ಚಿಕ್ಕನಾಯಕನಹಳ್ಳಿ: ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾದ್ಯ ಇಂತಹ ಸಮಾಜವನ್ನು ಕಟ್ಟುವ ವ್ಯಕ್ತಿಯನ್ನು ನಿರ್ಮಾಣ ಮಾಡುವ ಶಕ್ತಿ ಶಿಕ್ಷಕರಲ್ಲಿ ಮಾತ್ರಅದ್ದರಿಂದ ಶಿಕ್ಷಕರ ಜವಾಬ್ದಾರಿ ಹೆಚ್ಚು ಇಂತಹ ಶಿಕ್ಷಣವನ್ನು ಕೇವಲ ಶೈಕ್ಷಣಿಕವಾಗಲ್ಲದೆ ಶೈಕ್ಷಣೇತರವಾದ ಶಿಸ್ತು, ಸಂಯಮ, ಏಕಾಗ್ರತೆ, ಸಂಸ್ಕಾರ, ಸಂಸ್ಕೃತಿಯನ್ನು ಅವರಲ್ಲಿ ಬೆಳೆಸುವ ಮೂಲಕ ಮುಂದೆ ಉತ್ತಮ ಪಲಿತಾಂಶವನ್ನು ನಿರೀಕ್ಷಿಸಬಹುದು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಸೋಮವಾರ ೨೦೨೫-೨೬ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಾನು ನಮ್ಮ ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಮಾಡಬೇಕೆಂಬ ಉದ್ದೇಶದಿಂದ ಚುನಾವಣೆಯ ನಂತರ ಮೊದಲು ಶಿಕ್ಷಕರ ಸಭೆ ಕರೆದು ಪ್ರತಿ ಶಾಲೆಗೆ ಮೂಲಭೂತವಾಗಿ ಯಾವ ಕೆಲಸಗಳು ಅಗಬೇಕು ಹಾಗೂ ಶಿಕ್ಷಕರ ಸಮಸ್ಯೆ ಎನು ಎಂಬುದರ ಬಗ್ಗೆ ಚರ್ಚಿಸಿ ೫೪ಕೋಟಿ ಅಂದಾಜು ಪಟ್ಟಿಯನ್ನು ತಯಾರಿಸಿದ್ದು ಅದಾದನಂತರ ನಮ್ಮ ತಾಲ್ಲೂಕಿಗೆ ಗಣಿಬಾದಿತ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ೫೩ಕೋಟಿ ಮಂಜೂರಾಗಿದ್ದು ಅದರ ಜೊತೆ ನಮ್ಮ ಜಿ.ಪಂ.ತಾ.ಪA ಅನುದಾನದಲ್ಲಿ ೪೦ಲಕ್ಷಗಳನ್ನು ಮಂಜೂರು ಮಾಡಿದ್ದು ಇದರೊಂದಿಗೆ ಇನ್ನು ಹೆಚ್ಚುವರಿಯಾಗಿ ೧೩.೫ಕೋಟಿ ಹಣವನ್ನು ಮಂಜೂರಾತಿಗೆ ಬರೆಯಲಾಗಿದೆ ಒಟ್ಟು ಕ್ಷೇತ್ರಕ್ಕೆ ೭೦ಕೋಟಿಯಷ್ಟು ಗಣಿಯಿಂದ ಬಂದAತಹ ಹಣದಲ್ಲಿ ಅಭಿವರದ್ದಿಗೆ ಒತ್ತು ನೀಡಿದ್ದು ೭೭ ಶೌಚಾಲಯಗಳ ನಿರ್ಮಾಣ ಸೇರಿದಂತೆ ಅಗತ್ಯವಿರುವಂತಹ ಕೊಠಡಿಗಳ ನಿರ್ಮಾಣ, ಹಾಗೂ ಮೂಲಭೂತ ಸೌಲಭ್ಯಗಳಿಗೆ ಖರ್ಚು ಮಾಡಲಾಗುವುದು ಎಂದ ಅವರು ನಾವು ಇಷ್ಟೇಲ್ಲ ನೀಡಿದರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಕಾರಣ ಕಾನ್ವೆಂಟ್ ವ್ಯಾಮೋಹ ಈ ನಿಟ್ಟಿನಲ್ಲಿ ವಿಶೇಷವಾಗಿ ಮುಂಬರುವ ದಿನಗಳಲ್ಲಿ ಒಂದೆ ಸೂರಿನಡಿ ಅಂಗನವಾಡಿಯಿAದ ಪಿಯುಸಿಯವರೆಗೆ ಶಿಕ್ಷಣ ನೀಡುವಂತಹ ಉದ್ದೇಶವಿದೆ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಒಂದು ಮನೆಗೆ ಅಡಿಪಾಯ ಎಷ್ಟು ಮುಖ್ಯವೊ ಅದೇ ರೀತಿ ಮಕ್ಕಳಿಗೆ ಪ್ರಾಥಮಿಕ ಶಾಲೆಯ ಶಿಕ್ಷಣ ಶಿಕ್ಷಕರು ಮುಖ್ಯ ಅದ್ದರಿಂದ ತಾಲ್ಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪಲಿತಾಂಶಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರು ಆ ಮಕ್ಕಳಿಗೆ ನೀಡಿದ ಗುಣಮಟ್ಟದ ಶಿಕ್ಷಣವೇಆಗಿದೆ ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇನೆ ಈ ಹಿಂದೆ ಗೋವಿಂದೆಗೌಡರು ಶಿಕ್ಷಣ ಮಂತ್ರಿಯಾಗಿದ್ದಾಗ ಲಕ್ಷಾಂತರ ಶಿಕ್ಷಕರ ನೇಮಕವಾಯಿತು ನಂತರ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣಕ್ಕೆ ಒತ್ತು ನೀಡಿದ್ದರು ಅದನ್ನು ಬಿಟ್ಟರೆ ಸರ್ಕಾರಿ ಶಾಲೆ ಶಿಕ್ಷಕರ ಬಗ್ಗೆ ಗಮನ ಹರಿಸುವುದು ಕಡಿಮೆಯಾಗಿದ್ದು ಈ ಹಿಂದೆ ಸೇವೆ ಮಾಡಿದವನ್ನು ನೆನಪು ಮಾಡಿಕೊಳ್ಳ ಬೇಕಾಗಿರುವುದು ನಮ್ಮ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕತೆಯಿಂದ ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ಮಾಡಬೆಕು ಈ ನಿಟ್ಟಿನಲ್ಲಿ ಶಿಕ್ಷಕರ ಸಾಧನೆಯನ್ನು ಅವರು ಕಲಿಸಿರುವ ಮಕ್ಕಳಿಂದ ಮಾತ್ರ ತಿಳಿಯಲು ಸಾದ್ಯ ಪ್ರೌಡಶಾಲೆಯಲ್ಲಿ ಸಾದನೆ ಮಾಡಲು ಪ್ರಾಥಮಿಕ ಶಾಲೆಯ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ನಮಗೆ ನೀಡಿದಅನೇಕ ಪ್ರೇರಣಾ ಶಿಬಿರಗಳು ಪೂರಕವಾದ ವಾತಾವರಣವನ್ನು ನಿರ್ಮಿಸಿದ್ದು ಸಾಧನೆಗೆ ಕಾರಣವಾಗಿದೆ ಶಾಸಕರು ಶಿಕ್ಷಣಕ್ಕೆ ನೀಡುತ್ತಿರುವ ಸಹಕಾರವು ಕಾರಣವಾಗಿದೆ ಅದ್ದರಿಂದ ಶಿಕ್ಷಕರು ತಮ್ಮ ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸಬೇಕು ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಪ್ರಾರಂಭವಾಗುತ್ತಿದ್ದು ನಮ್ಮಿಂದಾಗುವ ತಪ್ಪುಗಳನ್ನು ತಿದ್ದಿಕೊಂಡು ಸರಿಯಾಗಿ ಮಕ್ಕಳ ಶೈಕ್ಷಣಿಕವಾಗಿ ಬೆಳೆಯುವಂತೆ ಮಾಡಿ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಆರ್. ಪರಶಿವಮೂರ್ತಿ ಮಾತನಾಡಿ ಶಾಸಕರು ನಮ್ಮ ಶಿಕ್ಷಕರ ಬಗ್ಗೆ ಗೌರವ ಇಟ್ಟುಕೊಂಡು ಉತ್ತಮವಾಗಿ ಸಹಕಾರ ನೀಡುತ್ತಿದ್ದು ಇದನ್ನು ಬಳಸಿಕೊಂಡು ತಾಲ್ಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸುವುದು ನಮ್ಮೇಲ್ಲರ ಹೊಣೆಯಾಗಿದೆ ಶಾಸಕರು ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರಶಸ್ತಿಯುನ್ನು ಕ್ಲಸ್ಟರ್ ಮಟ್ಟದಲ್ಲಿ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿದರೆ ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಮಣಯ್ಯ, ಮುಖ್ಯಶಿಕ್ಷಕರ ಸಂಘದಅದ್ಯಕ್ಷ ದುರ್ಗಯ್ಯ, ಕಾರ್ಯದರ್ಶಿ ವೀಣಾ, ಸೇರಿದಂತೆ ರಂಗಪ್ಪ, ನರಸಿಂಹಯ್ಯ, ಶಿವಕುಮಾರ್ ಮತ್ತಿತರರು ಇದ್ದರು.
(Visited 1 times, 1 visits today)