BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಎಸ್.ಐ.ಆರ್ ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವ ಕೆಲಸ: ಆರೋಪ
  • ಪೋಕ್ಸೊ, ಬಾಲನ್ಯಾಯ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ
  • ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ
  • ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ
  • ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ
  • ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ
  • ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ
  • ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ
news

ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ

೨೦ಕ್ಕೂ ಹೆಚ್ಚು ಗಣಪತಿಗಳ ಸಾಮೂಹಿಕ ವಿಸರ್ಜನಾ ಮಹೋತ್ಸವ
By News Desk BenkiyabaleUpdated:September 26, 2026 5:39 pm

ತುಮಕೂರು
ನಗರದ ಸೋಮೆಕಟ್ಟೆ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವದ ಶೋಭಾಯಾತ್ರೆ ಶನಿವಾರ ವಿಜೃಂಭಣೆಯಿAದ ನಡೆಯಿತು. ನಗರದ ವಿವಿಧ ಗಣೇಶ ಸಮಿತಿಗಳ ೨೦ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಸಾಮೂಹಿಕ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಭಾಗವಹಿಸಿದ್ದವು. ಆಯಾ ಸಮಿತಿಯವರು ಪ್ರತ್ಯೇಕ ಅಲಂಕೃತ ವಾಹನಗಳಲ್ಲಿ ತಮ್ಮ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಶೋಭಾಯಾತ್ರೆಯಲ್ಲಿ ಸಾಗಿಬಂದರು. ಸಾಮೂಹಿಕ ವಿಸರ್ಜನೆ ಕಾರ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ಧ ಭಕ್ತರು ಕಲಾತಂಡಗಳ ನಾದಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಇದಕ್ಕೂ ಮೊದಲು ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಯವರು ಹಿಂದೂ ಮಹಾ ಗಣಪತಿಗೆ ಮಹಾಮಂಗಳಾರತಿ, ಪುಷ್ಪಾರ್ಚನೆ ಮಾಡಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿಗಳು ಗಣೇಶನಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಲಕ್ಷಿö್ಮÃಕಾಂತ್, ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಉಪಾಧ್ಯಕ್ಷರಾದ ಮಹೇಂದ್ರ ವೈಷ್ಣವ್, ಅಂಬಿಕಾ ಹುಲಿನಾಯ್ಕರ್, ಬಿ.ಎಸ್. ಮಂಜುನಾಥ್, ಟಿ.ಎಸ್. ಕುಂಭಿನರಸಯ್ಯ, ಎಚ್.ಜಿ. ಚಂದ್ರಶೇಖರ್, ಟಿ.ಬಿ. ಹರೀಶ್, ಸಿ.ಎಸ್. ಭಾಸ್ಕರ್, ವಾಸವಿ ಗುಪ್ತ, ಸ್ವಚ್ಛ ಮಂಜುನಾಥ್, ಜುಮರ್ ಲಾಲ್, ಪ್ರಧಾನ ಕಾರ್ಯದರ್ಶಿಗಳಾದ ಜಿ.ಕೆ. ಶ್ರೀನಿವಾಸ್, ಬಿ.ಜಿ. ಪ್ರದೀಪ್, ಕಾರ್ಯದರ್ಶಿಗಳಾದ ಮಧುಸೂದನ್, ಬಾಲಾಜಿ, ಕೆ. ವೇದಮೂರ್ತಿ, ಸುರೇಶ್ ರಾವ್, ಖಜಾಂಚಿ ಜೀವನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಬಿಜೆಪಿ ಮುಖಂಡರಾದ ಟಿ.ಹೆಚ್. ಹನುಮಂತರಾಜು, ನವಚೇತನ್, ಧನುಷ್, ಖಜಾಂಚಿ ಜೀವನ್ ಸೇರಿದಂತೆ ವಿವಿಧ ಗಣೇಶ ಮಂಡಳಿಗಳ ಪದಾಧಿಕಾರಿಗಳು, ಸಂಘಸAಸ್ಥೆಗಳ ಪ್ರಮುಖರು, ಕಾಲೇಜು ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಸೇರಿದ್ದರು.
ಎಲ್ಲಾ ಗಣೇಶ ಮೂರ್ತಿಗಳನ್ನು ಸಾಲಿನಲ್ಲಿ ಕೊಂಡೊಯ್ಯಲಾಯಿತು. ಮಂಗಳವಾದ್ಯ, ಜಾನಪದ ಕಲಾತಂಡಗಳ ಪ್ರದರ್ಶನ ಶೋಭಾಯಾತ್ರೆಯ ವೈಭವ ಹೆಚ್ಚಿಸಿತ್ತು. ಕರಿಬಸವೇಶ್ವರ ಮಠದ ಆನೆ ಲಕ್ಷಿö್ಮ ಮೆರವಣಿಗೆಯುದ್ದಕ್ಕೂ ಗಮನ ಸೆಳೆಯಿತು. ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಕೇÀಸರಿ ಬಾವುಟಗಳು ರಾರಾಜಿಸಿದವು. ಅಲಂಕಾರ ಮಾಡಲಾಗಿತ್ತು. ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಸಂಭ್ರಮದಿAದ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಕಾರ್ಯಕರ್ತರು ಕೇಸರಿ ಕಲರವ ಮೆರೆದು. ಉರಿಯುವ ಬಿಸಿಲನ್ನೂ ಲೆಕ್ಕಿಸದೆ ಕಲಾತಂಡಗಳ ನಾದಕ್ಕೆ ತಕ್ಕಂತೆ ಕುಣಿದು ಸಡಗರಪಟ್ಟರು.
ನಂದಿಧ್ವಜ, ವೀರಗಾಸೆ, ಡಂಕವಾದ್ಯ, ತಮಟೆ ವಾದ್ಯ, ಆಧುನಿಕ ಡಿ.ಜೆ. ಸೆಟ್, ನಾಸಿಕ್ ಡೋಲು, ವಿದ್ಯುತ್ ದೀಪಾಲಂಕಾರ ಹಾಗೂ ಕಣ್ಮನ ತಣಿಸುವ ಬಾಣ-ಬಿರುಸುಗಳ ಮದ್ದಿನ ವೈಖರಿಯೊಂದಿಗೆ ಶೋಭಾಯಾತ್ರೆ ವಿಜೃಂಭಣೆಯಿAದ ನಡೆಯಿತು. ಸಂಜೆ ಕೆಎನ್‌ಎಸ್ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನೆರವೇರಿತು.

