ತುಮಕೂರು: ರಾಜ್ಯದ್ಯಂತ ಸೆ.೨೨ ರಿಂದ ಅ.೭ರವರೆಗೆ ಹಿಂದುಳಿದ ವರ್ಗಗಳ ಸಮೀಕ್ಷೆ ನಡೆಯಲಿದ್ದು. ರಾಜ್ಯದ ಕುರುಬ ಸಮುದಾಯದವರು ಕಾಲಂ ನಂ ೯,೧೦ ಮತ್ತು ೧೧ ರಲ್ಲಿ “ಕುರುಬ” ಎಂದು ನಮೂದಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ ಎಂ ರಾಮಚಂದ್ರಪ್ಪ ತಿಳಿಸಿದರು.
ಮಂಗಳವಾರ ನಗರದ ಕುಣಿಗಲ್ ರಸ್ತೆಯಲ್ಲಿರುವ ಮಾರುತಿ ಕನ್ವೆನ್ಷನ್ ಹಾಲ್ ನಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ(ರಿ) ಗಾಂಧಿನಗರ ಬೆಂಗಳೂರು.ಜಿಲ್ಲಾ ಕುರುಬರ ಸಂಘ ತು. ಜಿಲ್ಲೆ. ಕಾಳಿದಾಸ ವಿದ್ಯಾವಧಕರ ಸಂಘ ತುಮಕೂರು ಹಾಗೂ ಜಿಲ್ಲಾ ಕುರುಬರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಕುರುಬ ಜನಾಂಗದ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ನಡೆಸುತ್ತಿದ್ದು. ಮೀಸಲಾತಿಯ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸಮೀಕ್ಷೆಯನ್ನು ನೆಡುಲು ನಿರ್ಣಯಿಸಿದ್ದಾರೆ. ಕಾಡು ಕುರುಬ, ಜೇನು ಕುರುಬ, ಬೆಟ್ಟ ಕುರುಬ, ಗೊಂಡ ಸಮುದಾಯದವರನ್ನು ಹೊರೆತುಪಡಿಸಿ. ಉಳಿದೆಲ್ಲ ಕುರುಬ ಜನಾಂಗದವರು ನಡೆಸುವ ಸಮೀಕ್ಷೆಯಲ್ಲಿ “ಕುರುಬ” ಎಂದು ಬರೆಸಬೇಕು. ಹಾಲುಮತ ಸೇರಿದಂತೆ ಇನ್ಯಾವುದೇ ಉಪಜಾತಿಗಳನ್ನು ಸೂಚಿಸಬಾರದು. ಸಮೀಕ್ಷೆಯಲ್ಲಿ ೬೦ ಅಂಶ ಜಾತಿಗಳ ವಿವರವನ್ನು ಕೇಳಲಾಗಿದ್ದು ಪ್ರಮುಖವಾಗಿ ಕಾಲಂ ನಂ ೯,೧೦ ಮತ್ತು ೧೧ ರಲ್ಲಿ “ಕುರುಬ” ಎಂದು ನಮೂದಿಸುವಂತೆ ಕುರುಬ ಜನನಾಂಗಕ್ಕೆ ಕೆ ಎಂ ರಾಮಚಂದ್ರಪ್ಪ ಒತ್ತಾಯಿಸಿದರು.
ರೇವಣಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಬಿಂದುಶೇಖರ್ ಒಡೆಯರ್ ಸ್ವಾಮೀಜಿ ರವರು ಸಭೆಯ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಸುವ ಹಿಂದುಳಿದ ವರ್ಗಗಳ ಸಮೀಕ್ಷೆ ಕುರುಬ ಸಮುದಾಯಕ್ಕೆ ಸುವರ್ಣವಕಾಶವಾಗಿದೆ. ಕುರುಬ ಜನಾಂಗ ಸದುಪಯೋಗಪಡಿಸಿಕೊಂಡು ಸಾಮಾಜಿಕ,ಶೈಕ್ಷಣಿಕ, ಆರ್ಥಿಕವಾಗಿ ಮುಂದುವರಿಯಬೇಕು. ರಾಜ್ಯದಲ್ಲಿರುವ ಜನ ಸಂಖ್ಯೆಯಲ್ಲಿ ಕುರುಬ ಸಮುದಾಯ ಶೇಕಡಾ ೧೧ಕ್ಕೂ ಹೆಚ್ಚು ಜನ ಸಂಖ್ಯೆ ಇದ್ದು. ರಾಜಕೀಯದಲ್ಲಿ ಬೆರಳೆಣಿಕೆಯಷ್ಟು ಜನಪ್ರತಿನಿಧಿಗಳಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದರು. ಮುಂದಿನ ದಿನಗಳಲ್ಲಿ ಮೀಸಲಾತಿಯ ಅವಕಾಶವನ್ನು ಬಳಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುವ ಕೆಲಸ ಕುರುಬ ಸಮುದಾಯದಿಂದ ಆಗಬೇಕೆಂದು ಆಶಯವನ್ನು ವ್ಯಕ್ತಪಡಿಸುವುದು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ರಾಜ್ಯಾದ್ಯಂತ ೧.೪೯ ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ಬಳಸುತ್ತಿದೆ. ಸೆ. ೨೨ ರಿಂದ ನಡೆಯುವ ಈ ಸಮೀಕ್ಷೆಗೆ ಇತರ ಇಲಾಖೆಗಳ ೭೫,೦೬೪ ನೌಕರರನ್ನು ಸಹ ಬಳಸಲು ನಿರ್ಧರಿಸಲಾಗಿದೆ. ಶಿಕ್ಷಕರಿಗೆ ತರಬೇತಿ ನೀಡಲು ೩೦೩೦ ಮಾಸ್ಟರ್ ಟ್ರೇನರ್‌ಗಳನ್ನು ನೇಮಿಸಲಾಗಿದ್ದು. ರಾಜ್ಯ ಹಾಗೂ ಜಿಲ್ಲೆ ತಾಲೂಕು ಮಟ್ಟದ ಮುಖಂಡರು ಜನಾಂಗದವರಲ್ಲಿ ಅರಿವು ಮೂಡಿಸಬೇಕೆಂದು ಕುರುಬ ಸಮುದಾಯದ ಮುಖಂಡರು ಹಾಗೂ ಪ್ರಜಾ ಪ್ರಗತಿ ದಿನ ಪತ್ರಿಕೆಯ ಸಂಪಾದಕರಾದ ಡಾ. ಎಸ್ ನಾಗಣ್ಣ ಕುರುಬ ಸಮುದಾಯದ ಮುಖಂಡರಿಗೆ ಕರೆ ನೀಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ರವರು ಮಾತನಾಡಿ ರಾಜ ಮುಖ್ಯಮಂತ್ರಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ನವರ ನಂತರ ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕುರುಬ ಜನಾಂಗ ಹಾಗೂ ಹಿಂದುಳಿದ ವರ್ಗದ ಸಮುದಾಯದವರು ಕೃತಜ್ಞತಾ ರಾಗಿರುತ್ತಾರೆಂದು ತಿಳಿಸಿದರು.
ಕುರುಬ ಜನಾಂಗದ ಜಾಗೃತಿಯ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಎಂ ಈರಣ್ಣ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಖಜಾಂಚಿ ಕೃಷ್ಣಮೂರ್ತಿ, ಕಾಳಿದಾಸ ವಿದ್ಯಾವರ್ಧಕ ಜಿಲ್ಲಾಧ್ಯಕ್ಷ ಮೈಲಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಟಿ ಆರ್ ಸುರೇಶ್, ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಆಂತರಿಕ ಲೆಕ್ಕ ಪರಿಶೋಧಕರು ಟಿ.ಈ ರಘುರಾಮ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಕೊರಟಗೆರೆ ತಾಲೂಕು ಅಧ್ಯಕ್ಷ ಮೈಲಪ್ಪ, ಅನಿಲ್, ಕೆಂಪರಾಜು, ಬಸವರಾಜು,ಜಿಲ್ಲಾ ನಿರ್ದೇಶಕರು ಹಾಗೂ ತಾಲೂಕು ಘಟಕದ ಅಧ್ಯಕ್ಷರು ಸೇರಿದಂತೆ ಅನೇಕರು ಪದಾಧಿಕಾರಿಗಳು ಉಪಸ್ಥಿತರಿದ್ದ.