BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ
  • ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ
  • ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ
  • ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು
  • ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ
  • ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ
  • ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ
  • ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೊರಟಗೆರೆ : ಲೋಕೋಪಯೋಗಿ ಇಲಾಖೆ ಭ್ರಷ್ಟಾಚಾರಕ್ಕೆ ಇಲ್ಲವೇ ಕಡಿವಾಣ…..!
ತುಮಕೂರು

ಕೊರಟಗೆರೆ : ಲೋಕೋಪಯೋಗಿ ಇಲಾಖೆ ಭ್ರಷ್ಟಾಚಾರಕ್ಕೆ ಇಲ್ಲವೇ ಕಡಿವಾಣ…..!

ಒಳ ಒಪ್ಪಂದದಲ್ಲಿ ಕಮಿಷನ್ ಹಾಗೂ ಹಣದ ದಾಹಕ್ಕೆ ೮ ಕೋಟಿ ರೂ ಅನುದಾನ ದುರ್ಬಳಕೆ
By News Desk BenkiyabaleUpdated:May 26, 2025 3:18 pm

ಕೊರಟಗೆರೆ: ದಲಿತ ಸರ್ವೋದಯ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ, ಹರೀಶ ಬಿಸಿ ಹಾಗೂ ಸಾಮಾಜಿಕ ಹೋರಾಟಗಾರ ಸಿನಿಮಾರಂಗದ ನಿರ್ಮಾಪಕ ನಿರ್ದೇಶಕ ಜಟ್ಟಿ ಅಗ್ರಹಾರ ನಾಗರಾಜು ಎಂಬವರು ಗೌರವಾನ್ವಿತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಲೋಕೋಪಯೋಗಿ ಇಲಾಖೆ ಇವರಿಗೆ, ಕರ್ನಾಟಕ ಸರ್ಕಾರದ ಮಾನ್ಯ ಮಹಾ ಲೆಕ್ಕ ಪಾಲಕರು ವಿಧಾನಸೌಧ ಇವರಿಗೆ, ಲೋಕೋಪಯೋಗಿ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ , ಜಿಲ್ಲಾಧಿಕಾರಿಗಳು ತುಮಕೂರು, ಲೋಕೋಪಯೋಗಿ ಇಲಾಖೆ ತುಮಕೂರು ಸೇರಿದಂತೆ ಇನ್ನಿತರ ತನಿಕಾ ಅಧಿಕಾರಿಗಳಿಗೆ ಇವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಜಂಗಲ್ ಕ್ಲೀನಿಂಗ್ ಹಾಗೂ ರಸ್ತೆ ಪ್ಯಾಚ್ ಹಗಲು ದರೋಡೆ

ಕೊರಟಗೆರೆ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ವಹಿಸಿರುವ ಜಂಗಲ್ ಕ್ಲೀನಿಂಗ್ ಹಾಗೂ ರೋಡ್ ಪ್ಯಾಚ್ ಈವರೆಗೂ ಯಾವುದೇ ಕಾಮಗಾರಿಗಳು ಗುಣಮಟ್ಟದಲ್ಲಿ ನಿರ್ವಹಣೆ ಮಾಡಿರುವುದಿಲ್ಲ, ಕಾಟಾಚಾರಕ್ಕೆ ಜಂಗಲ್ ಕ್ಲೀನಿಂಗ್ ಅದು ಒಂದೇ ವಾರಕ್ಕೆ ಇಲ್ಲವೇ ೧೫ ದಿನಗಳೊಳಗೆ ಮತ್ತೆ ಜಂಗಲ್ ಮಾಮೂಲಿಯಾಗಿ ಬೆಳೆಯುವ ರೀತಿಯಲ್ಲಿ ರಸ್ತೆಯ ಎರಡು ಬದಿಯ ಜಂಗಲ್ ಕ್ಲೀನಿಂಗ್ ನಡೆಯುತ್ತದೆ, ರೋಡ್ ಪ್ಯಾಚಿಂಗ್ ಕತೆ ಹೇಳುವಂತೆಯೇ ಇಲ್ಲ ಬಹಳ ಕಳಪೆ ಮಟ್ಟದಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನ ಹಾಗೆ ಬಿಟ್ಟು ಮಣ್ಣು ಸೇರಿದಂತೆ ಇನ್ನಿತರ ಕಲ್ಲು ಜಲ್ಲಿಗಳಿಂದ ಮುಚ್ಚಿ ರಸ್ತೆಯನ್ನ ಡಾಂಬರೀಕರಣ ಗೊಳಿಸಿದ್ದೇವೆ ಎಂದು ಕೋಟ್ಯಾಂತರ ರೂಪಾಯಿ ಹಣವನ್ನ ಸರ್ಕಾರಕ್ಕೆ ಸತತವಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಜೊತೆಗೆ ಕೆಲವು ಗುತ್ತಿಗೆದಾರರ ಹೆಸರು ಹೇಳಿಕೊಂಡು ಸ್ವತಃ ಕೆಲವು ಇಂಜಿನಿಯರ್ ಗಳೇ ಕಾಮಗಾರಿ ನಿರ್ವಹಿಸಿ ಹಣ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಹಣದ ದಾಹಕ್ಕೆ ಕೊರಟಗೆರೆ ರಸ್ತೆಗಳೇ ಸೊರಗಿ ಹೋಗಿದ್ದು, ಪ್ರತಿವರ್ಷ ಒಂದೊAದು ರಸ್ತೆಗೆ ಜಂಗಲ್ ಕ್ಲೀನಿಂಗ್ ಹಾಗೂ ಪ್ಯಾಚ್ ವರ್ಕ್ ಅಂತ ಹೇಳಿ ಅಧಿಕಾರಿಗಳು ಲೂಟಿ ಒಡೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ ಜೊತೆಗೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಾವ ಇಂಜಿನಿಯರ್ ಗಳು ಸಹ ಸ್ಥಳದಲ್ಲಿ ಇರುವುದಿಲ್ಲ ಜೊತೆಗೆ ಇವರು ಎಂಬಿ ಬರೆಯುವ ಸಂದರ್ಭದಲ್ಲಿ ಸ್ಪಾಟ್ ವಿಸಿಟ್ ಮಾಡದೆಯೇ ಮನಸೋ ಹಿಚ್ಛೆ ಎಂಬಿ ಬರದು ಸರ್ಕಾರಕ್ಕೆ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.

ತುಂಡುಗುತ್ತಿಗೆಯಲ್ಲೂ ಇದೆ ಆನ್ಲೈನ್ ನಲ್ಲೂ ಇದೆ ವರ್ಕ್

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸರ್ಕಾರಕ್ಕೆ ದೊಡ್ಡ ಮಟ್ಟದ ದಲ್ಲಿ ಯಾಮರಸಿ ಹಗಲು ದರೋಡೆ ನಡೆಸಿದ್ದು, ಈ ಹಿಂದೆ ಆನ್ ಲೈನ್ ಟೆಂಡರ್ ಮೂಲಕ ನಡೆದಿರುವ ಬಹಳಷ್ಟು ಕಾಮಗಾರಿಗಳು ಜನರಿಗೆ ಹಾಗೂ ಇಲಾಖೆಗೆ ಯಾ ಮರಿಸುವ ಮಾದರಿಯಲ್ಲಿ ತುಂಡು ಗುತ್ತಿಗೆ ಆಧಾರದಲ್ಲಿ ಕಾಮಗಾರಿಗಳನ್ನು ನಿರ್ವಹಣೆ ಮಾಡಲಾಗಿ ಕೋಟ್ಯಾಂತರ ರೂಪಾಯಿ ಸರ್ಕಾರದ ಅನುದಾನವನ್ನ ಹಗಲು ದುರುಡೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ ಇದರ ಬಗ್ಗೆ ಲೆಕ್ಕ ಶೀರ್ಷಿಕೆ ೩೦: ೫೪ರಲ್ಲಿ ಕ್ರಮ ಸಂಖ್ಯೆ ೪ರಲ್ಲಿ ಕೊರಟ್ಗೆರೆ ತಾಲೂಕ್ ಬಾಗೇಪಲ್ಲಿ ಹಲಗೂರು ರಾಜ್ಯ ಹೆದ್ದಾರಿ ೯೪ ರಸ್ತೆ ದುರಸ್ತಿ, ಕ್ರಮ ಸಂಖ್ಯೆ ೬ ಕೊರಟಗೆರೆ ತಾಲೂಕು ವಡ್ಡಗೆರೆ, ಕೊಡಗದಾದಲ, ಐ ಡಿ ಹಳ್ಳಿ ಮುಖಾಂತರ ಆಂಧ್ರ ಗಡಿ ಸೇರುವ ರಾಜ್ಯ ಹೆದ್ದಾರಿ, ಕ್ರಮ ಸಂಖ್ಯೆ ೨೫ ರಲ್ಲಿ ಕೊರಟಗೆರೆ ತಾಲೂಕು ಮಾವತ್ತೂರು ಮತ್ತು ತೊಂಡೆಬಾವಿ ರಸ್ತೆ ದುರಸ್ತಿ ಕಾಮಗಾರಿ, ಕ್ರಮ ಸಂಖ್ಯೆ ೨೪ ಹಾಗೂ ೨೭ ಹುಲಿ ಕುಂಟೆ -ಬಿಡಿಪುರ ರಸ್ತೆ ಅಭಿವೃದ್ಧಿ ಕಾರ್ಯ ಲೆಕ್ಕ ಶೀರ್ಷಿಕೆ ೩೦ :೫೪ ಕ್ರಮ ಸಂಖ್ಯೆ ೪. ರಲ್ಲಿ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ ೪೮ ,(ನೆಲಹಾಳ್) ಸೇತುವಿಗೆ ರಕ್ಷಣಾ ಕಾಮಗಾರಿ ಎರಡು ಬಾರಿ ಬಿಲ್ಲು ಆದರೂ ರಕ್ಷಣಾ ಗೋಡೆ ಇಲ್ಲ ಬೋಗಸ್ ಬಿಲ್ ಕ್ರಮ ಸಂಖ್ಯೆ ೫ ಕೊರಟಗೆರೆ ತಾಲೂಕು ನಿಂದ ವಡ್ಡಗೆರೆ, ಕೋಡಗದಾಲ ,ಐಡಿಹಳ್ಳಿ ಮುಖಾಂತರ ಆಂಧ್ರ ಗಡಿ ಸೇರುವ ಕಾಮಗಾರಿಯಲ್ಲೂ ದೊಡ್ಡ ಲೋಪ. ಲೆಕ್ಕ ಶೀರ್ಷಿಕೆ ೨೦: ೫೯ ಇಲಾಖಾ ಕಟ್ಟಡಗಳು ಸೇರಿದಂತೆ ಇನ್ನಿತರ ಕಾಮಗಾರಿ… ಕ್ರಮ ಸಂಖ್ಯೆ ೬ ಲೋಕೋಪಯೋಗಿ ಕಚೇರಿಯಲ್ಲಿ ಸಿ ಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಇನ್ನಿತರ ಕೇವಲ ಧ್ವಜಸ್ತಂಬ ನಿರ್ಮಿಸಿ ಹಣ ದುರ್ಬಳಕೆ, ಕೊರಟಗೆರೆ ನಿರೀಕ್ಷಿಣಾ ಮಂದಿರ ದುರಸ್ತಿ ಯಾವ ದುರಸ್ತಿಯೂ ಇಲ್ಲ ಕೇವಲ ಎರಡು ಗ್ರಾನೆಟ್ ಕಲ್ ಹಾಕಿರುವುದು, ಅದೇ ನಿರೀಕ್ಷಣ ಮಂದಿರದಲ್ಲಿ ಮೇಲ್ಚಾವಣಿ ದುರಸ್ತಿ ಅದು ಸಹ ಸ್ವಲ್ಪ ಪ್ರಮಾಣದಲ್ಲಿ ಮಾಡಿ ಹಗಲು ದರೋಡೆ ಮಾಡಲಾಗಿದೆ ಎಂಬ ಆರೋಪ ,ಇದೇ ಮಾದರಿಯ ಹತ್ತಾರು ಕಾಮಗಾರಿಗಳು ೪,೯೦,೦೦೦ ಮೊತ್ತದಲ್ಲಿ ಹಣ ಬಿಡುಗಡೆಗೊಳಿಸಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಹರೀಶ್ ಹಾಗೂ ಜಟ್ಟಿ ಅಗ್ರಹಾರ ನಾಗರಾಜು ಆರೋಪಿಸುತ್ತಾರೆ.

