ಲ ಎಂದು ಟೀಕಿಸಿದರು.
ಈ ಸಂಬ0ಧ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಅಧೀಕ್ಷಕರಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ,ಪಿ.ಆರ್.ಸುಧಾಕರಲಾಲ್,ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು,ನಗರ ಅಧ್ಯಕ್ಷ ವಿಜಯ್‌ಗೌಡ,ಯೋಗಾನಂದಕುಮಾರ್,ಟಿ.ಕೆ.ನರಸಿAಹಮೂರ್ತಿ,ಧರಣೇAದ್ರಕುಮಾರ್,ಹೆಚ್.ಡಿ.ಕೆ.ಮAಜುನಾಥ್,ರಾಮಕೃಷ್ಣಪ್ಪ, ಮುಖಂಡರಾದ ಉಗ್ರೇಶ್,ಕಾಮರಾಜು,ಕೊಂಡವಾಡಿ ಚಂದ್ರಶೇಖರ್, ತಿಮ್ಮಾರೆಡ್ಡಿ, ಸೋಲಾರ್ ಕೃಷ್ಣಮೂರ್ತಿ, ಗಂಗಣ್ಣ, ಮೆಡಿಕಲ್ ಮಧು, ರೇಖಾ ರಾಜು, ಸೊಗಡು ವೆಂಕಟೇಶ್, ಚೆನ್ನಮಲ್ಲಯ್ಯ, ತಾಹೇರಾ ಕುಲ್ಸಂ, ಲೀಲಾವತಿ, ಲಕ್ಷಿö್ಮÃದೇವಮ್ಮ ಮತ್ತಿತರರು ಪಾಲ್ಗೊಂಡಿದ್ದರು.
(Visited 1 times, 1 visits today)