
ತುರುವೇಕೆರೆ: ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದ ಟೀಕೆ ಟಿಪ್ಪಣಿಗಳಿದ್ದರು ಗ್ರಾರಂಟಿ ಯೋಜನೆಯಿಂದ ಲಕ್ಷಾಂತರ ಬಡಜನರಿಗೆ ಅನುಕೂಲವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಆಚರಣದಲ್ಲಿ ಜಿಲ್ಲಾಡಳಿತ ಹಾಗೂ ಪಟ್ಟಣ ಪಂಚಾಯತಿ ವತಯಿಂದ ನೂತನವಾಗಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ರಾಜ್ಯ ಕಾಂಗ್ರೇಸ್ ಸರ್ಕಾರ ಬಡ ಜನತೆಯ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಬಡವ, ಶ್ರೀಮಂತ, ಜಾತಿ,ಧರ್ಮ ಹಾಗೂ ಪಕ್ಷ ರಹಿತವಾಗಿ ಗೃಹ ಲಕ್ಷ್ಮೀ ಹಣ ೨ ಸಾವಿರ ಹಣ ನೀಡುತ್ತಿದ್ದೇವೆ. ಹಣ ಉಳ್ಳುವರು ನಾವು ಕೇಳಿದ್ದೇವಾ ಎಂಬ ಮಾತಿ ಆಡಬಹುದು ಆದರೇ ಬಡ ಹೆಣ್ಣು ಮಕ್ಕಳಿಗೆ ಬಹಳ ಅನುಕೂಲವಾಗಿದೆ ಎಂದರು.
ಮುಖ್ಯಮAತ್ರಿಯಾಗಿದ್ದ ಸಿದ್ದರಾಮಯ್ಯ ೨೦೧೩ರಲ್ಲಿ ಬಡ ಕೂಲಿ ಕಾರ್ಮಿಕರಿಗೆ ಹಾಘೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು ನಗರದಲ್ಲಿ ೫ ರೂ ತಿಂಡಿ, ೧೦ ರೂ ಊಟ ನೀಡುವಂತಹ ಇಂದಿರಾ ಕ್ಯಾಂಟೀನ್ ತೆರೆಯಲಾಯಿತು. ನಂತರ ಶಾಸಕರ ಓತ್ತಾಯದ ಮೇರೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಯಿತು. ಇಂದು ದಿನ ನಿತ್ಯ ಸಾವಿರಾರು ಜನರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ ಎಂದರು.
ದಿನಾಲೂ ರುಚಿ, ಶುಚಿ ಇರಬೇಕು: ನಾವು ಬಂದಿದ್ದಿವಿ ಎಂದು ಇವತ್ತು ಇಡ್ಲಿ, ಕೇಸರಿ ಬಾತ್ ಚನ್ನಾಗಿ ರುಚಿಯಾಗಿ ಮಾಡಿದ್ದಿರಿ. ಪ್ರತಿ ದಿನ ಇದೇ ರೀತಿ ರುಚಿಯಾಗಿ ಇರಬೇಕು ಇಲ್ಲವಾದರೇ ಗುತ್ತಿಗೆಯನ್ನು ರದ್ದು ಮಾಡುವ ಎಚ್ಚರಿಕೆ ನೀಡಿ ಅವರು ನನಗೆ ಮಾಹಿತಿ ನೀಡಿದ ಪ್ರಕಾರ ಪ್ರತಿ ದಿನ ಬೆಳಿಗ್ಗೆ ತಿಂಡಿ ೨೦೦, ಮದ್ಯಾಹ್ನ ಊಟ ೨೦೦, ರಾತ್ರಿ ಊಟ ೨೦೦ ಜನರಿಗೆ ಸೇರಿ ಒಟ್ಟು ೬೦೦ ಜನರಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.ಇನ್ನು ಹೆಚ್ಚು ಜನರಿಗೆ ನೀಡಲು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಬೇಕು ಎಂದು ತಿಳಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಪ್ರತಿ ದಿನ ಉತ್ತಮವಾದ ತಿಂಡಿ,ಊಟವನ್ನು ನೀಡಬೇಕು. ಈ ಯೋಜನೆಯಿಂದ ಕೂಲಿ ಕಾರ್ಮಿಕರಿಗೆ ಬಹಳ ಅನುಕೂಲವಾಗಲಿದೆ. ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜನರು ಸದೂಪಯೋಗ ಪಡಿಸಿಕೊಳ್ಳಲಿ ಎಂದು ಅವರು ಸರಿಯಾದ ಕ್ಯಾಲಿಟೀ ಆಹಾರ ನೀಡದಿದ್ದರೇ ಜನರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರ ಕಾರ್ಯಕ್ರವಾಗಿದ್ದರೂ ಅಹ್ವಾನ ಪತ್ರಿಕೆಯಲ್ಲಿ ಇವರು ಗಣ್ಯರಿಗಿಂತ ಮುಖಂಡರೇ ಹೆಚ್ಚು ಜನರು ವೇದಿಕೆಯ ತುಂಬಾ ಕುಳಿತಿದ್ದು ಶೀಷ್ಟಾಚಾರ ಪಾಲನೆಯಾಗದೆ ಸರ್ಕಾರದ ಕಾರ್ಯಕ್ರಮ ಒಂದು ಪಕ್ಷದ ಕಾರ್ಯಕ್ರಮ ರೀತಿಯಲ್ಲಿ ವೇದಿಕೆ ಕಂಡು ಬಂತು ಸಾರ್ವಜನಿಕರು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶೀಲಾ, ಉಪಾಧ್ಯಕ್ಷೆ ಭಾಗ್ಯ, ಸದಸ್ಯ ಚಿದಾನಂದ್, ಜಿಲ್ಲಾದಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿ.ಎಸ್. ಜಿ.ಪ್ರಭು, ಜಿಲ್ಲಾಎಸ್.ಪಿ.ಆಶೋಕ್, ತಿಪಟೂರು ಎ.ಸಿ ಸಪ್ತಶ್ರೀ, ತಹಶೀಲ್ದಾರ್ ಕುಂಇ.ಅಹಮದ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬೆಮೆಲ್ ಕಾಂತರಾಜು, ತುಮುಲ್ ನಿರ್ದೆಶಕ ಸಿ.ವಿ.ಮಹಾಲಿಂಗಯ್ಯ, ಮುಖಂಡರಾದ ಮುರುಳೀಧರ ಹಾಲಪ್ಪ, ಗೀತಾರಾಜಣ್ಣ, ಪಟ್ಟಣ ಪಂಚಾಯತಿ ಸದಸ್ಯರಾದ ಸ್ವಪ್ನ, ಯಜಮಾನ್ ಮಹೇಶ್, ಜಯಮ್ಮ, ಆಶಾರಾಣಿ, ಎನ್.ಆರ್.ಸುರೇಶ್, ನಾಮಿನಿ ಸದಸ್ಯರಾದ ರುದ್ರೇಶ್, ಶ್ರೀನಿವಾಸ್ ಮೂರ್ತಿ, ಮಹಮದ್ ಜಪ್ರುಲ್ಲಾ ಮುಖ್ಯಾಧಿಕಾರಿ ಶ್ರೀನಾಥ್ ಭಾಬು ಸೇರಿದಂತೆ ಮುಖಂಡರು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು.