
ತುಮಕೂರು: ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯ ಸಂಘಕ್ಕೆ ತುಮಕೂರು ಜಿಲ್ಲಾ ಘಟಕದಿಂದ ಇಬ್ಬರು ನಿರ್ದೇಶಕರು ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ.
ಮೇ.೨೫ ರಂದು ಚುನಾವಣೆ ನಿಗದಿಯಾಗಿದ್ದು, ಸಾಮಾನ್ಯ ಸ್ಥಾನಕ್ಕೆ ಸಮಾಜದ ಯುವ ಮುಖಂಡ ಬಿ.ಚಂದ್ರಬಾಬು ಹಾಗೂ ಮಹಿಳಾ ಮೀಸಲು ಸ್ಥಾನಕ್ಕೆ ಜಿಪಂ ಮಾಜಿ ಸದಸ್ಯೆ ವರಲಕ್ಷ÷್ಮಮ್ಮ ಅವರುಗಳು ಮಾತ್ರ ಕಣದಲ್ಲಿದ್ದುದರಿಂದ ಇಬ್ಬ ರು ಅವಿರೋಧ ಆಯ್ಕೆಯಾಗಿದ್ದಾರೆಂದು ಉಪ ಚುನಾವಣಾಧಿಕಾರಿ ಟಿ.ಎನ್.ಗುರುರಾಜ್ ತಿಳಿಸಿ ದರು. ೨ ನಿರ್ದೇಶಕ ಸ್ಥಾನಕ್ಕೆ ಒಟ್ಟು ಐವರು ನಾಮಪತ್ರ ಸಲ್ಲಿಸಿದ್ದು, ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಹೆಬ್ಬೂರು ನಾಗರಾಜಚಾರ್ ಹಿರಿಯ ಮುಖಂಡರಾದ ಡಾ.ಕೆ.ವಿ.ಕೃಷ್ಣಮೂರ್ತಿ, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯ ಕ್ಷ ಗೋವರ್ಧನಚಾರ್, ನಿಗಮದ ಜಿಲ್ಲಾ ನಿರ್ದೇಶಕ ಟಿ.ಸಿ.ಡಮರುಗೇಶ್, ಶೇಖರ್ ಇತರರ ಸಮ್ಮುಖದಲ್ಲಿ ಅಭ್ಯರ್ಥಿಗಳೊಂದಿಗೆ ಸಮಾಲೋಚಿಸಿ ಮೂವರು ಅಭ್ಯರ್ಥಿಗಳಾದ ಚಂದ್ರಶೇಖರ್, ಜಿ.ಲೀಲಾ, ಎಸ್.ಹರೀಶ್ ಅವರು ಉಮೇದುವಾರಿಕೆ ಹಿಂಪಡೆದಿದ್ದರಿAದ ಚಂದ್ರಬಾಬು ಹಾಗೂ ವರಲಕ್ಷಮ್ಮ ಅವರು ಅವಿರೋಧ ಆಯ್ಕೆಯಾಗಲು ಸಾಧ್ಯವಾಯಿತು.





