ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಸಾರ್ವಜನಿಕರಿಗೆ ತೊಂದರೆಯುAಟು ಮಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ತಹಸಿಲ್ದಾರ್ ಮಮತಾ ಅವರು ಕಡಕ್ ಕ್ರಮಗಳಿಗೆ ಮುಂದಾಗಿದ್ದಾರೆ.
ಹುಳಿಯಾರು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಮಂಜುನಾಥ್, ಪಿಎಸ್‌ಐ ರೇಣುಕಾ ಯಾದವ್, ಪರಿಸರ ಇಂಜಿನಿಯರ್ ಚಂದ್ರಶೇಖರ್ ಸೇರಿದಂತೆ ಆಟೋ ಚಾಲಕರು, ಫುಟ್ಪಾತ್ ವ್ಯಾಪಾರಿಗಳು ಹಾಗೂ ಗ್ಯಾಸ್ ಏಜೆನ್ಸಿ ವಿತರಕರೊಂದಿಗೆ ಸುದೀರ್ಘ ಸಭೆ ನಡೆಸಿ, ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಸೂಚನೆಗಳನ್ನು ನೀಡಿದರು.
ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆ ಗ್ಯಾಸ್ ಸಿಲಿಂಡರ್ ಬಳಕೆಗೆ ಎಚ್ಚರಿಕೆ: ಪಟ್ಟಣಾದ್ಯಂತ ಇರುವ ಹೋಟೆಲ್‌ಗಳು, ವೆಲ್ಡಿಂಗ್ ಶಾಪ್‌ಗಳು ಹಾಗೂ ಸರ್ವಿಸ್ ಸೆಂಟರ್‌ಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ಬಳಸಲಾಗುತ್ತಿರುವುದು ಗಮನಕ್ಕೆ ಬಂದಿದೆ. ಮನೆಗೆ ಬಳಸುವ ಸಿಲಿಂಡರ್‌ಗಳನ್ನು ವಾಣಿಜ್ಯ ಚಟುವಟಿಕೆಗೆ ಬಳಸುವುದು ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಮೊದಲು ಸಾರ್ವಜನಿಕರಲ್ಲಿ ಮತ್ತು ವ್ಯಾಪಾರಿಗಳಲ್ಲಿ ಅರಿವು ಮೂಡಿಸುವಂತೆ ಗ್ಯಾಸ್ ಏಜೆನ್ಸಿಯವರಿಗೆ ಸೂಚಿಸಿದರು. ಹೋಟೆಲ್ ಹಾಗೂ ಸಣ್ಣಪುಟ್ಟ ಅಂಗಡಿಗಳಿಗೆ ತೆರಳಿ ಪರಿಶೀಲಿಸಿ ನೋಟಿಸ್ ನೀಡಲು ಪಪಂ ಅಧಿಕಾರಿಗಳಿಗೆ ಸೂಚಿಸಿದರು. ಒಂದು ವಾರದ ಕಾಲಾವಕಾಶ ನೀಡಿದ ನಂತರವೂ ನಿಯಮ ಉಲ್ಲಂಘಿಸಿದರೆ ಅಂತಹ ಸಿಲಿಂಡರ್‌ಗಳನ್ನು ಸೀಜ್ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಂಭೀರ ಎಚ್ಚರಿಕೆ ನೀಡಿದರು.
ಕೆರೆ ಅಂಗಳದ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ: ಕೆರೆ ಅಂಗಳದ ಒತ್ತುವರಿ ಮತ್ತು ಸಮಸ್ಯೆಗಳ ಕುರಿತು ಉಪಲೋಕಾಯುಕ್ತರ ಸೂಚನೆಯಂತೆ ಈಗಾಗಲೇ ಲೋಕಾಯುಕ್ತ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿದ್ದ ವ್ಯಾಪಾರಿಗಳನ್ನು ತಕ್ಷಣವೇ ತೆರವುಗೊಳಿಸಿ ಅವರ ಜೀವನೋಪಾಯಕ್ಕೆ ತೊಂದರೆ ಮಾಡುವ ಬದಲು, ಅಲ್ಲಿ ವ್ಯಾಪಾರ ಮಾಡುತ್ತಿರುವವರ ನಿಖರ ಪಟ್ಟಿ ತಯಾರಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುನಾಥ್ ಅವರಿಗೆ ಸೂಚನೆಯನ್ನು ನೀಡಿದರು. ಒಂದೇ ಕುಟುಂಬದವರು ಎರಡ್ಮೂರು ಅಂಗಡಿಗಳನ್ನು ಇಟ್ಟುಕೊಳ್ಳುವುದನ್ನು ತಡೆದು, ನಿಜವಾದ ಅರ್ಹ ಬಡ ವ್ಯಾಪಾರಿಗಳನ್ನು ಗುರುತಿಸಿ, ಆಸ್ಪತ್ರೆ ಕಾಂಪೌAಡ್ ಪಕ್ಕ ಅಥವಾ ಸೂಕ್ತ ಪರ್ಯಾಯ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ ಅವರು ಚರ್ಚಿಸಿದರು.
ಪಾದಚಾರಿ ಮಾರ್ಗ ಒತ್ತುವರಿ ತೆರವು ಹಾಗೂ ಸುಗಮ ಸಂಚಾರ: ಉಮಾ ಸ್ಟೋರ್‌ನಿಂದ ಶಿಲ್ಪಾ ಸ್ಟೋರ್‌ವರೆಗೆ ಹಾಗೂ ಶಿಲ್ಪಾ ಸ್ಟೋರ್‌ನಿಂದ ಸ್ಪಂದನ ನರ್ಸಿಂಗ್ ಹೋಮ್ ವರೆಗೆ ರಾಜ್‌ಕುಮಾರ್ ರಸ್ತೆಯಲ್ಲಿ ಅಂಗಡಿದಾರರು ಪಾದಚಾರಿ ಮಾರ್ಗಗಳನ್ನು (ಫುಟ್ಪಾತ್) ಅಕ್ರಮವಾಗಿ ಆಕ್ರಮಿಸಿಕೊಂಡಿರುವುದರಿAದ ಸಾರ್ವಜನಿಕರ ಓಡಾಟಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಮತ್ತು ಪೌರಾಡಳಿತ ಇಲಾಖೆಯ ನಿರ್ದೇಶನದಂತೆ ಸಾರ್ವಜನಿಕರು ಹಾಗೂ ಪಾದಚಾರಿಗಳ ಹಿತರಕ್ಷಣೆ ಮೊದಲ ಆದ್ಯತೆಯಾಗಿದ್ದು, ಫುಟ್ಪಾತ್ ಆಕ್ರಮಿಸಿಕೊಂಡಿರುವ ಅಂಗಡಿಯವರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪೊಲೀಸರು ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಿದರು.
ಹೈವೇ ರಸ್ತೆಯಲ್ಲಿ ಅಸಮರ್ಪಕ ಪಾರ್ಕಿಂಗ್ ತಡೆಗೆ ಸೂಚನೆ: ಎಪಿಎಂಸಿಯಿAದ ಕನಕ ಸರ್ಕಲ್‌ವರೆಗೆ ರಾಷ್ಟಿçÃಯ ಹೆದ್ದಾರಿ ಹಾದುಹೋಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಸದಾಕಾಲ ಲಾರಿ ಮತ್ತು ಬಸ್‌ಗಳನ್ನು ಪಾರ್ಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಇತರೆ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಭಾಗದಲ್ಲಿ ಅನಧಿಕೃತವಾಗಿ ವಾಹನ ನಿಲ್ಲಿಸುವುದನ್ನು ತಡೆಯಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಸಿಲ್ದಾರ್ ಮಮತಾ ಸೂಚಿಸಿದರು.
ಇಂದಿರಾ ಕ್ಯಾಂಟೀನ್ ಮತ್ತು ಮುಕ್ತಿಧಾಮದ ಸಮಸ್ಯೆಗಳ ಬಗೆಹರಿಕೆಗೆ ಚರ್ಚೆ: ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಪುನಃ ಆರಂಭಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದಲ್ಲದೆ, ಮುಕ್ತಿ ಧಾಮದಲ್ಲಿ ಎದುರಾಗಿರುವ ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಮತ್ತು ಪಟ್ಟಣಕ್ಕೆ ಅಗತ್ಯವಿರುವ ಸಾರ್ವಜನಿಕ ಸ್ಮಶಾನಕ್ಕೆ ಸೂಕ್ತ ಜಾಗವನ್ನು ಗುರುತಿಸುವ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ತಹಸಿಲ್ದಾರ್ ಮಮತಾ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
(Visited 1 times, 1 visits today)





