ಕೊರಟಗೆರೆ: ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಸಮಾಜದಲ್ಲಿ ಸಮುದಾಯವು ಮುನ್ನೆಲೆಗೆ ಬರಬೇಕಾದರೆ ನಮ್ಮ ಮಕ್ಕಳು ಕಡ್ಡಾಯವಾಗಿ ವಿದ್ಯಾವಂತಗರಾಗಲೇಬೇಕು ಅದಕ್ಕಾಗಿ ಮಡಿವಾಳ ಯುವ ವೇದಿಕೆಯಿಂದ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಕಾಂತರಾಜು ತಿಳಿಸಿದರು.
ಪಟ್ಟಣದ ಹೊರವಲಯದ ನವೀನ್‌ಕಂಫರ್ಟ್ ಸಭಾಂಗಣದಲ್ಲಿ ಮಡಿವಾಳ ಯುವ ವೇದಿಕೆ ಮತ್ತು ಮಡಿವಾಳ ಮಲ್ಲಿಗಮ್ಮ ಸೇವಾ ಟ್ರಸ್ಟ್ ವತಿಯಿಂದ ನಡೆದ ಮಡಿವಾಳ ಜನಾಂಗದ ಪ್ರತಿ ಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ ಮಡಿವಾಳ ಜನಾ ಂಗವು ಹಿಂದುಳಿದ ಜನಾಂಗಗಳಲ್ಲಿ ಅತ್ಯಂತ ಹಿಂದೆ ಇರುವ ಸಮುದಾಯವಾಗಿದೆ. ಹಿಂದಿನಿAದಲೂ ಈ ಸಮುದಾಯವನ್ನು ಸಮಾಜದಲ್ಲಿ ಕೀಳು ಭಾವನೆಯಿಂದ ನೋಡುತ್ತಿದ್ದಾರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಜನಾಂಗಕ್ಕೆ ಸಿಗಬೇಕಿದ್ದ ಪರಿಶಿಷ್ಠ ಜಾತಿಯ ಸ್ಥಾನ ಸಿಗಲಿಲ್ಲ ಆದರ ಹೋರಾಟ ಮುಂದುವರೆಯುತ್ತಿದೆ ಎಂದರು.
ಮಡಿವಾಳ ಮಲ್ಲಿಗಮ್ಮ ಸೇವಾ ಟ್ರಸ್ಟ್ನ ಕಾರ್ಯ ದರ್ಶಿ ತೋಳಸಮ್ಮ ಮಾತನಾಡಿ ಈ ಸಮಾಜಕ್ಕೆ ಮಡಿವಾಳ ಜನಾಂಗ ಅನೇಕ ಕೊಡಿಗೆಗಳನ್ನು ನೀಡಿದೆ ಸಮಾಜದ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸೇವಾ ಟ್ರಸ್ಟ್ ಕೆಲಸ ಮಾಡುತ್ತದೆ ಎಂದರು.
ತಾಲೂಕು ಮಡಿವಾಳ ಸಂಘದ ಗೌರಾವಾದ್ಯಕ್ಷ ಹಾಗೂ ಬಗರ್ ಹುಕ್ಕುಂ ಕಮಿಟಿ ಸದಸ್ಯ ಸಿ. ರಂಗಯ್ಯ, ನಿವೃತ್ತ ಶಿಕ್ಷಕ ಕೃಷ್ಣಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಯಲ್ಲಿ ತೇರ್ಗಡೆಯಾದ ೪೦ ಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾ ಯಿತು, ಕಾರ್ಯಕ್ರಮದಲ್ಲಿ ಸಮುದಾಯದ ಗೌರ ವಾದ್ಯಕ್ಷ ಅಶ್ವತ್ಥಪ್ಪ, ಮಡಿವಾಳ ಮಲ್ಲಿಗಮ್ಮ ಟ್ರಸ್ಟ್ ಅಧ್ಯಕ್ಷೆ ಉಮಾದೇವಿ, ಶಿಕ್ಷಕಿ ವಿಶಾಲಕ್ಷಮ್ಮ, ಯುವ ವೇದಿಕೆಯ ಸತೀಶ್, ನವೀನ್‌ಕುಮಾರ್, ಪಾಂಡುವರ್ದನ್, ಶರತ್, ಮಹೇಶ್, ರಾಜೇಶ್, ಮಂಜುನಾಥ್, ಗಿರೀಶ್ ಹಾಜರಿದ್ದರು.

(Visited 1 times, 1 visits today)