ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಕಾನೂನು ಕ್ರಮ ಹಾಗೂ ಹಲವು ರೈತರ ಜ್ವಲಂತ ಸಮಸ್ಯೆಗಳ ನಿವಾರಣಗೆ ಆಡಳಿತಾತ್ಮಕ ಕ್ರಮಕ್ಕೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದಿಂದ ಜಿಲ್ಲಾ ಉಸ್ತುವಾರಿ ಹಾಗು ಗೃಹಸಚಿವರಾದ ಡಾ. ಜಿ. ಪರಮೇಶ್ವರ್‌ರವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ತೀನಂಶ್ರೀ ಭವನದಲ್ಲಿ ಡಾ. ಜಿ. ಪರಮೇಶ್ವರ್‌ರವರು ಪ್ರಗತಿಪರಿಶೀಲನಾ ಸಭೆಯನ್ನು ನಡೆಸಿದ ನಂತರ ಗೃಹಸಚಿವರಿಗೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ತಮ್ಮ ಮನವಿ ಸಲ್ಲಿಸಿದರು.
ತಾಲ್ಲೂಕಿನಲ್ಲಿ ರೈತರಿಗೆ ಸಸ್ಯಪೋಷಕಾಂಶಗಳ ಬಗ್ಗೆ ಒಂದು ದಿನದ ತರಬೇತಿ ನೀಡುವ ಬಗ್ಗೆ ಒಂದು ವರ್ಷದ ಹಿಂದೆ ನಿರ್ಣಯವಾಗಿದ್ದರೂ ಇನ್ನೂ ನೀಡಿಲ್ಲ ತಕ್ಷಣ ತರಬೇತಿ ಕಾರ್ಯಕ್ರಮ ಹಮ್ಮಿ ಕೊಳ್ಳಬೇಕು. ತಾಲ್ಲೂಕಿನಲ್ಲಿ ನಕಲಿ ದಾಖಲೆ, ನಕಲಿ ವಾರಸುದಾರರನ್ನು ಸೃಷ್ಠಿಸಿ ರೈತರ ಜಮೀನುಗಳನ್ನು ಅಕ್ರಮಖಾತೆ ಮಾಡುವ ದಂಧೆ ಕೋರರ ತಂಡ ಕಾರ್ಯಪ್ರವೃತ್ತರಾಗಿದ್ದಾರೆ. ಇಂತಹ ಪ್ರಕರಣಗಳು ದಿನೇ ದಿನೇ ಬೆಳಕಿಗೆ ಬಂದಿದ್ದರೂ ತಪ್ಪಿತಸ್ಥರಿಗೆ ಯಾವುದೇ ಶಿಕ್ಷೆಯಾಗಿಲ್ಲ, ಇವರೊಂದಿಗೆ ಕೈ ಜೋಡಿಸಿರುವ ಇಲಾಖೆ ಅಧಿಕಾರಿಗಳ ತಪ್ಪು ಸಾಬೀತಾದರೂ ಯಾವುದೇ ಕಾನೂನು ಕ್ರಮ ಜರುಗಿಸದ ಕಾರಣ ದಂಧೆಕೋರರ ಭಯ ಸಾರ್ವ ಜನಿಕರ ಮೇಲಾಗಿದೆ. ತಕ್ಷಣ ಇವರ ಮೇಲೆ ಕ್ರಮಕೈಗೊಳ್ಳÀಬೇಕು ಎಂದರು.
ತಾಲ್ಲೂಕಿನಲ್ಲಿ ನಡೆದಿರುವ ಗಣಿಬಾದಿತ ಕಾಮ ಗಾರಗಳು ಅತ್ಯಂತ ಕಳಪೆಮಟ್ಟದ್ದಾಗಿದೆ, ಟೆಂಡರ್ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆದಿದೆ, ಅನುಷ್ಠಾನದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಶಾಮೀಲಿನಿಂದ ಕಳೆಪೆ ಕಾಮಗಾರಿ ನಡೆದು ವ್ಯಾಪಕ ಭ್ರಷ್ಟಾಚಾರವಾಗಿದೆ ಎಂದರು.
(Visited 1 times, 1 visits today)