BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತಹಶೀಲ್ದಾರ್ ಮಮತಾ ಸ್ಥಳಕ್ಕೆ ಭೇಟಿ: ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ
  • ಪುಟ್ಟ ಮಕ್ಕಳಿಗೆ ಉಚಿತ ಶ್ರವಣ ಸಾಧನ ವಿತರಣೆ
  • ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ತುರ್ತು ನೆರವಿಗೆ ಮನವಿ
  • ರಾಗಿ ಮಾರಾಟ ಮಾಡಿ ೬ ತಿಂಗಳು ಕಳೆದರೂ ಹಣವಿಲ್ಲ
  • ರಾಜ್ಯ ಮಿನಿ ಒಲಂಪಿಕ್ಸ್ನಲ್ಲಿ ಭಾಗವಹಿಸಲು ತುಮಕೂರಿನ ಮಕ್ಕಳಿಗೆ ತರಬೇತಿ: ಜಿಲ್ಲಾಧಿಕಾರಿ
  • ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ
  • ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ
  • ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ತುರ್ತು ನೆರವಿಗೆ ಮನವಿ
news

ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ತುರ್ತು ನೆರವಿಗೆ ಮನವಿ

ಶಿಥಿಲ ಮನೆಯೊಳಗೆ ತಂದೆಯಿಲ್ಲದ ಮಗು, ಅನಾರೋಗ್ಯದ ತಾಯಿ
By News Desk BenkiyabaleUpdated:October 06, 2026 5:55 pm