ತುಂಡುಗುತ್ತಿಗೆ ಕೆಲಸವೇ ಆಗಿಲ್ಲ ಬಿಲ್ ಪಾಸ್

ಲೆಕ್ಕ ಶೀರ್ಷಿಕೆ ೩೦ : ೫೪ರಲ್ಲಿ ಕ್ರಮ ಸಂಖ್ಯೆ ೩೭ ಕೊರಟಗೆರೆ ತಾಲೂಕ್ ಇರಕಸಂದ್ರ ಕಾಲೋನಿಯಿಂದ ಸಂಕೇನಹಳ್ಳಿ ನೀಲಗೊಂಡನಹಳ್ಳಿ ಮುಖಾಂತರ ಮಾರಗುಂಡನ ಗುಣಿ ಸೇರುವ ರಸ್ತೆ ಕಾಮಗಾರಿ, ಕ್ರಮ ಸಂಖ್ಯೆ ೪೨ ಕೊರಟಗೆರೆ ತಾಲೂಕು ಅಜ್ಜಿ ಹಳ್ಳಿ ಹೊಲತಾಳು ರಸ್ತೆಯಿಂದ ಗಾಂಧಿನಗರ ದಸಾಲಗುಂಟೆ ಮುಖಾಂತರ ಊರಕೆರೆ ತೋವಿನಕೆರೆಗೆ ಸೇರುವ ರಸ್ತೆ ಸರಪಳಿ ರಸ್ತೆಯಲ್ಲಿ ಕಾಮಗಾರಿ, ಲೆಕ್ಕ ಶೀರ್ಷಿಕೆ ೩೦:೫೪ ಕೊರಟಗೆರೆ ಯಿಂದ ವಡ್ಡಗೆರೆ ಕೋಡಗದಾಲ ಐಡಿ ಹಳ್ಳಿ ಮುಖಾಂತರ ಆಂಧ್ರ ಗಡಿ ಸೇತುವೆಗೆ ರಕ್ಷಣಾ ಕಾಮಗಾರಿ ಸೇರಿದಂತೆ ಇಂತಹ ಹಲವು ಕಾಮಗಾರಿಗಳು ಕಾಮಗಾರಿ ನಡೆಯದೆ ಬಿಲ್ ಪಾಸಾಗಿದೆ ಎಂದು ಆರೋಪಿಸಲಾಗುತ್ತಿದೆ.

ಸ್ಕ್ರಾಪ್ ಗಾಡಿ ನಿರ್ವಹಣೆಗೆ ೪ ಲಕ್ಷ

ಕೊರಟಗೆರೆ ಲೋಕೋಪಯೋಗಿ ಇಲಾಖೆಯಲ್ಲಿ ಟಾಟಾ ಸುಮೋ ಜೀಪ್ ಸಂಖ್ಯೆ ಕೆಎ ೦೧ ಜಿ ೩೭೦೦ ಎಂಬ ಕಾರಿಗೆ ವಾರ್ಷಿಕ ನಿರ್ವಹಣೆ ೪ ಲಕ್ಷ ಎಂದು ಬಿಲ್ ಪಾಸ್ ಆಗಿದೆ.. ಆದರೆ ವಿಚಿತ್ರ ಎಂದರೆ ಈ ಗಾಡಿಯನ್ನು ಈ ಬಿಲ್ ಪಾಸ್ ಆಗುವ ಒಂದು ವರ್ಷ ಮುಂಚಿತವಾಗಿಯೇ ಆ ಗಾಡಿಯನ್ನು ಸ್ಕ್ರಾಪ್ ಗೆ ಹಾಕಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಆದರೂ ಅದೇ ಗಾಡಿ ಗೆ ೪ ಲಕ್ಷ ನಿರ್ವಹಣೆ ವೆಚ್ಚ ಎಂದು ಬಿಲ್ ಪಾವತಿಸಲಾಗಿದೆ, ಇದು ಆದ ಆರೇ ತಿಂಗಳಲ್ಲಿ ಜೀಪ್ ಸ್ಕ್ರ‍್ಯಾಪ್ ಮೂಲಕ ಸಾರ್ವಜನಿಕ ಬೀಟ್ ಮೂಲಕ ಹೊರಗಡೆ ಕೊಡಲಾಗಿದೆ, ಆದರೂ ನಿರ್ವಹಣಾ ವೆಚ್ಚ ೪೦೦೦೦೦ ಬಳಕೆಯಾಗಿರುವುದು ಇಲಾಖೆಯ ಭ್ರಷ್ಟಾಚಾರಕ್ಕೆ ಕೈಗನ್ನಡಿಯಂತಿದೆ ಎಂದು ಹರೀಶ್ ಹಾಗೂ ಜಟ್ಟಿ ಅಗ್ರಹಾರ ನಾಗರಾಜು ಕಿಡಿ ಕಾಡಿದ್ದಾರೆ.

