
ತುಮಕೂರು: ಗರ್ಭಕಂಠ ಕ್ಯಾನ್ಸರ್, ಪಲ್ಸ್ ಪೋಲಿಯೋ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರೋಟರಿ ತುಮಕೂರು ಮಂಗಳವಾರ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು. ಗರ್ಭ ಕಂಠದ ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಮಹಿಳೆಯರಲ್ಲಿ ಹಾಗೂ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವ ಬಿತ್ತಿ ಪತ್ರ ಪ್ರದರ್ಶಿಸಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿದರು.
ಇದೇ ವೇಳೆ ಬಿಜಿಎಸ್ ವೃತ್ತದಲ್ಲಿ ರೋಟರಿ ಸಂಸ್ಥೆಯ ಕಾಮಧೇನು ಯೋಜನೆಯಡಿ ನೀಡುವ ಹಸುವನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ರೈತ ಮಹಿಳೆಗೆ ಹಸುವನ್ನು ಹಸ್ತಾಂತರ ಮಾಡಿದರು. ರೋಟರಿ ಸಂಸ್ಥೆಯ ಸಮಾಜ ಸೇವಾ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ಕ್ಯಾನ್ಸರ್‌ನಂತಹ ಕಾಯಿಲೆ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಬೇಕು. ಆರಂಭದ ಹಂತದಲ್ಲಿ ಕಂಡುಬರುವ ಕ್ಯಾನ್ಸರ್ ಅನ್ನು ಚಿಕಿತ್ಸೆ ಮೂಲಕ ವಾಸಿ ಮಾಡಬಹುದು. ಈ ಬಗ್ಗೆ ಜನರಲ್ಲಿರುವ ಭಯ ನಿವಾರಿಸಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ರೋಟರಿಯಂತಹ ಸಂಸ್ಥೆಗಳು ತಿಳುವಳಿಕೆ ಮೂಡಿಸುತ್ತಿರುವುದು ಒಳ್ಳೆಯ ಕಾರ್ಯ ಎಂದರು.
ರೋಟರಿ ಜಿಲ್ಲಾ ಗೌರ್ನರ್ ಎಲಿಜಬೆತ್ ಚೆರಿಯನ್ ಅವರು ಕ್ಯಾನ್ಸರ್, ಪಲ್ಸ್ ಪೋಲಿಯೋ ಜಾಗೃತಿ ಜಾಥಾಗೆ ಚಾಲನೆ ನೀಡಿ, ಇತ್ತೀಚೆಗೆ ಕ್ಯಾನ್ಸರ್ ಕಾಯಿಲೆ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಗರ್ಭ ಕಂಠದ ಕ್ಯಾನ್ಸರ್ ಕೂಡಾ ಮಹಿಳೆಯರಲ್ಲಿ ಆತಂಕ ಉಂಟು ಮಾಡಿದೆ. ಪ್ರಪಂಚದ ಮೂರೂವರೆ ಲಕ್ಷ ಹಾಗೂ ಭಾರತದ ಸುಮಾರು ಒಂದು ಲಕ್ಷ ಹೆಣ್ಣುಮಕ್ಕಳು ಗರ್ಭ ಕಂಠದ ಕ್ಯಾನ್ಸರ್‌ನಿಂದ ಸಾವಿಗೀಡಾಗಿದ್ದಾರೆ. ಈ ಅಂಕಿಅ0ಶಗಳ ಪ್ರಕಾರ ನಮ್ಮ ದೇಶದಲ್ಲಿ ಕ್ಯಾನ್ಸರ್ ವ್ಯಾಪಕವಾಗಿರುವುದು ಕಂಡುಬ0ದಿದೆ ಎಂದರು.
ಮೊದಲ ಹಂತಗಳಲ್ಲಿ ಗರ್ಭ ಕಂಠದ ಕ್ಯಾನ್ಸರ್ ಅನ್ನು ಗುಣಪಡಿಸಬಹುದು. ಇದಕ್ಕಾಗಿ ೯ ವರ್ಷದಿಂದ ಮೇಲ್ಪಟ್ಟ ಎಲ್ಲಾ ಹೆಣ್ಣುಮಕ್ಕಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ಲಕ್ಷಣ ಕಂಡುಬ0ದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು. ಪಲ್ಸ್ ಪೋಲಿಯೋ ವಿರುದ್ಧವೂ ಎಚ್ಚರವಹಿಸಬೇಕು. ಹೆಣ್ಣುಮಕ್ಕಳು ತಪ್ಪದೇ ವ್ಯಾಕ್ಸಿನೇಷನ್ ಪಡೆಯಬೇಕು ಎಂದರು.
