ಚಿಕ್ಕನಾಯಕನಹಳ್ಳಿ: ದಿನೇ ದಿನೇ ಹೆಚ್ಚುತ್ತಿರುವಂತಹ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರವಾಗಿ ಶಿಸ್ತುಬದ್ದವಾಗಿ ಅಧ್ಯಯನ ನಡೆಸಿ ಅರ್ಥೈಹಿಸಿಕೊಂಡು ಪರೀಕ್ಷೆಗಳನ್ನು ಹೆದರಿಸಿದರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾದ್ಯ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದಲ್ಲಿ ಅವರ ಗೃಹಕಚೇರಿಯ ಸಭಾಂಗಣದಲ್ಲಿ   ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿ,  ಕೃಷಿ ಕೊಟಾ ಅಡಿಯಲ್ಲಿ  ಹಲವಾರು ಕೋರ್ಸ್ ಗಳಿಗೆ ಸೇರ ಬಯಸುವ ವಿಧ್ಯಾರ್ಥಿಗಳಿಗೆ ಎಸ್.ಬಿ.ಚಾರಿಟಬಲ್ ಟ್ರಸ್ಟ್ನ ವತಿಯಿಂದ ಕಳೆದ ಮೂರುದಿನಗಳಿಂದ ನಡೆದ ಪ್ರಾಯೋಗಿಕ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ  ಅವರು ತಂದೆತಾಯಿಗಳಿಗೆ ಹೊರೆಯಾಗದಂತೆ ಉತ್ತಮ ವಾಗಿ ಅದ್ಯಯನ ನಡೆಸಿ ನಿರಂತರ ಕಲಿಕೆಯನ್ನು ರೂಢಿಸಿಕೊಳ್ಳಿ ಸರ್ಕಾರಿ ಕೋಟಾದಡಿ ಸೀಟುಗಳನ್ನು ತೆಗೆದುಕೊಂಡು ನಿಮ್ಮ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಇರುವಂತಹ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ  ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತಹ ತರಬೇತಿ ಇದಾಗಲೆಂದೆ ನುರಿತ ಹಾಗೂ ಅತ್ಯುನ್ನತವಾದ ಅಂತಹ ಸಂಪನ್ಮೂಲನ ವ್ಯಕ್ತಿಗಳಿಂದ ನಿಮಗೆ ತರಬೇತಿ ನೀಡಿಸಲಾಗಿದೆ ಇ೯ದರಿಂದ ನೀವುಗಳು ಕೂಡ ಹೆಚ್ಚು ಇದರ ಸದುಪಯೋಗ ಪಡೆದುಕೊಂಡಿರುತ್ತೀರಿ ಎಂದು ಭಾವಿಸಿದ್ದೇನೆ ಮುಂದಿನ ದಿನಗಳಲ್ಲಿ ಸಿಇಟಿ ಹಾಗೂ ನೀಟ್ ತರಬೇತಿ ದೀರ್ಘವಾಗಿ ಪಡೆಯ ಬಯಸುವವರು ಪ್ರತಿ ಭಾನುವಾರ ಕೂಡ ಕಾರ್ಯಗಾರ ನಡೆಸಲು ತೀರ್ಮಾನಿಸಿದ್ದೇವೆ ಇದರ ಸದುಪಯೋಗವನ್ನು ನಮ್ಮ ತಾಲೂಕಿನ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪಡೆಯಬೇಕು ಎಂದರು
ಪಶು ಇಲಾಖೆಯ ಸಹಾಯಕ ನಿರ್ದೇಶಕ ರೇ ಮಾ ನಾಗಭೂಷಣ್ ಮಾತನಾಡುತ್ತಾ ಪ್ರವೇಶ ಬಯಸಿ ತರಬೇತಿ ಪಡೆಯಲು ಬಂದಿದ್ದೀರಿ ಈ ಒಂದು ತರಬೇತಿ ಶಿಬಿರದಲ್ಲಿ ಎಲ್ಲಾ ಪರಿಕರಗಳನ್ನು ನಿಮಗೆ ಪ್ರಾತ್ಯಕ್ಷಿಕೆಯ ರೂಪದಲ್ಲಿ ಲಭ್ಯವಾಗಿ ಇದರ ಸಾಕಷ್ಟು ಮೌಲ್ಯವನ್ನು ಪಡೆದಿದ್ದೀರಿ ಇದರಿಂದ ಮುಂದಿನ ಶೈಕ್ಷಣಿಕ ಪ್ರಗತಿಗೆ ೧೦ ಹಲವು ದಾರಿಗಳನ್ನು ಕಲ್ಪಿಸಿ ಕೊಡುತ್ತದೆ ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು
ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡುತ್ತಾ ತಾಲೂಕಿನಾದ್ಯಂತ ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ೫೯೦ ರಿಂದ ೬೦೦ ಅಂಕ ಪಡೆದಿರುವ ೪೪ ವಿದ್ಯಾರ್ಥಿಗಳಿದ್ದು ೬೦೦ ಅಂಕದಿAದ ೬೨೦ ಅಂಕ ಪಡೆದಿರುವ ೪೪ ವಿದ್ಯಾರ್ಥಿಗಳು ಒಟ್ಟು ೮೮ ವಿದ್ಯಾರ್ಥಿಗಳು ಅತ್ಯಂತ ಅಂಕ ಪಡೆಯುವ ಮೂಲಕ ಶಿಕ್ಷಕರು ಹಾಗೂ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ ಇದರಿಂದ ನನ್ನ ಕರ್ತವ್ಯ ಹೆಚ್ಚು ಶ್ರೇಷ್ಠವಾಗಿಕೊಳ್ಳಲು ನಿರಂತರವಾಗಿ ಜವಾಬ್ದಾರಿಯುತವಾಗಿ ನಡೆಯಬೇಕಿದೆ ಹೀಗಿರುವಾಗ ತಾವುಗಳು ಈ ಒಂದು ಕಾರ್ಯಗಾರದ ಸದುಪಯೋಗ ದಿಂದಾಗಿ ಉತ್ತಮ ಅಧಿಕಾರಿಗಳಾಗಿ ಶಾಸಕರಿಗೂ ಹಾಗೂ ತಾಲೂಕಿಗೂ ಮತ್ತು ನಿಮ್ಮ ಪಾಲಕರಿಗೂ ಗೌರವ ತರುವಂತಹ ಮಕ್ಕಳಾಗಿ ಎಂದರು
 ಈ ಸಂದರ್ಭದಲ್ಲಿ  ತರಬೇತಿಯನ್ನು ನೀಡಿದ ಕೃಷಿ ಇಲಾಖೆ ಯ ಸಹಾಯಕ ನಿರ್ದೇಶಕ   ಶಿವರಾಜ್, ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ  ಡಾ.ರೆ.ಮ.ನಾಗಭೂಣ್, ಕೃಷಿ ಸಂಶೋಧಕ  ಡಾಕ್ಟರ್ ರಘುಪತಿ ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ   ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸಾಚೀನಾಗೆಶ್ , ಸೋಮಣ್ಣ ರವಿಕುಮಾರ್ ಜಾಕೀರ್ ಕುಮಾರ್ ನಾಗರಾಜು ಸೇರಿದಂತೆ ಇನ್ನೂ ಮೊದಲಾದವರು ಉಪಸ್ಥಿತರಿದ್ದರು
(Visited 1 times, 1 visits today)