ಉನ್ನತ ತನಿಕೆಗೆ ಆಗ್ರಹ

ಮಧುಗಿರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ೨೦೨೪ರ ಜುಲೈ ೩೧ ರಂದು ನಿವೃತ್ತಿ ಹೊಂದುತ್ತಿರುವುದರಿAದ ಇಲಾಖಾ ಭ್ರಷ್ಟಾಚಾರ ಆರೋಪ ಮುಕ್ತರಾಗುವ ವರೆಗೂ ಯಾವುದೇ ನವೃತ್ತಿ ವೇತನ ಹಾಗೂ ಸರಕಾರಿ ಸೌಲಭ್ಯ ಮುಂಜೂರಾತಿ ನೀಡಬಾರದು ಎಂದು ಕೋರುತ್ತಾ, ನಿವೃತ್ತ ನ್ಯಾಯಾಧೀಶರು ಮತ್ತು ರಾಜ್ಯ ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿ, ಉನ್ನತ ಮಟ್ಟದ ಕಮಿಟಿ ರಚಿಸಿ ಕ್ರಮ ತೆಗೆದುಕೊಳ್ಳಬೇಕು ಜೊತೆಗೆ ಕಾರ್ಯ ಪಾಲಕ ಇಂಜಿನಿಯರ್ ಸುರೇಶ್ ಹಾಗೂ ಸಹಾಯಕ ಕಾರ್ಯ ಫಲ ಇಂಜಿನಿಯರ್ ಕೆ ಎಸ್ ಸ್ವಾಮಿ ವಿರುದ್ಧ ಗೌರವಾನ್ವಿತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಹಾ ಲೇಖ ಪಾಲಕರು ಕರ್ನಾಟಕ ಸರ್ಕಾರ, ಲೋಕಾಯುಕ್ತ ಇಲಾಖೆ, ಜಿಲ್ಲಾ ದಂಡಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚನೆಯಾಗಿ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹರೀಶ್ ಹಾಗೂ ಜಟ್ಟಿ ಅಗ್ರಹಾರ ನಾಗರಾಜು ಆಗ್ರೈಹಿಸಿದ್ದಾರೆ.