ಪ್ರಪ0ಚವನ್ನು ಪೋಲಿಯೊಮುಕ್ತ ಮಾಡಬೇಕು ಎಂಬ ಹೋರಾಟ ಮುಂದುವರೆದಿದೆ. ಪಾಕಿಸ್ತಾನ, ಆಫ್ಗಾನಿಸ್ಥಾನ ದೇಶಗಳಲ್ಲಿ ಮಾತ್ರ ಪೋಲಿಯೋ ಕಂಡುಬ0ದಿದೆ. ಪೋಲಿಯೋ ವನ್ನು ಸಂಪೂರ್ಣವಾಗಿ ಇಲ್ಲವಾಗಿಸುವವರೆಗೂ ರೋಟರಿ ಸದಸ್ಯರು ಶ್ರಮಿಸಬೇಕು. ರೋಟರಿ ಸಂಸ್ಥೆ ನಿರಂತರವಾಗಿ ಕಾರ್ಯ ಕ್ರಮಗಳನ್ನು ಹಮಿಕೊಳ್ಳುತ್ತದೆ ಎಂದು ಎಲಿಜೆಬೆತ್ ಚೆರಿಯನ್ ಹೇಳಿದರು. ರೋಟರಿ ಮಾಜಿ ಗೌರ್ನರ್‌ಗಳಾದ ಬಿಳಿಗೆರೆ ಶಿವಕುಮಾರ್, ಆಶಾ ಪ್ರಸನ್ನಕುಮಾರ್, ರೋಟರಿ ತುಮಕೂರು ಅಧ್ಯಕ್ಷ ಡಾ.ಎ.ಎಸ್.ಸುದರ್ಶನ್, ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಉಮೇಶ್, ಜಂಟಿ ಕಾರ್ಯದರ್ಶಿ ಸಿ.ನಾಗರಾಜ್, ಕಾರ್ಯದರ್ಶಿ ಮಲ್ಲೇಶಯ್ಯ, ರೋಟರಿ ಜಿಲ್ಲಾ ಸಮಿತಿ ನಿರ್ದೇಶಕ ದಿಲೀಪ್ ಪಿಳೈ, ರೋಟರಿ ಜಿಲ್ಲಾ ಕ್ಯಾನ್ಸರ್ ಸಮಿತಿ ನಿರ್ದೇಶಕ ಡಿ.ಎನ್.ಶ್ರೀನಾಥ್, ಇನ್ನರ್ ವೀಲ್ ಅಧ್ಯಕ್ಷೆ ಮಂಜುಳಾ ಲೋಕೇಶ್, ಜಿಲ್ಲಾ ಕ್ಯಾನ್ಸರ್ ಜಾಗೃತಿ ಸಮಿತಿ ಸದಸ್ಯೆ ಅನಿತಾ ಸುಧೀರ್, ರೋಟರಿ ಪಲ್ಸ್ ಪೋಲಿಯೊ ನಿರ್ದೇಶಕಿ ವೀಣಾ ಉಮಾಶಂಕರ್, ಜೋನಲ್ ಅಂಬಾಸಿಡರ್ ಜಿ.ಎನ್.ಪ್ರಸನ್ನ, ಸಹಾಯಕ ಗೌರ್ನರ್ ಕೃಷ್ಣಪ್ರಸಾದ್, ಮುಖಂಡರಾದ ಹೆಚ್.ಮಹೇಶ್, ಪ್ರಿಯಾ ಪ್ರದೀಪ್, ಜಿ.ಎನ್.ಜಯರಾಮಶೆಟ್ಟಿ, ಭಾಗ್ಯಲಕ್ಷಿö್ಮ ನಾಗರಾಜ್, ಕೀರ್ತಿಶೇಖರ್ ಮಲ್ಲೇಶಯ್ಯ, ಬಸವರಾಜ ಹಿರೇಮಠ್, ಅನಿತಾ ನಾಗೇಶ್, ರಾಧಾ, ನಾಗಮಣಿ ಮೊದಲಾದವರು ಭಾಗವಹಿಸಿದ್ದರು.
ಬಿಜಿಎಸ್ ವೃತ್ತದಿಂದ ಆರಂಭವಾದ ಜಾಗೃತಿ ಜಾಥಾ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ, ಜನರಲ್ ಕಾರ್ಯಪ್ಪ ರಸ್ತೆ ಮೂಲಕ ಸಾಗಿ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕೊನೆಗೊಂಡಿತು.