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಅಜ್ಜಿಗುಡ್ಡೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ವಿಧವೆಯೊಬ್ಬರು ತಮ್ಮ ಅಪ್ರಾಪ್ತ ಮಗಳೊಂದಿಗೆ ಅಪಾಯಕಾರಿ ಶಿಥಿಲ ಮನೆಯಲ್ಲಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಕುಟುಂಬಕ್ಕೆ ತುರ್ತು ವಸತಿ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವಂತೆ ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ (ರಿ.) ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.
ಅಜ್ಜಿಗುಡ್ಡೆ ಗ್ರಾಮಕ್ಕೆ ಅಕ್ಟೋಬರ್ ೫ರಂದು ಭೇಟಿ ನೀಡಿದ ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಅಲ್ಲಿನ ಕುಟುಂಬಗಳ ಸಾಮಾಜಿಕ, ಆರ್ಥಿಕ ಮತ್ತು ವಸತಿ ಪರಿಸ್ಥಿತಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಜಯಮ್ಮ (೪೭) ಅವರ ಕುಟುಂಬದ ದುಸ್ಥಿತಿ ಗಮನಕ್ಕೆ ಬಂದಿದೆ.
ಜಯಮ್ಮ ಅವರು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದ ವಿಧವೆಯಾಗಿದ್ದು, ಅವರ ಪತಿ ನರಸಿಂಹಯ್ಯ ಅವರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಪ್ರಸ್ತುತ ಜಯಮ್ಮ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸ್ವತಃ ಅನಾರೋಗ್ಯದಿಂದ ಬಳಲುತ್ತಿರುವ ಅವರು ತಮ್ಮ ಮಗಳು ಅಮೂಲ್ಯಳನ್ನು ಸಾಕಿ, ಆಕೆಯ ಶಿಕ್ಷಣವನ್ನು ಮುಂದುವರಿಸುವುದು ಕಷ್ಟಕರವಾಗಿದೆ. ತಂದೆಯನ್ನು ಕಳೆದುಕೊಂಡಿರುವ ಅಮೂಲ್ಯ ಅಜ್ಜಿಗುಡ್ಡೆ ಸರ್ಕಾರಿ ಶಾಲೆಯಲ್ಲಿ ಪ್ರಥಮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಇನ್ನೊಂದೆಡೆ, ಕುಟುಂಬ ವಾಸಿಸುತ್ತಿರುವ ಮನೆ ತೀವ್ರ ಶಿಥಿಲಾವಸ್ಥೆಯಲ್ಲಿದ್ದು, ಈಗಾಗಲೇ ಮನೆಯ ಒಂದು ಗೋಡೆ ಕುಸಿದಿದೆ. ಉಳಿದ ಭಾಗವೂ ಅಪಾಯಕಾರಿಯಾಗಿದ್ದು, ಮಳೆ?ಗಾಳಿಯ ಸಂದರ್ಭದಲ್ಲಿ ಮನೆ ಮತ್ತಷ್ಟು ಕುಸಿಯುವ ಆತಂಕವಿದೆ. ಮನೆಯಲ್ಲಿ ಅಪ್ರಾಪ್ತ ಬಾಲಕಿ ಇರುವ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗಳ ಜೀವ ಹಾಗೂ ಸುರಕ್ಷತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಕುಟುಂಬದ ಮನೆ ಹಾಗೂ ವಾಸಸ್ಥಳಕ್ಕೆ ಸಂಬAಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ತಾತ್ಕಾಲಿಕ ಸುರಕ್ಷಿತ ಆಶ್ರಯ ಕಲ್ಪಿಸುವುದರ ಜೊತೆಗೆ, ಕುಟುಂಬದ ಅರ್ಹತೆಯನ್ನು ಪರಿಗಣಿಸಿ ಸರ್ಕಾರಿ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಬೇಕು ಎಂದು ಅಧ್ಯಕ್ಷರಾದ ತೇಜಾ ಡಿ.ಎಸ್.ರವರು ಮನವಿ ಮಾಡಿದ್ದಾರೆ.
ಅಲ್ಲದೆ, ಜಯಮ್ಮ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಡಿ ಲಭ್ಯವಿರುವ ಗ್ರಾಮ ಪಂಚಾಯಿತಿಯ ಶೇ.೨೫ರಷ್ಟು ನಿಧಿ ಹಾಗೂ ತಾಲ್ಲೂಕು ಆಡಳಿತದಡಿ ಲಭ್ಯವಿರುವ ವಿಪತ್ತು ಮತ್ತು ತುರ್ತು ಪರಿಹಾರ ವ್ಯವಸ್ಥೆಗಳ ಮೂಲಕ, ನಿಯಮಾನುಸಾರ ಸಾಧ್ಯವಿರುವ ತುರ್ತು ಹಣಕಾಸಿನ ನೆರವು ನೀಡಿ ಮನೆ ದುರಸ್ತಿ ಹಾಗೂ ಸುರಕ್ಷತಾ ಕ್ರಮಗಳಿಗೆ ಅನುದಾನ ಒದಗಿಸುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಅದೇ ರೀತಿ, ಕುಟುಂಬಕ್ಕೆ ಪರಿಶಿಷ್ಟ ಜಾತಿಯವರಿಗೆ ಲಭ್ಯವಿರುವ ಸರ್ಕಾರಿ ಯೋಜನೆಗಳು, ಸಾಮಾಜಿಕ ಭದ್ರತಾ ಸೌಲಭ್ಯಗಳು ಹಾಗೂ ಇತರೆ ಅರ್ಹ ನೆರವುಗಳನ್ನು ಒದಗಿಸುವುದರ ಜೊತೆಗೆ, ತಂದೆಯನ್ನು ಕಳೆದುಕೊಂಡಿರುವ ಅಪ್ರಾಪ್ತ ಬಾಲಕಿ ಅಮೂಲ್ಯಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಲಭ್ಯವಿರುವ ಶೈಕ್ಷಣಿಕ, ಪೌಷ್ಟಿಕ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರಧಾನ ಕಾರ್ಯದರ್ಶಿ ಶಾಂತರಾಜು ಡಿ ರವರು ಒತ್ತಾಯಿಸಿದ್ದಾರೆ.
ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮನ್ವಯದಿಂದ ತುರ್ತು ಕ್ರಮ ಕೈಗೊಂಡು, ಈ ಕುಟುಂಬಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಉಪಾಧ್ಯಕ್ಷ ಗುರುಮೂರ್ತಿ, ಸದಸ್ಯರಾದ ನಿರ್ಮಲ ಹಾಗೂ ವಿದ್ಯಾರ್ಥಿ ಲಲಿತ ಹಾಗೂ ಕಾನೂನು ವಿದ್ಯಾರ್ಥಿ ದೇವರಾಜು.ಆರ್ ಮನವಿ ಮಾಡಿದ್ದಾರೆ.