ಬಿಬಿಎಂಪಿ ಭ್ರಷ್ಟಾಚಾರ ತನಿಖಾ ಅಂತದಲ್ಲೂ ಮುಂಬಡ್ತಿ

ಕೊರಟಗೆರೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ ಎಸ್ ಸ್ವಾಮಿ ಬೆಂಗಳೂರು ಮಹಾನಗರ ಪಾಲಿಕೆ ,ಉಳ್ಳಾಲ. ನಾಗರಬಾವಿ . ಬಿಬಿಎಂಪಿಯಲ್ಲಿ ಸಹಾಯಕ ಇಂಜಿನಿಯರ್ ಗ್ರೇಡ್ ೨ ನಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ನಡೆಸಿದಂತ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಐಷಾರಾಮಿ ಮನೆ ಸೇರಿದಂತೆ ಇನ್ನಿತರ ಆಸ್ತಿಗಳ ಮೇಲೆ ಲೋಕಾಯುಕ್ತರು ಹಾಗೂ ಎಸಿಬಿ ದಾಳಿ ನಡೆಸಿದ ವಿಚಾರ ಸರ್ಕಾರದ ಹಂತದಲ್ಲಿ ಹಾಗೂ ನ್ಯಾಯಾಲಯದಲ್ಲಿ ಯಾವುದೇ ಆರೋಪ ಮುಕ್ತ ದೋಷಪಟ್ಟಿ ನೀಡದೇ ತನಿಖಾ ಅಂದರೆ (೧/೪ ..೧ಣo೪)ಹಂತದಲ್ಲಿ ಇರುವಾಗಲೇ ಮುಂಭಡ್ತಿ ನೀಡುವಂತಿಲ್ಲ ಆದರೂ ಕೊರಟಗೆರೆ ಲೋಕೋಪಯೋಗಿ ಇಲಾಖೆಗೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಆಗಿ ನೇಮಕಗೊಂಡಿರುವುದು ಕಾನೂನುಬಾಹಿರ… ಜೊತೆಗೆ ಕರ್ನಾಟಕ ನಾಗರೀಕ ಸೇವಾ ನಿಯಮ ಅನುಸಾರ ಸಿಸಿಎ ವರ್ಕೀಕರಣ ನಿಯಮದಡಿ ತನಿಖಾ ಅಂತದಲ್ಲಿರುವ ಯಾವುದೇ ಅಧಿಕಾರಿಗಳಿಗೂ ಮುಂಬಡ್ತಿಯಾಗಲಿ ಅಥವಾ ಸರ್ಕಾರಿ ಸೌಲತ್ತುಗಳನ್ನಾಗಲಿ ನೀಡುವಂತಿಲ್ಲ ಎಂಬುವ ನಿಯಮವಿದ್ದರೂ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕೊರಟಗೆರೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕೀಯ ಪ್ರೌಢತೆಯಿಂದ ಏನು ಬೇಕಾದರೂ ನಿಭಾಯಿಸುತ್ತೇನೆ ಎಂಬುವ ಅಹಂನಿAದ ಈ ವ್ಯಕ್ತಿ ಭ್ರಷ್ಟಾಚಾರ ಕೋಪದಲ್ಲಿ ಮುಳುಗಿದ್ದಾರೆ ಎಂದು ಕೊರಟಗೆರೆ ಸಾಮಾಜಿಕ ಹೋರಾಟಗಾರರಾದ ಹರೀಶ್ ಹಾಗೂ ಜಟ್ಟಿ ಅಗ್ರಹಾರ ನಾಗರಾಜು ಈ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರೈಹಿಸಿದ್ದಾರೆ

(Visited 1 times, 1 visits today)
tumkur ಕೊರಟಗೆರೆ:
Previous Articleಜಿಲ್ಲಾ ನಿರ್ದೇಶಕರ ಅವಿರೋಧ ಆಯ್ಕೆ
Next Article ಪರೋಪಕಾರ ಗುಣವಿದ್ದರೆ ಬದುಕು ಪಾವನ: ವೈ.ಹೆಚ್.ಹುಚ್ಚಯ್ಯ
News Desk Benkiyabale

Related Posts

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm news

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm news
ತಾಜಾ ಸುದ್ಧಿಗಳು
news

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm
news

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm
news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm
news

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm
news

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm
news

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

September 08, 2026 5:26 pm
Our Youtube Channel
Our Picks

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

By News Desk BenkiyabaleSeptember 09, 2026 5:41 pm

ಪಾವಗಡ: ಮಹರ್ಷಿ ವಾಲ್ಮೀಕಿ ಆಶ್ರಮ, ವಾಲ್ಮೀಕಿ ಜಾಗೃತಿ ವೇದಿಕೆ, ನಿಡಗಲ್ಲು ಗ್ರಾಮಸ್ಥರು ಮತ್ತು ದುರ್ಗದ ಅಭಿಮಾನಿಗಳ ವತಿಯಿಂದ ೧೦ನೇ ವರ್ಷದ…

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.