ತುಮಕೂರು: ಜಿಲ್ಲೆಯಲ್ಲಿ  ಐಟಿ(ಇನ್ಫಾರ್ಮೇಷನ್ ಟೆಕ್ನಾಲಜಿ) ಕಂಪನಿಗಳ ಸ್ಥಾಪನೆಯಿಂದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಹೊಂದಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಿಕ ಸಭಾಂಗಣದಲ್ಲಿ ಬುಧವಾರ ಐಟಿ ಕಂಪನಿಗಳ ಉದ್ಯಮಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು ನಮ್ಮ ಜಿಲ್ಲೆಯಿಂದ ಬೆಂಗಳೂರು ನಗರಕ್ಕೆ ಸುಮಾರು ೪,೦೦೦ ಉದ್ಯೋಗಿಗಳು ಐಟಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಐಟಿ ಕಂಪನಿಗಳನ್ನು ಸ್ಥಾಪಿಸುವುದರಿಂದ  ಬೇರೆ ನಗರಗಳಲ್ಲಿ ಈಗಾಗಲೇ ಉದ್ಯೋಗ ಮಾಡುತ್ತಿರುವ ಸ್ಥಳೀಯ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಐಟಿ ಕಂಪನಿಗಳ ಸ್ಥಾಪನೆಯಿಂದ ಬಿಎಸ್ಸಿ, ಬಿಇ, ಎಂಸಿಎ ಮುಂತಾದ ವಿದ್ಯಾರ್ಹತೆ ಪಡೆದವರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತವೆ. ಇದರಿಂದ ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ರಸ್ತೆ, ವಿದ್ಯುತ್ ಮುಂತಾದ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತವೆ. ಸ್ಥಳೀಯ ಕಾಲೇಜು ಮತ್ತು ತರಬೇತಿ ಕೇಂದ್ರಗಳಲ್ಲಿ ಐಟಿ ಸಂಬAಧಿತ ಕೋರ್ಸುಗಳು ಆರಂಭವಾಗಬಹುದು. ಐಟಿ ಹಬ್ ರೂಪುಗೊಳ್ಳುವುದರಿಂದ ಜಿಲ್ಲೆಯ ಮುಂದಿನ ೧೦ ವರ್ಷಗಳ ಅಭಿವೃದ್ಧಿಗೆ ನಾಂದಿ ಎಂಬAತೆ ಕಾಣುತ್ತದೆ.  ಡಿಜಿಟಲ್ ಶಿಕ್ಷಣ, ಸೈಬರ್ ಜಾಗೃತಿ, ಮಹಿಳಾ ಸಬಲೀಕರಣ, ತಂತ್ರಜ್ಞಾನ ಬಳಕೆಯ ಮೂಲಕ ಸಾಮಾನ್ಯ ಜನರ ಬದುಕು ಸುಧಾರಣೆಯಾಗಬಹುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಕೆಡಿಇಎಂ ಸಿಇಓ ಸಂಜಯ್ ಕುಮಾರ್ ಗುಪ್ತ, ಲೀಡ್ ಪ್ರೋಗ್ರಾಮ್ ಮ್ಯಾನೇಜರ್ ಸುವಿನ್ ಪಿ.ಎನ್. ಅವರನ್ನೊಳಗೊಂಡ ೩೬ ಉದ್ಯಮಿಗಳ ತಂಡವು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ೨,೦೦೦ ಚದರ ಅಡಿ ಅಳತೆಯ ಕಟ್ಟಡ, ಗ್ರಂಥಾಲಯದಲ್ಲಿರುವ ಕಟ್ಟಡಗಳನ್ನೂ ಸಹ  ವೀಕ್ಷಿಸಿತು.
(Visited 1 times, 1 visits today)