BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ
  • ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು
  • ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ
  • ಜಿಲ್ಲೆಯಲ್ಲಿ ೧೫೯ ಕೋಟಿ ಬೆಳೆ ನಷ್ಟ: ಕೇಂದ್ರ ತಂಡಕ್ಕೆ ಮನವರಿಕೆ
  • ಬೃಹತ್ ಮೂರ್ತಿಯ ಮೆರವಣಿಗೆ, ಆಕರ್ಷಕ ಕಲಾ ಪ್ರದರ್ಶನ
  • ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ
  • ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ : ಇಡೀ ವಿಶ್ವಕ್ಕೇ ಮಾದರಿ -ಶುಭ ಕಲ್ಯಾಣ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home
news

ಪ್ರತಿ ಮಗುವಿನ ಉತ್ತಮ ಆರೋಗ್ಯಕ್ಕಾಗಿ ಪೋಷಣ್ ಕಾರ್ಯಕ್ರಮ
By News Desk BenkiyabaleUpdated:October 05, 2026 5:03 pm

ತುಮಕೂರು: ಪ್ರತಿಯೊಂದು ಮಗುವಿಗೂ ಪೌಷ್ಠಿಕ ಆಹಾರ ನೀಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ. ಸಿದ್ದರಾಮಯ್ಯ ತಿಳಿಸಿದರು.
ತಾಲ್ಲೂಕಿನ ಹೆಬ್ಬಾಕ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪೋಷಕರು ಮತ್ತು ಮಕ್ಕಳು ಜಂಕ್ ಫುಡ್‌ಗಳಿಗೆ ಮಾರು ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ಕಾರಣ ಜಂಕ್ ಫುಡ್‌ಗಳನ್ನು ಸೇವಿಸಬಾರದು. ಬದಲಾಗಿ ಈ ಜಂಕ್‌ಫುಡ್‌ನ್ನು ತ್ಯಜಿಸಿ ಪೌಷ್ಠಿಕ ಆಹಾರ ಸೇವನೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಪ್ರತಿ ಮನೆಯಲ್ಲೇ ಇರುವ ಬೆಲ್ಲ, ಕಡಲೆಬೀಜ, ಹೆಸರುಕಾಳುಗಳನ್ನು ಸೇವಿಸಿದರೆ ಮಕ್ಕಳಲ್ಲಿ ಪೌಷ್ಠಿಕತೆ ಬರುತ್ತದೆ. ಇದರೊಂದಿಗೆ ನವಣೆ, ಆರ್ಕ ಸೇರಿದಂತೆ ಸಿರಿಧಾನ್ಯಗಳನ್ನು ಆಹಾರದಲ್ಲಿ ಬಳಸುವಂತೆಯೂ ಅವರು ತಿಳಿಸಿದರು.
ಈ ಹಿಂದೆ ಸಿರಿಧಾನ್ಯಗಳು ಬಡವರ ಆಹಾರವಾಗಿದ್ದವು. ಆದರೆ ಈಗ ಶ್ರೀಮಂತರ ಆಹಾರ ಧಾನ್ಯಗಳಾಗಿ ಮಾರ್ಪಟ್ಟಿವೆ. ಇದರ ಬೆಲೆ ದುಬಾರಿಯಾಗಿದೆ ಎಂದರು.
ಕೋಟಿ ದುಡ್ಡಿರುವವರೆಲ್ಲಾ ಶ್ರೀಮಂತರಲ್ಲ, ಉತ್ತಮ ಆರೋಗ್ಯವಂತರೇ ನಿಜವಾದ ಶ್ರೀಮಂತರು. ಇದನ್ನು ಅರಿತು ಪ್ರತಿಯೊಬ್ಬರೂ ಸಹ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳು ಆರೋಗ್ಯವಾಗಿದ್ದರೆ ಆ ಕುಟುಂಬ ಚೆನ್ನಾಗಿರುತ್ತದೆ. ಹಾಗಾಗಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ರುಚಿ, ಶುಚಿಯಾದ ಪೌಷ್ಠಿಕ ಆಹಾರ ಸೇವಿಸುವುದರೊಂದಿಗೆ ತಮ್ಮ ಆರೋಗ್ಯ, ಮಕ್ಕಳ ಆರೋಗ್ಯ ಹಾಗೂ ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಮಾತನಾಡಿ, ಹೆಣ್ಣು ಮಕ್ಕಳಿಗೆ ೧೮ ವರ್ಷದೊಳಗೆ ಮದುವೆ ಮಾಡಲು ಪ್ರಯತ್ನ ಪಟ್ಟರೆ ಅದು ಕಾನೂನು ಪ್ರಕಾರ ಅಪರಾಧ. ಅಂತಹವರಿಗೆ ಜಾಮೀನು ಸಹ ಸಿಗುವುದಿಲ್ಲ. ಆದ್ದರಿಂದ ಯಾರೂ ಸಹ ಬಾಲ್ಯ ವಿವಾಹವನ್ನು ಪ್ರೋತ್ಸಾಹಿಸಬಾರದು. ಇಂತಹ ಘಟನೆಗಳು ಯಾರ ಗಮನಕ್ಕೆ ಬಂದರೂ ತಕ್ಷಣ ಸಂಬAಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೆ ೧೦೯೮ಗೆ ಕರೆ ಮಾಡಿ ತಿಳಿಸಬೇಕು. ಹಾಗೆಯೇ ಮಹಿಳೆಯರಿಗೆ ಸಮಸ್ಯೆ ಕಂಡು ಬಂದರೆ ೧೮೧ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಮನೆಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಹೆಚ್ಚು ಹೆಚ್ಚು ಹಣ್ಣು, ಸೊಪುö್ಪ, ತರಕಾರಿಯನ್ನು ಸೇವಿಸಬೇಕು. ಗ್ರಾಮದಲ್ಲಿ ಸಿಗುವ ನುಗ್ಗೆ ಸೊಪುö್ಪ ವಾರದಲ್ಲಿ ೨ ಬಾರಿ ಬಳಸಬೇಕು. ಇದರಿಂದ ಪೌಷ್ಠಿಕಾಂಶ ಹೆಚ್ಚುತ್ತದೆ ಎಂದರು.
ಗರ್ಭಿಣಿಯರು ಹಾಗೂ ಬಾಣಂತಿಯರು ಮೊಟ್ಟೆ ಸೇವಿಸಬಾರದು ಎನ್ನುವುದು ತಪುö್ಪ ಕಲ್ಪನೆ. ಪ್ರತಿದಿನ ಗರ್ಭಿಣಿಯರು ಮತ್ತು ಬಾಣಂತಿಯರು ಮೊಟ್ಟೆ ಸೇವಿಸಿದರೆ ಸಮತೋಲಿತ ಆಹಾರ ಸೇವನೆ ಮಾಡಿದಂತಾಗುತ್ತದೆ. ಇದರಿಂದ ಪೌಷ್ಠಿಕಾಂಶ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುಷಾ, ಕೋರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಇಂದು, ಹಿರಿಯ ಪತ್ರಕರ್ತ ಹೆಚ್.ಎನ್. ಮಲ್ಲೇಶ್, ಹೆಬ್ಬಾಕ ಸಿಹೆಚ್‌ಓ ಪ್ರಿಯ, ಅಂಗನವಾಡಿ ಕಾರ್ಯಕರ್ತೆಯರಾದ ಲೀಲಾವತಿ, ಕಮಲಮ್ಮ, ಗೀತಾ, ಜಯಲಕ್ಷ÷್ಮಮ್ಮ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ಜಿಲ್ಲಾಡಳಿತ ತುಮಕೂರು: ಹುಳಿಯಾರು
Previous Articleಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು
Next Article ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ
News Desk Benkiyabale

