
ಮಧುಗಿರಿ: ಸರ್ಕಾರ ಮತ್ತು ಅಧಿಕಾರಿಗಳು ಇರುವುದು ಬಡವರ ಪರ ಕೆಲಸ ಮಾಡಲು ಅದರಲ್ಲೂ ನಮ್ಮ ಸರ್ಕಾರದಲ್ಲಿ ತಂದಿರುವ ಅನೇಕ ಯೋಜನೆಗಳು ಬಡಜನರ ಉದ್ಧಾರಕ್ಕಾಗಿ ಬಡವರ್ಗದವರ ಏಳ್ಗೆಗಾಗಿಯೇ ಶ್ರಮಿಸಲಾಗುವುದು ಎಂದು ಮಾಜಿ ಸಚಿವ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.
ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಬುಧವಾರ ದೊಡ್ಡೇರಿ ಹೋಬಳಿಯ ಜನಸ್ಪಂದನಾ ಕಾರ್ಯಕ್ರಮ ಮತ್ತು ಕಾರ್ಯಾದೇಶ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನತೆ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯಬಾರದು ಎಂಬ ಉದ್ದೇಶ ದಿಂದ ಸರ್ಕಾರದ ವತಿಯಿಂದ ಜನಸ್ಪಂದನಾ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಕ್ಷೇತ್ರದ ಪ್ರತಿಯೊಬ್ಬರಿಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬದ್ದ. ಈ ಹಿಂದೆ ಅತೀ ಹೆಚ್ಚು ಅರ್ಜಿಗಳು ಮನೆ ಮತ್ತು ನಿವೇಶನಕ್ಕೆ ಬರುತ್ತಿದ್ದವು. ಆದರೆ ನಾನು ಶಾಸಕನಾದ ನಂತರ ಅರ್ಹ ಫಲಾನು ಭವಿಗಳಿಗೆ ನಿವೇಶನ ನೀಡುವ ಯೋಜನೆ ಜಾರಿಗೊ ಳಿಸಿದ್ದರಿಂದ ಈಗ ಕ್ಷೇತ್ರವನ್ನು ಗುಡಿಸಲು ಮುಕ್ತ ಗೊಳಿಸಲಾಗಿದೆ ಎಂದರು.
ಅರ್ಹರಿಗೆ ದೊರೆಯುವ ಸೌಲಭ್ಯ ಅನರ್ಹರಿಗೆ ದೊರೆತರೆ ಅದು ಮಹಾಪಾಪ. ಉದ್ಯೋಗದ ಸ್ಕಿಲ್ ಕಲಿತರೆ ಈ ಭಾಗದ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಕೆಲಸ ಸಿಗಲಿದೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು ಎಂಬ ಉದ್ದೇಶದಿಂದ ಈ ಭಾಗದಲ್ಲಿ ಜಿಟಿಟಿಸಿ ಕಾಲೇಜು ಪ್ರಾರಂಭಿಸಲಾಗುತ್ತಿದ್ದು, ಪೋಷ ಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ಸರ್ಕಾರ ಶಿಕ್ಷಣಕ್ಕಾಗಿ ಬಹಳಷ್ಟು ಸವಲತ್ತುಗಳನ್ನು ನೀಡಿದ್ದು, ಇದರ ಸದುಪಯೋಗ ಪಡೆದುಕೊಂಡು ಗುಣಮಟ್ಟದ ಶಿಕ್ಷಣ ಕೊಡಿಸಿ. ಇದರಿಂದ ನಿಮಗೂ ಗೌರವ ದೊರೆಯಲಿದೆ ಎಂದು ಕಿವಿ ಮಾತು ಹೇಳಿದರು.
ದೊಡ್ಡೇರಿ ಹೋಬಳಿಯ ಎ. ಎಂ ಕಾವಲ್ ನಲ್ಲಿ ಬೆಂಗಳೂರಿನ ಕೆಲ ಡ್ಯೂಪ್ಲಿಕೇಟ್ ಜನ ಜಮೀನು ಮಾಡಿಕೊಂಡಿದ್ದು , ಅಂತಹ ಪ್ರಕರಣಗಳು ಲೋಕಾಯುಕ್ತದಲ್ಲಿದೆ. ಆದರೆ ಈ ಭಾಗದಲ್ಲಿ ಬಡ ರೈತರು ಉಳುಮೆ ಮಾಡುತ್ತಿದ್ದು, ಅವರಿಗೆ ನ್ಯಾಯ ದೊರೆಯಬೇಕು. ರೈತರಿಗೆ ಅನಾನುಕೂಲವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ತಿಳಿಸಿದ ಅವರು ನ. ೨೪ ರಂದು ಬಗರ್ ಹುಕುಂ ಸಭೆ ನಡೆಸಲು ಉದ್ದೇಶಿಸಲಾಗಿದ್ದು, ಇದರಲ್ಲಿ ಬಗರ್ ಹುಕುಂ ಅರ್ಜಿಗಳ ಬಗ್ಗೆ ಚರ್ಚೆ ನಡೆಸಲಾ ಗುವುದು ಎಂದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಜನ ಸಂಪರ್ಕ ಸಭೆಯಲ್ಲಿ ಶೇ. ೭೦ ರಷ್ಡು ಕಂದಾಯ ಇಲಾಖೆಯ ಅರ್ಜಿಗಳೇ ಬರುತ್ತವೆ ಎಂದರು.
