
ಕುಣಿಗಲ್: ನನ್ನ ಮಗನ ಸಾವಿಗೆ ಕ್ರಿಕೆಟ್ ಮ್ಯಾಚ್ ನಡೆಸಿದವರೆ ಕಾರಣ ಎಂದು ಮೃತ ಮನೋಜ್‌ನ ತಾಯಿ ಲಕ್ಷ್ಮಮ್ಮ ಆರೋಪಿಸಿದ್ದಾರೆ.
ಯಾರನ್ನು ಮಗ ಅಂತ ಕರೆಯಲಿ ಎಂದು ಮನೋಜ್ ತಾಯಿ ರೋಧಿಸಿದ್ದಾರೆ. ಸ್ನೇಹಿತರು ಕರೆದುಕೊಂಡು ಹೋಗಿ ಕರೆದುಕೊಂಡು ಬಂದಿಲ್ಲ, ಸ್ನೇಹಿತರು ಚೆನ್ನಾಗಿದ್ದಾರೆ ಮಗ ಮೃತಪಟ್ಟಿದ್ದಾನೆ. ಸರಕಾರದ ದುಡ್ಡು ತೆಗೆದುಕೊಂಡು ಏನು ಮಾಡಲಿ, ನನಗೆ ಮಗ ಬೇಕು ಎಂದಿದ್ದಾರೆ.
ಮೊಬೈಲ್ ಮರೆತು ಹೋಗಿದ್ದ ವಾಪಸ್ ಬಂದು ತೆಗೆದುಕೊಂಡು ಹೋಗಿದ್ದ ಅದೇ ಕೊನೆಯದಾಗಿತ್ತು ಎಂದಿದ್ದಾರೆ.
ಐಪಿಎಲ್ ವಿಜಯೋತ್ಸವದ ಕಾಯಕ್ರಮ ಈ ರೀತಿ ಪ್ಲಾನ್ ಮಾಡಬಾರದಿತ್ತು, ಸರಕಾರ ಬೇಕಾಬಿಟ್ಟಿ ಧೋರಣೆಯಿಂದ ಕಾಯಕ್ರಮ ಮಾಡಿದ್ದರಿಂದ ರಾಜ್ಯದಲ್ಲಿ ೧೧ ಜನ ಮೃತಪಟ್ಟಿದ್ದಾರೆ. ಇದಕ್ಕೆ ನೇರ ಹೊಣೆ ರಾಜ್ಯ ಸರಕಾರವಾಗಿದೆ ಎಂದು ವಿಜ ಯೋತ್ಸವದ ವೇಳೆ ಮೃತಪಟ್ಟ ಐಪಿಎಲ್ ಅಭಿಮಾನಿ ಮನೋಜ್ ಅವರ ಅಂಕಲ್ ತಿಮ್ಮಪ್ಪ ತಿಳಿಸಿದ್ದಾರೆ. ಸುಮಾರು ೨೦ ಹಿಂದೆ ಮಕ್ಕಳ ವಿದ್ಯಾಬ್ಯಾಸಕ್ಕೆ ಬೆಂಗಳೂರಿಗೆ ಹೋಗಿದ್ದರು. ರಾಜ್ಯ ಸರಕಾರ ೧೦ ಲಕ್ಷ ರೂ. ಪರಿಹಾರ ಕೊಡುತ್ತೇವೆ ಎನ್ನುತ್ತಾರೆ, ಮಕ್ಕಳನ್ನು ತಂದು ಕೊಡಲು ಸಾಧ್ಯವೇ. ಅದು ಬದುಕಿದ್ದರೆ ದುಡಿಯುತ್ತಿದ್ದನು. ಐಪಿಎಲ್ ಎಂಬ ಭೂತದಿಂದ ಈ ದುರಂತ ಕಾರಣವಾಗಿದೆ. ಐಪಿಎಲ್ ಮತ್ತು ಸರಕಾರ ಪರಿಹಾರ ಕೊಡುತ್ತೇವೆ ಎನ್ನುತ್ತಾರೆ, ಕೋಟಿಗಟ್ಟಲೆ ಹಣ ಮಾಡುತ್ತಿದ್ದಾರೆ.ಐಪಿಎಲ್ ಮತ್ತು ಸರಕಾರ ಸತ್ತಿರುವ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಕ್ಕೆ ತಲಾ ೫೦ ಲಕ್ಷ ರೂ. ಕೊಡಬೇಕು ಎಂದು ಆಗ್ರಹಿಸಿದರು.
೫೦ ಲಕ್ಷ ಕೊಡುತ್ತೇನೆ ನನ್ನ ಮಗನನ್ನು ತಂದು ಕೊಡಲಿ: ಸರಕಾರಕ್ಕೆ ನಾನೇ ೫೦ ಲಕ್ಷ ರೂ. ಗಳನ್ನು ಕೊಡುತ್ತೇನೆ. ನನ್ನ ಮಗನನ್ನು ತಂದು ಕೊಡಲಿ, ತಂದು ಕೊಡುತ್ತಾರೆಯೇ. ನನ್ನ ಮಗನನ್ನು ಕೊಡಿಸಲಿ ಎಂದು ಬೆಂಗಳೂರಿನಲ್ಲಿ ಐಪಿಎಲ್ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಮನೋಜ್ ಅವರ ತಂದೆ ದೇವರಾಜ್ ನೊಂದು ನುಡಿದಿದ್ದಾರೆ. ಜಿಲ್ಲೆಯ ಕುಣಿಗಲ್ ನಲ್ಲಿ ಮನೋಜ್ ಶವದ ಅಂತ್ಯಸAಸ್ಕಾರ ಮಾಡಿದ ನಂತರ ಪತ್ರಕತರೊಂದಿಗೆ ಮಾತನಾಡಿದ ಅವರು, ಸರಕಾರ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿತ್ತು. ಸರಕಾರ ಕೋಟಿ ಕೊಟ್ಟರೂ ನನ್ನ ಮಗನನ್ನು ತಂದು ಕೊಡಲು ಸಾಧ್ಯವಿಲ್ಲ ಎಂದು ರೋಧಿಸಿದರು. ಈ ರೀತಿ ಐಪಿಎಲ್ ವಿಜಯೋತ್ಸವ ಕಾಯಕ್ರಮವನ್ನು ಒಂದು ವಾರ ಬಿಟ್ಟು ಮಾಡಬಹುದಿತ್ತು. ನನ್ನ ಮಗನನ್ನು ಸಾಲ ಮಾಡಿ ಬೆಂಗಳೂರಿನ ಕಾಲೇಜಿಗೆ ಸೇರಿಸಿದ್ದೆ ಎಂದಿದ್ದಾರೆ.

 
									 
					



