ಚಿಕ್ಕನಾಯಕನಹಳ್ಳಿ: ದಲಿತರಲ್ಲಿ ಒಳ ಮೀಸಲಾತಿಗಾಗಿ ರಾಜ್ಯದಲ್ಲಿ ನಡೆದಿರುವ ಜಾತಿಗಣಿತಿ ಕಾರ್ಯ ತಾಲ್ಲೂಕಿನಲ್ಲಿ ಬೇಕಾಬಿಟ್ಟಿಯಂತೆ ನಡೆಸಲಾಗುತ್ತಿದ್ದು ಸಂಬAಧಿಸಿದ ಅಧಿಕಾರಿವರ್ಗ ದಿವ್ಯ ನಿರ್ಲ್ಯಕ್ಷ ತೋರಿದೆ ಎಂದು ಛಲವಾದಿ ಮಹಾಸಭಾದ ತಾಲ್ಲೂಕು ಮುಖಂಡರು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ನಿರಂಜನ್ ಮಾತನಾಡಿ, ಪರಿಶಿಷ್ಟಜಾತಿಯಡಿ ಬರುವ ೧೦೧ ಜಾತಿಗಳಿಗೆ ಸಮರ್ಪಕವಾಗಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡುವ ಉದ್ದೇಶದಿಂದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ರವರ ಏಕಸದಸ್ಯಪೀಠವನ್ನು ಸರ್ಕಾರ ನೇಮಿಸಿದೆ. ಸದರಿ ಆಯೋಗವು ಸಮೀಕ್ಷೆ ನಡೆಸಿ ಮಾಹಿತಿ ನೀಡುವ ಸಲುವಾಗಿ ರಾಜ್ಯಾದ್ಯಂತ ಜಾತಿ ಸಮೀಕ್ಷೆಕಾರ್ಯ ನಡೆದಿದೆ. ಈ ಸಮೀಕ್ಷೆ ನಮಗೆ ಅತ್ಯಂತ ಉಪಯುಕ್ತವಾದುದಾಗಿದೆ. ಆದರೆ ತಾಲ್ಲೂಕಿನಲ್ಲಿ ಈಗಾಗಲೇ ಹತ್ತುದಿನದಿಂದ ನಡೆದಿರುವ ಸಮೀಕ್ಷೆಕಾರ್ಯ ಕೇವಲ ಕಾಟಾಚಾರವೆಂಬತೆ ನಡೆದಿದೆ ಉಸ್ತು ವಾರಿಯ ಪ್ರಮುಖರಾದ ತಹಸೀಲ್ದಾರ್ ರಾಗಲಿ, ಹೆಚ್ಚು ಜವಾಬ್ದಾರಿ ಹೊಂದಿದ ಸಮಾಜಕಲ್ಯಾಣ ಇಲಾಖೆಯಾಗಲಿ ಈ ಸಮೀಕ್ಷಾ ಕಾರ್ಯದ ಮಹತ್ವದ ಅರಿವೆ ಇಲ್ಲದಂತೆ ವರ್ತಿ ಸಿದ್ದಾರೆ. ಸಮೀಕ್ಷೆಯಲ್ಲಿ ನಿಯೋಜನೆಗೊಂಡ ಸಿಬ್ಬಂದಿ ಹತ್ತು ದಿನ ಕಳೆದರೂ ತಾಲ್ಲೂಕಿನ ಹಲವು ಗ್ರಾಮಗಳ ಅದರಲ್ಲೂ ದಲಿತ ಕಾಲೋನಿಗಳಿಗೆ ಬಂದೇ ಇಲ್ಲ, ಪರಿಶಿಷ್ಟಜಾತಿಯವರಿಗೆ ಸಮೀಕ್ಷೆಯಲ್ಲಿ ೪೫ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಖುದ್ದಾಗಿ ಪ್ರಶ್ನಿಸಿ ನಮೂದಿಸಬೇಕಿದ್ದರೂ ಹಲವೆಡೆ ಸಮಿಕ್ಷಾ ಸಿಬ್ಬಂದಿ ತಾವೆ ಕುಳಿತಲ್ಲಿಯೇ ಭರ್ತಿಮಾಡುತ್ತಿದ್ದಾರೆ. ಇದರಿಂದ ಮೂಲ ಆಶಯಗಳಿಗೆ ದಕ್ಕೆ ಉಂಟಾಗಲಿದೆ. ಗ್ರಾಮಗಳಲ್ಲಿ ಇನ್ನು ಹಲವೆಡೆ ಅಸ್ಪೃಷ್ಯತೆ ಆಚರಣೆಯಿದೆ, ಕೆಲವಡೆ ಮಂದಿರ, ಶುಭ ಸಮಾರಂಭಗಳಿಗೆ ಪರಿಶಿಷ್ಟರಿಗೆ ಪ್ರವೇಶವಿರುವುದಿಲ್ಲ, ಇಂತಹ ಸೂಕ್ಷö್ಮ ವಿಚಾರಗಳು ಸಮೀಕ್ಷೆಯಲ್ಲಿ ಗೊತ್ತಾಗಬೇಕಿದೆ, ಆದರೆ ಕ್ಷೇತ್ರದಲ್ಲಿ ನಡೆದಿರುವ ಕಾಟಾಚಾರದ ಸಮೀಕ್ಷೆಯಲ್ಲಿ ಇಂತಹ ಹಲವು ಸತ್ಯಗಳು ಮುಚ್ಚುಹೋಗುವ ಅಪಾಯವಿದೆ ಎಂದರು. ಜಿಲ್ಲಾ ಸದಸ್ಯ ಆನಂದ್ ಮಾತನಾಡಿ ಕೆಲವಡೆ ಪಡಿ ತರ ಚೀಟಿ ಹೊಂದಿರದ ಕುಟುಂಬಗಳನ್ನು ಸಮೀಕ್ಷೆಯಿಂದ ಹೊರಗಿ ಡಲಾಗುತ್ತಿದೆ, ಆಧಾರಕಾರ್ಡ್ಗಳಲಿಂಕ್ ಬಳಸಿ ಅವರು ಗಳನ್ನು ಸಮೀಕ್ಷೆಗೊಳಪಡಿಸಬೇಕು, ಸಮೀಕ್ಷಾ ಸಿಬ್ಬಂದಿಗಳು ಗ್ರಾಮ ಗಳಿಗೆ ಹೋದಾಗ ಹಲವು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಹಲವೆಡೆ ಮೊಬೈಲ್‌ಗಳಿಗೆ ನೆಟ್‌ವರ್ಕ್ ಇಲ್ಲದೆ ಸರ್ವರ್ ಕೈಕೊಡುವುದರಿಂದ ದಾಖಲಾತಿಗೆ ಅಡಚಣೆಯಾಗುತ್ತಿದೆ. ಸಮೀಕ್ಷಾಕಾರ್ಯ ಮುಗಿಸಲು ಇನ್ನೆರಡೇದಿನವಿದ್ದು, ಈ ಗಡುವನ್ನು ವಿಸ್ತರಿಸಬೇಕೆ ಂದರು.ಮುಖAಡ ಗೋ.ನಿ. ವಸಂತಕುಮಾರ್ ಮಾತನಾಡಿ ಸದರಿ ಸಮೀಕ್ಷೆಯಲ್ಲಿನ ಲೋಪದೋಶಗಳ ನಿವಾರಣೆಗಾಗಿ ತಹಸೀಲ್ದಾರ್ ಸಮ್ಮುಖದಲ್ಲಿ ಸಂಬAಧಿಸಿದ ಅಧಿಕಾರಿಗಳೊಂದಿಗೆ ದಲಿತ ಮುಖಂಡರ ಸಭೆಯನ್ನೂ ಪೂರ್ವಭಾವಿಯಾಗಿ ಕರೆಯಬೇಕಿದ್ದರೂ ಅಡಳಿತಾಂಗ ನಿರ್ಲ್ಯಕ್ಷಿಸಿದೆ. ತಾಲ್ಲೂಕಿನಲಿಲ್ಲೀ ಸಂಬAಧ ಯಾವುದೇ ಪ್ರಚಾರವಿಲ್ಲ, ಅದರಲ್ಲೂ ಹೆಚ್ಚು ಜವಾಬ್ದಾರಿಹೊಂದಿದ ಸಮಾಜಕಲ್ಯಾಣ ಇಲಾಖೆ ಈ ಸಮೀಕ್ಷಾ ಕಾರ್ಯದಲ್ಲಿ ಸಂಬAದವಿಲ್ಲದAತಿದೆ, ಕ್ಷೇತ್ರಶಿಕ್ಷಣಾಧಿಕಾರಿಗಳು ಸಮೀಕ್ಷಾ ಸಿಬ್ಬಂದಿಗೆ ತರಬೇತಿ ನೀಡಬೇಕಿತ್ತೆಂದರು. ಈ ಸಂದರ್ಭದಲ್ಲಿ ಭರತ್, ಮಧುಸೂಧನ್, ರಘು, ನರಸಿಂಹಮೂರ್ತಿ ಇದ್ದರು.
(Visited 1 times, 1 visits today)