ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಕಂಚಾಘಟ್ಟ ಗ್ರಾಮದ ಮಜರೆ ಗೊಲ್ಲರಹಟ್ಟಿ ಗ್ರಾಮ ತಿಪಟೂರು ನಗರಕ್ಕೆ ಹೊಂದಿಕೊAಡAತೆ ಇದ್ದು, ಸುಮಾರು ೫೦ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುವ ಗೊಲ್ಲರಹಟ್ಟಿಗೆ ರಸ್ತೆ ಸೌಕರ್ಯವಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ನಮ್ಮ ಗ್ರಾಮಕ್ಕೆ ರಸ್ತೆ ಸೌಕರ್ಯ ಕಲ್ಪಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಿಪಟೂರು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಕಾಡುಗೊಲ್ಲ ಸಮಾಜದ ಮುಖಂಡ ಪ್ರಕಾಶ್ ಯಾದವ್ ಮಾತನಾಡಿ, ಕಂಚಾಘಟ್ಟ ಗೊಲ್ಲರ ಹಟ್ಟಿಗೆ ಸೂಕ್ತ ರಸ್ತೆ ಸಂಪರ್ಕವಿಲ್ಲದೆ ಪರದಾಡುವಂತಾಗಿದೆ, ಮಹಿಳೆಯರು ಮಕ್ಕಳು ಪರದಾಡುವಂತಾಗಿದೆ. ಶಾಲಾ ಮಕ್ಕಳು ರಸ್ತೆ ಸಂಪರ್ಕವಿಲ್ಲದೆ, ಸುಮಾರು ಮೂರ್ನಾ ಲ್ಕು ಕಿಲೋ ಮೀಟರ್ ಸುತ್ತಿಕೊಂಡು ನಗ ರದ ಶಾಲಾ ಕಾಲೇಜಿಗೆ ತಲುಪಬೇಕು. ಅಂಗ ವಿಕಲರು ವಯೋವೃದ್ದರ ಸ್ಥಿತಿಯಂತೂ ಅಯೋ ಮಯವಾಗಿದೆ. ಹಟ್ಟಿಯಲ್ಲಿ ಯಾರಾದರೂ ಅನಾರೋಗ್ಯ ಪೀಡಿತರಾದರೆ ಅಂಬುಲೆನ್ಸ್ ಬರುವುದಕ್ಕೂ ರಸ್ತೆಇಲ್ಲ. ಸರ್ಕಾರ ಕೂಡಲೇ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮದ ಮುಖಂಡ ಹೊನ್ನಪ್ಪ ಮಾತನಾಡಿ, ಕಂಚ್ಚಾಘಟ್ಟ ಗೊಲ್ಲರ ಹಟ್ಟಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ಹಿಂದೆ ಇದ್ದ ರಸ್ತೆ ಎತ್ತಿನಹೊಳೆ ಕಾಮಗಾರಿಯಿಂದ ರಸ್ತೆ ಇಲ್ಲದಾಗಿದೆ. ಗ್ರಾಮಕ್ಕೆ ಇರುವ ರಸ್ತೆ ಗುರುತಿಸಿ ಕೊಡಿ ಎಂದು ಮನವಿ ಮಾಡಿದರು.
ತಾಲ್ಲೂಕು ಕಚೇರಿ ಸಿಬ್ಬಂದಿ ಸ್ಪಂದಿಸುತ್ತಿಲ್ಲ, ಗ್ರಾಮಕ್ಕೆ ಇರುವ ಬಂಡಿದಾರಿಯಲ್ಲಿ ಓಡಾಡಲು ರಸ್ತೆ ಗುಂಡಿಬಿದ್ದು ಕೆಸರುಮಯವಾಗಿದೆ. ಮಕ್ಕಳು ವೃದ್ದರು ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ತಾಲ್ಲೂಕು ಆಡಳಿತ ಕೂಡಲೇ ಕಂಚ್ಚಾಘಟ್ಟ ಗೊಲ್ಲರಹಟ್ಟಿಗೆ ರಸ್ತೆ ಸಂಪರ್ಕಿಸಬೇಕು ಎಂದು ಒತ್ತಾಯಿಸಿದರು. ಜಯಣ್ಣ, ಶಂಕರಪ್ಪ, ರಾಜಣ್ಣ, ರಮೇಶ್ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.
(Visited 1 times, 1 visits today)