ತುಮಕೂರು: ಭಾರತದ ೮೦ನೇ ಸ್ವಾತಂತ್ರ ದಿನದ ಅಂಗವಾಗಿ ಭಾರತ್ ಸಂಚಾರ್ ನಿಗಮ ನಿಯಮಿತ ಗ್ರಾಹಕರಿಗೆ ಹೊಸ ಪ್ಯೂಚರ್ ಒಳಗೊಂಡಿರುವ ಡಿಜಿಟಲ್ ಮತ್ತು ಮನರಂಜನಾ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಬಿ.ಎಸ್.ಎನ್.ಎಲ್‌ನ ತುಮಕೂರು ಮತ್ತು ಹಾಸನ ಜಿಲ್ಲಾ ಡಿಜಿಎಂ ದಿಗಂಬರಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ಇದುವೆರೆಗೂ ಇದ್ದ ೧೧೯೯ ಪ್ಲಾನ್‌ನ್ನು ೧೧೧೧ ಆಗಿ ಪರಿಷ್ಕರಿಸಿ, ಗ್ರಾಹಕರಿಗೆ ೨೦೦ ಎಂ.ಪಿಪಿಎಸ್ ವೇಗದಲ್ಲಿ ೫೦೦ ಜಿಬಿ ವರೆಗೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಹಾಗೆಯೇ ೨೫ ಒಟಟಿ ಚಾನಲ್‌ಗಳು ಇನ್ ಬಿಲ್ಟ್ ಆಗಿದ್ದು, ಮನರಂಜನೆಯ ವೇಗವನ್ನು ಮತ್ತಷ್ಟು ಸುಧಾರಿಸಿದೆ. ಬೇರೆ ಕಂಪನಿಯ ಪ್ಲಾನ್‌ಗಳಿಗೆ ಹೊಲಿಕೆ ಮಾಡಿದರೆ ಬಿ.ಎಸ್.ಎನ್.ಎಲ್‌ನ ಈ ಪ್ಲಾನ್ ತುಂಬಾ ಚನ್ನಾಗಿದೆ ಎಂದರು.
ಸ್ವಾತAತ್ರದ ಹೆಸರಿನಲ್ಲಿ ಉಚಿತವಾಗಿ ಸಿಮ್ ನೀಡುತ್ತಿದ್ದು,ಒಂದು ರೂಗೆ ಒಂದು ಸಿಮ್ ವಿತರಿಸುತಿದ್ದು, ೨೪ ದಿನಗಳ ವ್ಯಾಲಿಡಿಟಿ ಇರಲಿದೆ.ಇದರಲ್ಲಿ ಪ್ರತಿದಿನ ಒಂದು ಜಿ.ಬಿ.ವರೆಗೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ.ಹಾಗೆಯೇ ೧೦೦ ಎಸ್.ಎಂ.ಎಸ್ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮಾಡಲು ಅವಕಾಶವಿದೆ. ೨೪ ದಿನಗಳ ನಂತರ ಪ್ಲಾನ್‌ನ ಅಗತ್ಯಕ್ಕೆ ತಕ್ಕಂತೆ ರೀಚಾರ್ಜ್ ಮಾಡಿಕೊಂಡಲ್ಲಿ ಸೇವೆ ಮುಂದುವರೆಯಲಿದೆ ಎಂದು ದಿಗಂAಬರ್ ಕುಮಾರ್ ತಿಳಿಸಿದರು.
ತುಮಕೂರು ಮತ್ತು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್ ೪ ಜಿ ಸೇವೆ ಆರಂಭವಾದ ನಂತರ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.ಗ್ರಾಮೀಣ ಭಾಗದ ಜನರಿಗೋಸ್ಕರ, ಕಾಡು ಮೇಡುಗಳಲ್ಲಿ ಕೆಲಸ ಮಾಡುವ ಗ್ರಾಹಕರಿಗೋಸ್ಕರ ವಿಶೇಷ ಸ್ಯಾಟಲೈಟ್ ಕನೆಟ್ವಿಟಿ ಒಳಗೊಂಡ ೨೩೯೯ ರೂಗಳಿಗೆ ೪೧೨ ದಿನಗಳ ಹೊಸ ಪ್ಲಾನ್ ಪರಿಚಯಿಸಿದ್ದು,ಇದು ಆರಣ್ಯಗಳಲ್ಲಿ ಕೆಲಸ ಮಾಡುವ ಜನರಿಗೆ, ಗಡಿಭಾಗಗಳಲ್ಲಿ ಕೆಲಸ ಮಾಡುವ ಜನರಿಗೆ ಉತ್ತಮ ಸೇವೆ ಒದಗಿಸಲಿದೆ.ಇದು ಇಡೀ ದೇಶದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸೇವೆಯನ್ನು ಒದಗಿಸಲಿದೆ.ಭಾರತದ ಪ್ರತಿ ಕುಟುಂಬದ,ಪ್ರತಿ ವ್ಯಕ್ತಿಯ ಕನಸನ್ನು ನನಸು ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ.ಡಿಫೆನ್ಸ್ ವಲಯದ ಕೆಲಸಗಾರರು,ಭೂಕಂಪ, ನೆರೆ, ಭೂ ಕುಸಿತದಂತಹ ದುರ್ಗಮ ಕೆಲಸ ಮಾಡುವವರಿಗೆ,ಆಳ ಸಮುದ್ರದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ,ಪ್ರವಾಸಿಗರಿಗೆ ಹಾಗೂ ಸಾಹಸಿಗರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ದಿಗಂಬರ ಕುಮಾರ್ ನುಡಿದರು.
ಬಿಎಸ್‌ಎನ್‌ಎಲ್ ಗ್ರಾಹಕರ ಅನುಕೂಲಕ್ಕಾಗಿ ಸಿಬ್ಬಂದಿಯನ್ನು ಚುರುಕುಗೊಳಿಸಿದೆ.ನೆಟ್‌ವರ್ಕೆ್ಗ ಸಂಬAಧಿಸಿದAತೆ ಯಾವುದೇ ದೂರು ಬಂದರೂ ತಕ್ಷಣ, ಗ್ರಾಮೀಣ ಮತ್ತು ನಗರ ಪ್ರದೇಶವೆನ್ನದೆ,ನಮ್ಮ ತಾಂತ್ರಿಕ ಸಿಬ್ಬಂದಿ ಅಟೆಂಡ್ ಮಾಡಿ, ಸಮಸ್ಯೆಗೆ ಪರಿಹಾರ ಒದಗಿಸಲಿದ್ದಾರೆ.ಹಾಗಾಗಿಯೇ ದಿನದಿಂದ ದಿನಕ್ಕೆ ನಮ್ಮ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಸರಕಾರಿ ಸೌಮ್ಯದ ಬಿ.ಎಸ್.ಎನ್.ಎಲ್ ಸೇವೆಯನ್ನು ಹೆಚ್ಚು ಹೆಚ್ಚು ಗ್ರಾಹಕರು ಬಳಕೆ ಮಾಡುವಂತೆ ಬಿ.ಎಸ್.ಎನ್.ಎಲ್ ಡಿಜಿಎಂ ದಿಗಂಬರಕುಮಾರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಎಸ್.ಎನ್.ಎಲ್‌ನ ಎಜಿಎಂ ರೇಣುಕಾದೇವಿ, ಮಾರಾಟ ವಿಭಾಗದ ಮುಖ್ಯಸ್ಥ ಮಾರಿಮುತ್ತು ಮತ್ತಿತರರು ಇದ್ದರು.
(Visited 1 times, 1 visits today)