(Visited 1 times, 1 visits today)
kannada news karnataka local news tumakur tumkur tumkur hindhu maha ganapathi tumkur news ತುಮಕೂರು:
Previous Articleಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ
Next Article ಪೋಕ್ಸೊ, ಬಾಲನ್ಯಾಯ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ
News Desk Benkiyabale

Related Posts

ಎಸ್.ಐ.ಆರ್ ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವ ಕೆಲಸ: ಆರೋಪ

September 26, 2026 5:53 pm news

ಪೋಕ್ಸೊ, ಬಾಲನ್ಯಾಯ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ

September 26, 2026 5:51 pm news

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm news
ತಾಜಾ ಸುದ್ಧಿಗಳು
news

ಎಸ್.ಐ.ಆರ್ ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವ ಕೆಲಸ: ಆರೋಪ

September 26, 2026 5:53 pm
news

ಪೋಕ್ಸೊ, ಬಾಲನ್ಯಾಯ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ

September 26, 2026 5:51 pm
news

ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ

September 26, 2026 5:39 pm

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm
news

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm
news

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm
Our Youtube Channel
Our Picks

ಎಸ್.ಐ.ಆರ್ ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವ ಕೆಲಸ: ಆರೋಪ

September 26, 2026 5:53 pm

ಪೋಕ್ಸೊ, ಬಾಲನ್ಯಾಯ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ

September 26, 2026 5:51 pm

ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ

September 26, 2026 5:39 pm

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಎಸ್.ಐ.ಆರ್ ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವ ಕೆಲಸ: ಆರೋಪ

By News Desk BenkiyabaleSeptember 26, 2026 5:53 pm

ತುಮಕೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್)ಹೆಸರಿನಲ್ಲಿ ದಲಿತ, ಆದಿವಾಸಿ, ಮುಸ್ಲಿಂ, ಬಡವರು, ಅನಕ್ಷರಸ್ಥರ ಮತದಾನದ ಹಕ್ಕನ್ನು ಕಸಿಯುವ ಕೆಲಸ…

ಪೋಕ್ಸೊ, ಬಾಲನ್ಯಾಯ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ

September 26, 2026 5:51 pm

ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ

September 26, 2026 5:39 pm

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.