ಜಿಲ್ಲೆಯಲ್ಲಿ ೫೦೦ ಕಂದಾಯ ಗ್ರಾಮಗಳು, ಉಪ ಗ್ರಾಮಗಳ ಗುರುತು ಮಾಡಿದ್ದು, ಸರ್ಕಾರಕ್ಕೆ ಅಧಿಸೂಚನೆಗೆ ಕಳುಹಿಸಲಾಗಿದೆ ಇದರಲ್ಲಿ ೨೦ ಸಾವಿರ ಜನತೆ, ೪೦ ಉಪ ಗ್ರಾಮ ೧೫೦೦ ಕುಟುಂಬಗಳು ಬರಲಿವೆ. ಮಧುಗಿರಿ ತಾಲೂಕಿನಲ್ಲಿ ೫೨೨ ರೈತರಿಗೆ ದರ್ಕಾಸ್ತ್ ಜಮೀನು ಮಂಜೂರು ಮಾಡಲಾಗಿದೆ.
ಜಿ.ಪಂ ಸಿಇಓ ಜಿ. ಪ್ರಭು ಮಾತನಾಡಿ ವರ್ಷಕ್ಕೆ ಒಂದು ಅಥವಾ ಎರಡು ಇಲಾಖೆ ಗುರಿಯಾಗಿಸಿಕೊಂಡು ಸಮಗ್ರ ಅಭಿವೃದ್ಧಿ ಗೆ ಕ್ರಮ ಕೈಗೊಳ್ಳಲಾಗಿದ್ದು, ಎನ್. ಆರ್.ಇ.ಜಿ ಯಲ್ಲಿ ತುಮಕೂರು ಜಿಲ್ಲೆ ರಾಜ್ಯಕ್ಕೆ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ೯೬ ಕೋಟಿ ವೆಚ್ಚದಲ್ಲಿ ೬ ಸಾವಿರ ಕಾಮಗಾರಿಗಳ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ: ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಂ, ತಹಶೀಲ್ದಾರ್ ಶ್ರೀನಿವಾಸ್, ಪುರಸಭಾಧ್ಯಕ್ಷ ಲಾಲಾಪೇಟೆ ಮಂಜುನಾಥ್, ತಾ.ಪಂ ಇಓ ಲಕ್ಷ್ಮಣ್, ಯೋಜನಾ ನಿರ್ದೇಶಕ ಧನಂಜಯ್, ಬೆಸ್ಕಾಂ ಇಇ ಜಗದೀಶ್, ಜಿ.ಪಂ ಎಇಇ ಮಂಜುನಾಥ್, ಬಿಇಓ ಹನುಮಂತರಾಯಪ್ಪ, ಪಿಡಬ್ಲ್ಯೂಡಿ ಇಇ ಹನುಮಂತರಾವ್, ಜಿ. ಪಂ ಮಾಜಿ ಸದಸ್ಯ ಚಿನ್ನಪ್ಪ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಚೌಡಪ್ಪ, ಕೃಷಿಕ ಸಮಾಜದ ಅಧ್ಯಕ್ಷ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಪಿಡಿಒಗಳಾದ ಶಿಲ್ಪಾ, ಮುತ್ತುರಾಜು, ಗೌಡಪ್ಪ, ಪ್ರಶಾಂತ್, ಅಲ್ಮಾಸ್, ದಿವ್ಯಶ್ರೀ, ದಯಾನಂದ, ಗೋಪಾಲಕೃಷ್ಣ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಶೈಲಜಾ,ಕಂದಾಯ ತನಿಖಾಧಿಕಾರಿ ಜಯಪ್ರಕಾಶ್, ದೊಡ್ಡೇರಿ ಗ್ರಾ. ಪಂ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲಕ್ಷ್ಮೀ, ಗ್ರಾ.ಪಂ ಅಧ್ಯಕ್ಷರಾದ ತಾಯಮ್ಮ, ಕಾವ್ಯಶ್ರೀ, ನಾಗೇಶ್, ರಂಗನಾಥ್, ಭಾನುಪ್ರಿಯ, ಮುಖಂಡರಾದ ಲಕ್ಷ್ಮೀನಾರಾಯಣ್, ನಾರಾಯಣಗೌಡ, ಕಲ್ಲಹಳ್ಳಿ ದೇವರಾಜು, ಟಿಪಿ ಮಂಜುನಾಥ್ ಇತರರಿದ್ದರು.



