ಪಾವಗಡ: ಪ್ರತಿಯೊಬ್ಬ ವ್ಯಕ್ತಿಗೆ ದಿನಕ್ಕೆ ೫೫೦ ಲೀಟರ್ ಅಷ್ಟು ಆಮ್ಲಜನಕ ಬೇಕು ಎಂದು ಡೌನ್ ಟೆಂಪ್ ಫೌಂಡೇಷನ್ ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಯಾತೀಷ್ ಎನ್.ಎಸ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಕಾರ್ಯ ಮತ್ತು ಅಧ್ಯಯನ ಕೇಂದ್ರ, ಡೌನ್ ಟೆಂಪ್ ಫೌಂಡಷನ್ ಸಹಯೋಗದಲ್ಲಿ ಬುಧವಾರ ಪಾವಗಡ ನಗರದ ಮರಗಳ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಗೆ ಒಂದು ದಿನಕ್ಕೆ ೫೫೦ ಲೀಟರಿನಷ್ಟು ಆಮ್ಲಜನಕ ಬೇಕು, ಒಂದು ಮರ ಒಂದು ದಿನಕ್ಕೆ ೨೨೦ ಲೀಟರಿನಷ್ಟು ಆಮ್ಲಜನಕವನ್ನು ಉತ್ಪದಿಸುತ್ತವೆ. ಒಬ್ಬ ವ್ಯಕ್ತಿಗೆ ಕನಿಷ್ಠ ೨ ಮರಗಳಾದರೂ ಬೇಕು, ಆದರೆ ನಗರೀಕರಣ ಮತ್ತು ಬೇರೆ ಉದ್ದೇಶಗಳಿಗಾಗಿ ಮರಗಳನ್ನು ಕಡಿಯಲಾಗುತ್ತಿದ್ದು ಪರಿಸರದಲ್ಲಿ ಅಸಮತೋಲನ ನಿರ್ಮಾಣವಾಗಿದೆ, ಆದ ಕಾರಣ ಮರಗಳ ಗಣತಿ ಮತ್ತು ಅವುಗಳ ಆಮ್ಲಜನಕ ಉತ್ಪಾದನೆಯ ವರದಿಯು ಜನಸಂಖ್ಯೆಗೆ ಅನುಗುಣವಾದ ಸಮತೋಲನವನ್ನು ಕಾಪಾಡಲು ಸಹಕಾರಿಯಾಗಲಿದೆ ಎಂದರು.
ಶಿಬಿರಾರ್ಥಿಗಳಿಗೆ ಮರಗಳ ಗಣತಿಯನ್ನು ಹೇಗೆ ಮಾಡಬೇಕು ಎಂಬ ತರಬೇತಿಯನ್ನು ನೀಡಲಾಯಿತು ಮತ್ತು ಶಿಬಿರಾರ್ಥಿಗಳು ವಿವಿಧ ಬಗೆಯ ೩೦೦ ಕ್ಕೂ ಹೆಚ್ಚು ಮರಗಳ ಸಮೀಕ್ಷೆ ನಡೆಸಿ ವಿವರಗಳ ದಾಖಲೆ ನೀಡಿದರು.
ಕಾರ್ಯಕ್ರಮದಲ್ಲಿ ಡೌನ್ ಟೆಂಪ್ ಫೌಂಡಷನ್ ನ ಮುಖ್ಯ ಕಾರ್ಯ ನಿರ್ವಹಕಾರದ ಡಾ. ಪೃಥ್ವಿರಾಜ ಟಿ. ಇದ್ದರು, ಶಿಬಿರಾಧಿಕಾರಿಗಳಾದ ಶೇಖರಯ್ಯ, ಕೃಷ್ಣ ತಳವಾರ್, ನಿಸರ್ಗ ಪ್ರಿಯ, ನಿವೃತ್ತ ಶಿಕ್ಷಕರಾದ ಶ್ರೀ ಯುತ ಗಂಗಾದರಯ್ಯ , ಶಿಬಿರಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
(Visited 1 times, 1 visits today)