ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಬುಧವಾರ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಧರ್ಮಪತ್ನಿಯಾದ ಲೇಟ್ ರಮಾಬಾಯಿ ಅವರ ಪರಿನಿಬ್ಬಾಣ ದಿವಸ್ ಆಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಹಮ್ಮಿಕೊಳ್ಳಲಾಗಿತ್ತು.
ರಮಾಬಾಯಿರವರ ಪರಿನಿಬ್ಬಾಣ ದಿವಸ್ ಕುರಿತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್‌ರವರು ಮಾತನಾಡುತ್ತಾ ರಮಾಬಾಯಿರವರು ವಿಧಿವಶರಾದ ಐದು ವರ್ಷಗಳ ತರುವಾಯ ಡಾ. ಬಿ.ಆರ್.ಅಂಬೇಡ್ಕರರು ‘ದಿ ಪಾರ್ಟಿಷನ್ ಆಫ್ ಇಂಡಿಯಾ’ ಎಂಬ ವಿದ್ವತ್ ಪೂರ್ಣ ಗ್ರಂಥವನ್ನು ಬರೆದು ಅದನ್ನು ಅವರ ಪತ್ನಿ ರಮಾಬಾಯಿ ಅವರಿಗೆ ಸಮರ್ಪಿಸಿದರು, ಈ ಕೃತಿಯು ೧೯ನೇ ಶತಮಾನದಲ್ಲಿ ಪತ್ನಿಯೊಬ್ಬರಿಗೆ ಸಮರ್ಪಣೆ ಮಾಡಿದ ಮೊಟ್ಟ ಮೊದಲ ಕೃತಿ ಎನ್ನಲಾಗಿದೆ. ಅಂಬೇಡ್ಕರ್‌ರವರಿAದ ರಚಿತವಾದ ಆ ಕೃತಿಯನ್ನು ರಮಾಬಾಯಿ ಅವರಿಗೆ ಸಮರ್ಪಿಸುವ ಸಲುವಾಗಿ ನಾಲ್ಕು ಸಾಲುಗಳನ್ನು ಬರೆಯುತ್ತಾ ‘ಆಕೆಯ ಹೃದಯ ಸೌಜನ್ಯತೆ ಹಾಗೂ ಪರಿಶುದ್ಧ ಶೀಲ ಮತ್ತು ನಮಗೆ ಯಾವುದೇ ಹಿತಚಿಂತಕರು ಇಲ್ಲದಿದ್ದ ಆ ದಿನಗಳಲ್ಲಿ ನಮ್ಮ ಪಾಲಿಗೆ ಬಂದಿದ್ದ ಬಡತನ ಮತ್ತು ಸಂಕಷ್ಟಗಳಲ್ಲಿ ಕಾಂತಚಿತ್ತದಿAದ ಮನಪೂರ್ವಕವಾಗಿ ನನ್ನನ್ನು ಸಂತೈಸುತ್ತ ಸಹಕರಿಸಿದ ರಮಾಗೆ’ ಈ ಕೃತಿ ಸಮರ್ಪಿತ ಎಂದು ಭಾವುಕರಾಗಿ ಬರೆದಿದ್ದಾರೆ.
ಈ ಎಳೆಯನ್ನು ಹಿಡಿದು ಹೊರಟಾಗ ರಮಾಬಾಯಿ ಚರಿತ್ರೆಯನ್ನು ಕೂಡ ಇತಿಹಾಸ ಮರೆಮಾಚಬಾರದೆನಿಸಿತು. ರಮಾಬಾಯಿ ಅವರ ಜೀವನವೂ ಕೂಡ ತಲ್ಲಣಗಳನ್ನು ಸೃಷ್ಟಿಮಾಡುವ ಸಾಮಾಜಿಕ ಕ್ರೂರತೆಯನ್ನು ಬಿಂಬಿಸುವ ರೀತಿಯಲ್ಲಿ ಇಂದಿನ ಸಮಾಜಕ್ಕೆ ಮಾದರಿ ಎನಿಸಿದೆ. ಮಾನವ ಪ್ರೇಮಿ ಅಂಬೇಡ್ಕರರ ಮಹಾ ಮಾನವತಾ ಹೋರಾಟಕ್ಕೆ ರಮಾಬಾಯಿ ಅವರ ತ್ಯಾಗ ಅನನ್ಯವಾಗಿದೆಂದು ಉಲ್ಲೇಖಿಸಿದ್ದಾರೆ. ಅಲ್ಲದೇ ತಮ್ಮ ಶ್ರೀಮತಿಯವರು ಪಟ್ಟ ತ್ಯಾಗ, ಪರಿಶ್ರಮ ಅನುಭವಿಸಿದ ನೋವು, ಹಸಿವು, ನಿದ್ರಾಹೀನತೆ, ಕ್ರೂರ ಬಡತನ, ನಿಂದನೆ, ತನ್ನ ಮಕ್ಕಳ ಸಾವಿನ ಆಕ್ರಂದನಗಳನ್ನು ತಾನೇ ನುಂಗಿಕೊAಡು ಅಂಬೇಡ್ಕರರಿಗೂ ತಾಯಿತನ ತುಂಬಿದ್ದೇ ಅಂಬೇಡ್ಕರ್‌ರವರ ಈ ಮಟ್ಟದ ಸಾಧನೆಗೆ ಕಾರಣವಾಗಿತ್ತು ಬಹುಶಃ ಅದಕ್ಕೆ ಡಾ.ಅಂಬೇಡ್ಕರ್ ಹೇಳಿರಬೇಕು ‘ವೈಫ್ ನಥಿಂಗ್ ಬಟ್ ಮದರ್’ ಹೆಂಡತಿ ಎಂದರೆ ‘ಬಾಳಸಂಗಾತಿಯಲ್ಲ ಆಕೆ ತಾಯಿಯೂ ಕೂಡ, ಆಕೆ ಬದುಕಿನ ಬಹುದೊಡ್ಡ ಗೆಳತಿ’ ಎಂದು. ರಮಾಬಾಯಿ ಅವರನ್ನು ಕೈಹಿಡಿದಿದ್ದೇ ಅಂಬೇಡ್ಕರ್ ಅವರಿಗೆ ಮೊದಲ ಗೆಲುವು, ಆಕೆಯಲ್ಲದೇ ಮತ್ಯಾರೂ ಆ ಕ್ರೂರ ಬದುಕನ್ನು ಸಹಿಸಲಾಗುತ್ತಿರಲಿಲ್ಲ. ಅದನ್ನು ಅಂಬೇಡ್ಕರ್ ಅವರೇ ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಷನ್ & ಅಕಾಡಮಿಯ ಮುಖ್ಯಸ್ಥರಾದ ನಿಸಾರ್ ಅಹಮ್ಮ ದ್‌ರವರು ಕಾರ್ಯಕ್ರಮದ ಕುರಿತು ಮಾತನಾ ಡುತ್ತಾ ರಮಾಭಾಯಿ ಅಂಬೇಡ್ಕರ್‌ರವರು ತಮ್ಮ ಪತಿಯಾದ ಅಂಬೇಡ್ಕರ್‌ರವರ ಅನುಪಸ್ಥಿ ತಿಯಲ್ಲಿ ತನ್ನ ಆಭರಣಗಳನ್ನು ಮಾರಿ ತಮ್ಮ ಮಕ್ಕಳ ಶವಸಂಸ್ಕಾರವನ್ನು ಮಾಡಿದ ಸ್ಥಿತಿ ಯಾವೊಬ್ಬ ಭಾರತೀಯ ಪುರಷನ ಹೆಂಡತಿಗೂ ಬಂದಿರಲಾರದು. ಅಂಬೇಡ್ಕರ್‌ರವರ ಪ್ರತಿಯೊಂದು ಕಾರ್ಯದಲ್ಲೂ ನೆರಳಾಗಿ ನಿಂತು ಅವರಿಗೆ ಪ್ರೇರಪಣೆಯಾಗಿದ್ದರು ಎನ್ನಲಾಗಿದೆ, ಜೊತೆಗೆ ರಮಾಭಾಯಿ ಅವರು ಎಂದಿಗೂ ಹೊರ ಜಗತ್ತಿಗೆ ಕಾಣಿಸಿಕೊಳ್ಳದೇ ಅಂಬೇಡ್ಕರ್‌ರವರ ಪ್ರತಿಯೊಂದು ಕಾಯಕದಲ್ಲಿಯೂ ಮುಂಚೂಣಿಯಲ್ಲಿದ್ದರು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ತುಮಕೂರು ಜಿಲ್ಲಾಧ್ಯಕ್ಷರು ಎನ್.ಕೆ ನಿಧಿ ಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷಿ÷್ಮÃನಾರಾಯಣ್ ಎಸ್., ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷರಾದ ಕಿರಣ್ ವೈ.ಎಸ್., ತುಮಕೂರು ನಗರದ ಅಧ್ಯಕ್ಷ ರಾದ ಮನು ಟಿ.ಎಲ್., ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷರಾದ ಜೆಬಿನೇಶನ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರಾದ ಇಲ್ಲಾಸ್ ಅಹ್ಮದ್, ಅಲ್ಪಸಂಖ್ಯಾತರ ಯುವಘಟಕದ ಜಿಲ್ಲಾ ಅಧ್ಯಕ್ಷರಾದ ಮೋಹಿನ್ ಅಹ್ಮದ್, ಡಾ. ಎ.ಪಿ.ಜಿ ಅಬ್ದುಲ್ ಕಲಾಂ ಫೌಂಡೇಶನ್ ಅಂಡ್ ಅಕಾಡೆಮಿ ಮುಖ್ಯಸ್ಥರಾದ ನಿಸಾರ್ ಅಹ್ಮದ್, ಮುಖಂಡರುಗಳಾದ ರವಿಕುಮಾರ್, ಪ್ರಸನ್ನ ಗೂಳೂರು, ಅಬ್ದುಲ್ ರೆಹಮಾನ್, ಇಲಿಯಾಜ್ ಅಹಮದ್, ಗುಲ್ಜಾರ್ ಅಹಮದ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
(Visited 1 times, 1 visits today)