(Visited 1 times, 1 visits today)
Chikkanayakanahalli kannada news karnataka local news tumakur tumkur Tumkur mahanagara palike tumkur news ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಹುಳಿಯಾರು
Previous Articleರಾಗಿ ಮಾರಾಟ ಮಾಡಿ ೬ ತಿಂಗಳು ಕಳೆದರೂ ಹಣವಿಲ್ಲ
Next Article ಪುಟ್ಟ ಮಕ್ಕಳಿಗೆ ಉಚಿತ ಶ್ರವಣ ಸಾಧನ ವಿತರಣೆ
News Desk Benkiyabale

Related Posts

ತಹಶೀಲ್ದಾರ್ ಮಮತಾ ಸ್ಥಳಕ್ಕೆ ಭೇಟಿ: ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

October 06, 2026 5:58 pm news

ಪುಟ್ಟ ಮಕ್ಕಳಿಗೆ ಉಚಿತ ಶ್ರವಣ ಸಾಧನ ವಿತರಣೆ

October 06, 2026 5:57 pm news

ರಾಗಿ ಮಾರಾಟ ಮಾಡಿ ೬ ತಿಂಗಳು ಕಳೆದರೂ ಹಣವಿಲ್ಲ

October 06, 2026 5:53 pm news
ತಾಜಾ ಸುದ್ಧಿಗಳು
news

ತಹಶೀಲ್ದಾರ್ ಮಮತಾ ಸ್ಥಳಕ್ಕೆ ಭೇಟಿ: ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

October 06, 2026 5:58 pm
news

ಪುಟ್ಟ ಮಕ್ಕಳಿಗೆ ಉಚಿತ ಶ್ರವಣ ಸಾಧನ ವಿತರಣೆ

October 06, 2026 5:57 pm
news

ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ತುರ್ತು ನೆರವಿಗೆ ಮನವಿ

October 06, 2026 5:55 pm
news

ರಾಗಿ ಮಾರಾಟ ಮಾಡಿ ೬ ತಿಂಗಳು ಕಳೆದರೂ ಹಣವಿಲ್ಲ

October 06, 2026 5:53 pm
news

ರಾಜ್ಯ ಮಿನಿ ಒಲಂಪಿಕ್ಸ್ನಲ್ಲಿ ಭಾಗವಹಿಸಲು ತುಮಕೂರಿನ ಮಕ್ಕಳಿಗೆ ತರಬೇತಿ: ಜಿಲ್ಲಾಧಿಕಾರಿ

October 06, 2026 5:52 pm
news

ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ

October 05, 2026 5:34 pm
Our Youtube Channel
Our Picks

ತಹಶೀಲ್ದಾರ್ ಮಮತಾ ಸ್ಥಳಕ್ಕೆ ಭೇಟಿ: ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

October 06, 2026 5:58 pm

ಪುಟ್ಟ ಮಕ್ಕಳಿಗೆ ಉಚಿತ ಶ್ರವಣ ಸಾಧನ ವಿತರಣೆ

October 06, 2026 5:57 pm

ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ತುರ್ತು ನೆರವಿಗೆ ಮನವಿ

October 06, 2026 5:55 pm

ರಾಗಿ ಮಾರಾಟ ಮಾಡಿ ೬ ತಿಂಗಳು ಕಳೆದರೂ ಹಣವಿಲ್ಲ

October 06, 2026 5:53 pm

ರಾಜ್ಯ ಮಿನಿ ಒಲಂಪಿಕ್ಸ್ನಲ್ಲಿ ಭಾಗವಹಿಸಲು ತುಮಕೂರಿನ ಮಕ್ಕಳಿಗೆ ತರಬೇತಿ: ಜಿಲ್ಲಾಧಿಕಾರಿ

October 06, 2026 5:52 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ತಹಶೀಲ್ದಾರ್ ಮಮತಾ ಸ್ಥಳಕ್ಕೆ ಭೇಟಿ: ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

By News Desk BenkiyabaleOctober 06, 2026 5:58 pm

ಹುಳಿಯಾರು: ಸೋಮವಾರ ಬೆಳಗ್ಗೆ ಮತ್ತು ರಾತ್ರಿ ವೇಳೆಗೆ ಹುಳಿಯಾರು ಪಟ್ಟಣದಲ್ಲಿ ಭರ್ಜರಿ ಮಳೆ ಸುರಿದ ಪರಿಣಾಮ ಪಟ್ಟಣದ ಹಲವು ಭಾಗಗಳಲ್ಲಿ…

ಪುಟ್ಟ ಮಕ್ಕಳಿಗೆ ಉಚಿತ ಶ್ರವಣ ಸಾಧನ ವಿತರಣೆ

October 06, 2026 5:57 pm

ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ತುರ್ತು ನೆರವಿಗೆ ಮನವಿ

October 06, 2026 5:55 pm

ರಾಗಿ ಮಾರಾಟ ಮಾಡಿ ೬ ತಿಂಗಳು ಕಳೆದರೂ ಹಣವಿಲ್ಲ

October 06, 2026 5:53 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.