ತುಮಕೂರು: ಪ್ರತಿಯೊಂದು ಮಗುವಿಗೂ ಪೌಷ್ಠಿಕ ಆಹಾರ ನೀಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ. ಸಿದ್ದರಾಮಯ್ಯ ತಿಳಿಸಿದರು.
ತಾಲ್ಲೂಕಿನ ಹೆಬ್ಬಾಕ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪೋಷಕರು ಮತ್ತು ಮಕ್ಕಳು ಜಂಕ್ ಫುಡ್ಗಳಿಗೆ ಮಾರು ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ಕಾರಣ ಜಂಕ್ ಫುಡ್ಗಳನ್ನು ಸೇವಿಸಬಾರದು. ಬದಲಾಗಿ ಈ ಜಂಕ್ಫುಡ್ನ್ನು ತ್ಯಜಿಸಿ ಪೌಷ್ಠಿಕ ಆಹಾರ ಸೇವನೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಪ್ರತಿ ಮನೆಯಲ್ಲೇ ಇರುವ ಬೆಲ್ಲ, ಕಡಲೆಬೀಜ, ಹೆಸರುಕಾಳುಗಳನ್ನು ಸೇವಿಸಿದರೆ ಮಕ್ಕಳಲ್ಲಿ ಪೌಷ್ಠಿಕತೆ ಬರುತ್ತದೆ. ಇದರೊಂದಿಗೆ ನವಣೆ, ಆರ್ಕ ಸೇರಿದಂತೆ ಸಿರಿಧಾನ್ಯಗಳನ್ನು ಆಹಾರದಲ್ಲಿ ಬಳಸುವಂತೆಯೂ ಅವರು ತಿಳಿಸಿದರು.
ಈ ಹಿಂದೆ ಸಿರಿಧಾನ್ಯಗಳು ಬಡವರ ಆಹಾರವಾಗಿದ್ದವು. ಆದರೆ ಈಗ ಶ್ರೀಮಂತರ ಆಹಾರ ಧಾನ್ಯಗಳಾಗಿ ಮಾರ್ಪಟ್ಟಿವೆ. ಇದರ ಬೆಲೆ ದುಬಾರಿಯಾಗಿದೆ ಎಂದರು.
ಕೋಟಿ ದುಡ್ಡಿರುವವರೆಲ್ಲಾ ಶ್ರೀಮಂತರಲ್ಲ, ಉತ್ತಮ ಆರೋಗ್ಯವಂತರೇ ನಿಜವಾದ ಶ್ರೀಮಂತರು. ಇದನ್ನು ಅರಿತು ಪ್ರತಿಯೊಬ್ಬರೂ ಸಹ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳು ಆರೋಗ್ಯವಾಗಿದ್ದರೆ ಆ ಕುಟುಂಬ ಚೆನ್ನಾಗಿರುತ್ತದೆ. ಹಾಗಾಗಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ರುಚಿ, ಶುಚಿಯಾದ ಪೌಷ್ಠಿಕ ಆಹಾರ ಸೇವಿಸುವುದರೊಂದಿಗೆ ತಮ್ಮ ಆರೋಗ್ಯ, ಮಕ್ಕಳ ಆರೋಗ್ಯ ಹಾಗೂ ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಮಾತನಾಡಿ, ಹೆಣ್ಣು ಮಕ್ಕಳಿಗೆ ೧೮ ವರ್ಷದೊಳಗೆ ಮದುವೆ ಮಾಡಲು ಪ್ರಯತ್ನ ಪಟ್ಟರೆ ಅದು ಕಾನೂನು ಪ್ರಕಾರ ಅಪರಾಧ. ಅಂತಹವರಿಗೆ ಜಾಮೀನು ಸಹ ಸಿಗುವುದಿಲ್ಲ. ಆದ್ದರಿಂದ ಯಾರೂ ಸಹ ಬಾಲ್ಯ ವಿವಾಹವನ್ನು ಪ್ರೋತ್ಸಾಹಿಸಬಾರದು. ಇಂತಹ ಘಟನೆಗಳು ಯಾರ ಗಮನಕ್ಕೆ ಬಂದರೂ ತಕ್ಷಣ ಸಂಬAಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೆ ೧೦೯೮ಗೆ ಕರೆ ಮಾಡಿ ತಿಳಿಸಬೇಕು. ಹಾಗೆಯೇ ಮಹಿಳೆಯರಿಗೆ ಸಮಸ್ಯೆ ಕಂಡು ಬಂದರೆ ೧೮೧ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಮನೆಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಹೆಚ್ಚು ಹೆಚ್ಚು ಹಣ್ಣು, ಸೊಪುö್ಪ, ತರಕಾರಿಯನ್ನು ಸೇವಿಸಬೇಕು. ಗ್ರಾಮದಲ್ಲಿ ಸಿಗುವ ನುಗ್ಗೆ ಸೊಪುö್ಪ ವಾರದಲ್ಲಿ ೨ ಬಾರಿ ಬಳಸಬೇಕು. ಇದರಿಂದ ಪೌಷ್ಠಿಕಾಂಶ ಹೆಚ್ಚುತ್ತದೆ ಎಂದರು.
ಗರ್ಭಿಣಿಯರು ಹಾಗೂ ಬಾಣಂತಿಯರು ಮೊಟ್ಟೆ ಸೇವಿಸಬಾರದು ಎನ್ನುವುದು ತಪುö್ಪ ಕಲ್ಪನೆ. ಪ್ರತಿದಿನ ಗರ್ಭಿಣಿಯರು ಮತ್ತು ಬಾಣಂತಿಯರು ಮೊಟ್ಟೆ ಸೇವಿಸಿದರೆ ಸಮತೋಲಿತ ಆಹಾರ ಸೇವನೆ ಮಾಡಿದಂತಾಗುತ್ತದೆ. ಇದರಿಂದ ಪೌಷ್ಠಿಕಾಂಶ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುಷಾ, ಕೋರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಇಂದು, ಹಿರಿಯ ಪತ್ರಕರ್ತ ಹೆಚ್.ಎನ್. ಮಲ್ಲೇಶ್, ಹೆಬ್ಬಾಕ ಸಿಹೆಚ್ಓ ಪ್ರಿಯ, ಅಂಗನವಾಡಿ ಕಾರ್ಯಕರ್ತೆಯರಾದ ಲೀಲಾವತಿ, ಕಮಲಮ್ಮ, ಗೀತಾ, ಜಯಲಕ್ಷ÷್ಮಮ್ಮ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
(Visited 1 times, 1 visits today)





