BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವಿಶೇಷ ಚೇತನರಿಂದ ಎಸ್‌ಐಆರ್ ಕುರಿತು ಜಾಗೃತಿ ಜಾಥಾ
  • ಗ್ರಾಮೀಣಾಭಿವೃದ್ಧಿಗೆ ಸಹಕಾರ ತತ್ವವೇ ಬುನಾದಿ
  • ಪ್ರತಿವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದರೂ ನ್ಯಾಯಾಲಯಗಳಲ್ಲಿ ಬಾಕಿ
  • ಆರೋಗ್ಯಕರ ಬದುಕಿಗೆ ಕಲೆಯಂತಹ ಹವ್ಯಾಸಗಳು ಅವಶ್ಯಕ
  • ವರದಿಯ ನಂತರ ಹೆದ್ದಾರಿ ಬದಿಯಲ್ಲಿ ಎತ್ತರದ ಶಾಶ್ವತ ತಡೆಗೋಡೆ
  • ಮಹಿಳೆಯರು ರಾಜಕೀಯ ನಾಯಕತ್ವ ಗುಣ ಬೆಳೆಸಿಕೊಳ್ಳಿ
  • ತುಮಕೂರು ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕ್ರಮ: ದೀಪ ಚೋಳನ್
  • ಕ್ರೀಡೆ ಕೇವಲ ಆಟವಲ್ಲ, ಉದ್ಯೋಗಕ್ಕೂ ಸಹಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಭೀಕರ ಅಪಘಾತದಲ್ಲಿ ಕಾರ್ಮಿಕರ ಸಾವು: ರೂ 25 ಲಕ್ಷ  ಪರಿಹಾರಕ್ಕೆ ಸಿಐಟಿಯು ಆಗ್ರಹ
ಇತರೆ ಸುದ್ಧಿಗಳು

ಭೀಕರ ಅಪಘಾತದಲ್ಲಿ ಕಾರ್ಮಿಕರ ಸಾವು: ರೂ 25 ಲಕ್ಷ  ಪರಿಹಾರಕ್ಕೆ ಸಿಐಟಿಯು ಆಗ್ರಹ

By News Desk BenkiyabaleUpdated:August 26, 2022 4:48 pm

ತುಮಕೂರು :

ಇಂದು ಬೆಳೆಗಿನ‌ಜಾವ ತುಮಕೂರು ಜಿಲ್ಲೆಯ ಕಳ್ಳಂಬೆಳ್ಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಲಿಂಗಸ್ಗೂರು ಮೂಲದ 9 ಜನರ ದುರ್ಮರಣ ಸಂಭವಿಸಿರುವ ಘಟನೆ ಕುರಿತು ತೀವ್ರ ಆತಂಕ ಹಾಗೂ ಸಂತಾಪವನ್ನು ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ಅವರು ಕೂಡಲೇ ಸಾವನಪ್ಪಿದ ಕಾರ್ಮಿಕರ  ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಬೇಕು ಮತ್ತು ಸಾವನಪ್ಪಿದ ಪ್ರತಿ ಕುಟುಂಬಕ್ಕೆ ರೂ 25ಲಕ್ಷ ಪರಿಹಾರವನ್ನ ಸರ್ಕಾರ ಮತ್ತು ಕಲ್ಯಾಣ ಮಂಡಳಿಯಿಂದ ಘೋಷಿಸಬೇಕು ಮತ್ತು ಗಾಯಾಳುಗಳಿಗೂ ಸೂಕ್ತ ಪರಿಹಾರ ಹಾಗೂ ಸಂಪೂರ್ಣ ಚಿಕಿತ್ಸಾವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕೆಂದು ಎಂದು ಆಗ್ರಹಿಸಿದೆ.

ರಾಯಚೂರು ಜಿಲ್ಲೆಯ ಸಿರವಾರ, ಮಾನ್ವಿ, ಮತ್ತು ಸಿಂಧನೂರಿನಿಂದ ವಾಹನದಲ್ಲಿ 20 ಜನರು ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ದುಡಿಯಲು ಹೊರಟಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂರು ಮಹಿಳೆಯರು, ನಾಲ್ಕು ಜನ ಪುರುಷರು ಹಾಗೂ ಇಬ್ಬರು ಮಕ್ಕಳು ಸಾವನಪ್ಪಿದ್ದು ಇನ್ನೂ ನಾಲ್ವರ ಸ್ಥಿತಿ‌‌ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಹಲವು ದಶಕಗಳಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಬಡವರು ಪ್ರತಿ ವರ್ಷ ಬೆಂಗಳೂರು ಮಹಾನಗರಕ್ಕೆ ನಿರ್ಮಾಣ ಕೆಲಸಗಳಿಗೆ ವಲಸೆ ಬರುತ್ತಿರುವುದು ನಡೆದೇ ಇದೆ. ಈ ಜಿಲ್ಲೆಗಳ ಅಭಿವೃದ್ದಿ ಹೆಸರಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ಸರಕಾರದ ಹಣವು ನೀರಿನಂತೆ ಹರಿಯುತ್ತಿದ್ದರೂ ಅದು ಅಭಿವೃದ್ದಿ ಮತ್ತು ಬಡವರಿಗೆ ಉದ್ಯೋಗಕ್ಕೆ ಮತ್ತು ಅವರ ಬದುಕಿನ ಉನ್ನತಿಗೆ ಬಳಕೆಯಾಗದೇ ಭ್ರಷ್ಟಾಚಾರದ ಮೂಲಕ ರಾಜಕಾರಣಿಗಳು,ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಮನೆಯ ಬೊಕ್ಕಸತುಂಬುತ್ತಿರುವುದು ವಾಸ್ತವ. ಹೀಗಾಗಿ ಇಂತಹ ವಲಸೆ ಕಾರ್ಮಿಕರು ಹಾಗೂ ಅಮಾಯಕರ ಸಾವಿಗೆ  ಈ ಭಾಗದ ಜನಪ್ರತಿನಿಧಿಗಳು,ಅಧಿಕಾರಿಗಳು ಮತ್ತು ಸರ್ಕಾರವೇ ನೇರ ಹೊಣೆ. ದುಡಿಯುವ ಕೈಗಳಿಗೆ ಕೆಲಸ, ಹೊಟ್ಟೆಗೆ ಹಿಟ್ಟನ್ನು ಕೊಡದ ಈ ಜನವಿರೋಧಿ, ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಪ್ರತಿದಿನವೂ ಒಂದಲ್ಲ ಒಂದು ರೂಪದಲ್ಲಿ ಬಡವರ
ಸಾವಿಗೆ ಕಾರಣವಾಗುತ್ತಿದ್ದಾರೆ ಎನ್ನುವುದಕ್ಕೆ ಇಂತಹ ಘಟನೆಗಳೇ ಪ್ರತ್ಯಕ್ಷ ಸಾಕ್ಷಿಯಾಗಿವೆ.

ಜನರು‌ ವಾಸಿಸುವ ತಾಲೂಕು ಜಿಲ್ಲೆಗಳಲ್ಲೇ ಉದ್ಯೋಗಾವಕಾಶಗಳನ್ನು ಸೃಷ್ಡಿಸಿದರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದರೆ ಜನರು ವಲಸೆ ಬಂದು ಈ ರೀತಿ ಭೀಕರ ಸಾವಿಗೀಡಾಗುವ ಸಂಭವ ಇರುತ್ತಿರಲಿಲ್ಲ. ಆದರೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಹೆಸರಲ್ಲಿ ಕೆಲವೆ ಜನರು ಕಲ್ಯಾಣಗೊಂಡು ಲಕ್ಷಾಂತರ ಜನರ ಬದುಕು ನಿರ್ಲಕ್ಷ್ಯ ಕ್ಕೆ ಒಳಗಾಗುತ್ತಿರುವುದು
ಕಳೆದ 75 ವರ್ಷಗಳಿಂದ ನಡದೆ ಇದೆ. ಇಂತಹ ತಾರತಮ್ಯ ದ ವಿರುದ್ದ ಎಲ್ಲ ಜನಪರ ಸಂಘಟನೆಗಳು ಬೀದಿಗಿಳಿದು ಹೋರಾಡಬೇಕಿದೆ.ಇಂತಹ ಚಳವಳಿಯಲ್ಲಿ ಸಕ್ರಿಯವಾಗಿ ಸಿಐಟಿಯು ನೇತೃತ್ವದ ಎಲ್ಲ ಜನಪರ ಸಂಘಟನೆಗಳು ಸಕ್ರಿಯವಾಗಿ ಭಾಗಿಯಾಗಲಿವೆ. ಇಂದು ಪ್ರಭುತ್ವದ ವೈಫಲ್ಯದಿಂದ ಉಂಟಾಗಿ ಸಾವನಪ್ಪಿರುವ ಕುಟುಂಬಗಳಿಗೆ ಪರಿಹಾರ ಮತ್ತು ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗವನ್ನು ನೀಡಬೇಕು ಈ ಭಾಗದ ಜನರ ಗೂಳೆ ತಪ್ಪಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಶೇಷ ಪ್ರಯತ್ನ ಮಾಡಬೇಕು ಜೊತೆಗೆ ಅನಧಿಕೃತ ಕ್ರೂಷರ್ ಓಡಾಟಕ್ಕೆ  ಮತ್ತು ಇಂತಹ ಮೀತಿಮೀರಿದ ಓವರ್‌ಲೋಡ್ ಹಾಗೂ‌ ನಿರ್ಲಕ್ಷ್ಯದ ವಾಹನ ಓಡಿಸಲು ಕಾರಣವಾದ‌ ಸಾರಿಗೆ ಇಲಾಖೆ ಅಧಿಕಾರಗಳ ವಿರುದ್ಧ ಪ್ರಕರಣ ‌ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

(Visited 1 times, 1 visits today)
tumkur
Previous Articleಆಟೋ ಮೇಲೆ ಮರ ಬಿದ್ದು ಗಾಯಗೊಂಡ ಚಾಲಕನ ಮನೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ.
Next Article ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ
News Desk Benkiyabale

Related Posts

ವಿಶೇಷ ಚೇತನರಿಂದ ಎಸ್‌ಐಆರ್ ಕುರಿತು ಜಾಗೃತಿ ಜಾಥಾ

July 04, 2026 5:05 pm news

ಗ್ರಾಮೀಣಾಭಿವೃದ್ಧಿಗೆ ಸಹಕಾರ ತತ್ವವೇ ಬುನಾದಿ

July 04, 2026 4:20 pm news

ಪ್ರತಿವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದರೂ ನ್ಯಾಯಾಲಯಗಳಲ್ಲಿ ಬಾಕಿ

July 04, 2026 4:18 pm news
ತಾಜಾ ಸುದ್ಧಿಗಳು

ವಿಶೇಷ ಚೇತನರಿಂದ ಎಸ್‌ಐಆರ್ ಕುರಿತು ಜಾಗೃತಿ ಜಾಥಾ

July 04, 2026 5:05 pm

ಗ್ರಾಮೀಣಾಭಿವೃದ್ಧಿಗೆ ಸಹಕಾರ ತತ್ವವೇ ಬುನಾದಿ

July 04, 2026 4:20 pm

ಪ್ರತಿವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದರೂ ನ್ಯಾಯಾಲಯಗಳಲ್ಲಿ ಬಾಕಿ

July 04, 2026 4:18 pm

ಆರೋಗ್ಯಕರ ಬದುಕಿಗೆ ಕಲೆಯಂತಹ ಹವ್ಯಾಸಗಳು ಅವಶ್ಯಕ

July 04, 2026 4:13 pm

ವರದಿಯ ನಂತರ ಹೆದ್ದಾರಿ ಬದಿಯಲ್ಲಿ ಎತ್ತರದ ಶಾಶ್ವತ ತಡೆಗೋಡೆ

July 04, 2026 4:12 pm

ಮಹಿಳೆಯರು ರಾಜಕೀಯ ನಾಯಕತ್ವ ಗುಣ ಬೆಳೆಸಿಕೊಳ್ಳಿ

July 03, 2026 5:50 pm
Our Youtube Channel
Our Picks

ವಿಶೇಷ ಚೇತನರಿಂದ ಎಸ್‌ಐಆರ್ ಕುರಿತು ಜಾಗೃತಿ ಜಾಥಾ

July 04, 2026 5:05 pm

ಗ್ರಾಮೀಣಾಭಿವೃದ್ಧಿಗೆ ಸಹಕಾರ ತತ್ವವೇ ಬುನಾದಿ

July 04, 2026 4:20 pm

ಪ್ರತಿವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದರೂ ನ್ಯಾಯಾಲಯಗಳಲ್ಲಿ ಬಾಕಿ

July 04, 2026 4:18 pm

ಆರೋಗ್ಯಕರ ಬದುಕಿಗೆ ಕಲೆಯಂತಹ ಹವ್ಯಾಸಗಳು ಅವಶ್ಯಕ

July 04, 2026 4:13 pm

ವರದಿಯ ನಂತರ ಹೆದ್ದಾರಿ ಬದಿಯಲ್ಲಿ ಎತ್ತರದ ಶಾಶ್ವತ ತಡೆಗೋಡೆ

July 04, 2026 4:12 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ವಿಶೇಷ ಚೇತನರಿಂದ ಎಸ್‌ಐಆರ್ ಕುರಿತು ಜಾಗೃತಿ ಜಾಥಾ

By News Desk BenkiyabaleJuly 04, 2026 5:05 pm

ತಿಪಟೂರು: ನಗರದಲ್ಲಿ ವಿಶೇಷ ಚೇತನರಿಂದ ತ್ರಿಚಕ್ರ ವಾಹನದ ಮೂಲಕ ಎಸ್ ಐ ಆರ್ ಕುರಿತು ಜಾಗೃತಿ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು.…

ಗ್ರಾಮೀಣಾಭಿವೃದ್ಧಿಗೆ ಸಹಕಾರ ತತ್ವವೇ ಬುನಾದಿ

July 04, 2026 4:20 pm

ಪ್ರತಿವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದರೂ ನ್ಯಾಯಾಲಯಗಳಲ್ಲಿ ಬಾಕಿ

July 04, 2026 4:18 pm

ಆರೋಗ್ಯಕರ ಬದುಕಿಗೆ ಕಲೆಯಂತಹ ಹವ್ಯಾಸಗಳು ಅವಶ್ಯಕ

July 04, 2026 4:13 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.