ತುಮಕೂರು: ಗಿಡ, ಮರ, ಸೂರ್ಯ, ಚಂದ್ರ ಸೇರಿದಂತೆ ಪ್ರಕೃತಿಯು ಬೇರೆಯವರಿಗೆ ಸಹಾಯ ಮಾಡುವ ಪರೋಪಕಾರಿಯಾಗಿದೆ. ಮನುಷ್ಯ ಕೂಡಾ ಪರೋಪಕಾರದ ಪಾಠವನ್ನು ಪ್ರಕೃತಿಯಿಂದ ಕಲಿತು, ಪರೋಪಕಾರ ಮಾಡುತ್ತಾ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಉಳ್ಳವರು ಬಡವರಿಗೆ ಸಹಾಯ ಮಾಡುವ ಔದಾರ್ಯ ಗುಣ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಹೇಳಿದರು.
ಭಾನುವಾರ ನಗರದಲ್ಲಿ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದಿAದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿಯವರ ಅಕಾಲಿಕ ಮರಣಕ್ಕೀಡಾದ ಮಗ ಗೌತಮ್ ನೆನಪಿನಲ್ಲಿ ಬಡ ಮಕ್ಕಳಿಗೆ ವಿವಿಧ ಸವಲತ್ತು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಮಾತನಾಡಿದರು.
ನಮ್ಮ ಸಮಾಜದಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಅನೇಕ ಶ್ರೀಮಂತರಿದ್ದಾರೆ. ಆದಾಯ ತೆರಿಗೆ, ಇ.ಡಿ. ಅಧಿಕಾರಿಗಳು ದಾಳಿ ಮಾಡಿ ಬಹಿರಂಗ ಮಾಡಿದಾಗಲಷ್ಟೇ ಅವರ ಆಸ್ತಿಪಾಸ್ತಿಯ ಮಾಹಿತಿ ಗೊತ್ತಾಗುತ್ತದೆ. ಅಂತಹ ಶ್ರೀಮಂತರು ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವ ಉದಾರತನ ಹೊಂದಬೇಕು. ಅಗತ್ಯವಿರುವವರಿಗೆ ಸಹಾಯ ಮಾಡುವ ಮನೋಭಾವವನ್ನು ಶ್ರೀಮಂತರು ಬೆಳೆಸಿಕೊಳ್ಳಬೇಕು. ಸಂಘದ ಅಧ್ಯಕ್ಷ ಗೋಪಿಯವರು ತಮ್ಮ ಮಗನ ಸ್ಮರಣೆಯಲ್ಲಿ ಬಡಮಕ್ಕಳಿಗೆ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿರುವುದು ಸಮಾಜ ಮೆಚ್ಚುವಂತಹ ಆದರ್ಶ ಕಾರ್ಯ ಎಂದರು.
ತAದೆತಾಯಿಯರು ತಮ್ಮ ಮಕ್ಕಳನ್ನು ಹತ್ತಿರದಲ್ಲಿಟ್ಟುಕೊಂಡು, ಪ್ರೀತಿಯಿಂದ ಬೆಳೆಸಿ ಅವರಿಗೆ ನಮ್ಮ ಸಂಸ್ಕಾರ ಕಲಿಸಿದರೆ, ನಮ್ಮ ಸಮಾಜದ ಆದರ್ಶಗಳನ್ನು ಮನವರಿಕೆ ಮಾಡಿಕೊಟ್ಟರೆ ಮುಂದೆ ಅವರು ಜವಾಬ್ದಾರಿ ಪ್ರಜೆಗಳಾಗಿ ಬೆಳೆಯುತ್ತಾರೆ. ಹೆತ್ತವರ ನಿರ್ಲಕ್ಷö್ಯಕ್ಕೆ ಒಳಗಾಗುವ ಮಕ್ಕಳು ದಾರಿ ತಪ್ಪುವ ಅಪಾಯವಿದೆ ಎಂದು ವೈ.ಹೆಚ್.ಹುಚ್ಚಯ್ಯ ಹೇಳಿದರು.
ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ ಮಾತನಾಡಿ, ತಮಗಿದ್ದ ಒಬ್ಬನೇ ಮಗ ಚಿಕ್ಕ ವಯಸ್ಸಿನಲ್ಲೇ ಅಕಾಲಿಕ ಮರಣಕ್ಕೀಡಾದ, ಪುತ್ರಶೋಕಂ ನಿರಂತರA ಎನ್ನುವ ನೋವಿನ ನಡುವೆ, ಬಡ ಮಕ್ಕಳಿಗೆ ಸಹಾಯ ಮಾಡುತ್ತಾ, ಆವರ ಆನಂದದಲ್ಲಿ ತಮ್ಮ ಮಗನನ್ನು ಕಾಣುವ ಪ್ರಯತ್ನ ಮಾಡುತ್ತೇನೆ ಎಂದರು.
ಮುAದೆ ಅನಾಥಾಶ್ರಮ, ವಿಕಲಚೇತನರಿಗೆ ನೆಲೆ ನೀಡಿ ನೆರವಾಗುವ ಆಶ್ರಮ ಸ್ಥಾಪನೆ ಮಾಡುವ ಗುರಿ ಹೊಂದಿದ್ದು ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇನೆ. ಜೊತೆಗೆ ಬಡ ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದ ಯೋಜನೆಗಳ ನೆರವು, ನಗರಪಾಲಿಕೆ ಸ್ಥಾಪನೆ ಮಾಡುವ ವಾಣಿಜ್ಯ ವಲಯದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯ ಸಂಘದ ಉಪಾಧ್ಯಕ್ಷ ಶಬ್ಬೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ರಾಜಣ್ಣ, ಜಿಲ್ಲಾಧ್ಯಕ್ಷ ರಾಜು, ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ರಮ್ಯ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಶೃತಿ, ಕನ್ನಡ ಸಂಸ್ಕೃತಿ ವೇದಿಕೆ ಅಧ್ಯಕ್ಷ ಕನ್ನಡ ಪ್ರಕಾಶ್, ಆದಿಲ್ ಬಾಷಾ ಮೊದಲಾದವರು ಭಾಗವಹಿಸಿದ್ದರು.