Related Posts

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm news

ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು

October 05, 2026 5:00 pm news

ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ

October 03, 2026 5:36 pm news
ತಾಜಾ ಸುದ್ಧಿಗಳು
news

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm
news

October 05, 2026 5:03 pm
news

ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು

October 05, 2026 5:00 pm
news

ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ

October 03, 2026 5:36 pm
news

ಜಿಲ್ಲೆಯಲ್ಲಿ ೧೫೯ ಕೋಟಿ ಬೆಳೆ ನಷ್ಟ: ಕೇಂದ್ರ ತಂಡಕ್ಕೆ ಮನವರಿಕೆ

October 03, 2026 5:35 pm
news

ಬೃಹತ್ ಮೂರ್ತಿಯ ಮೆರವಣಿಗೆ, ಆಕರ್ಷಕ ಕಲಾ ಪ್ರದರ್ಶನ

October 03, 2026 5:32 pm
Our Youtube Channel
Our Picks

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm

October 05, 2026 5:03 pm

ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು

October 05, 2026 5:00 pm

ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ

October 03, 2026 5:36 pm

ಜಿಲ್ಲೆಯಲ್ಲಿ ೧೫೯ ಕೋಟಿ ಬೆಳೆ ನಷ್ಟ: ಕೇಂದ್ರ ತಂಡಕ್ಕೆ ಮನವರಿಕೆ

October 03, 2026 5:35 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

By News Desk BenkiyabaleOctober 05, 2026 5:05 pm

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಸಾರ್ವಜನಿಕರಿಗೆ ತೊಂದರೆಯುAಟು ಮಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯೂ…

October 05, 2026 5:03 pm

ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು

October 05, 2026 5:00 pm

ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ

October 03, 2026 5:36 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.