
ಚಿಕ್ಕನಾಯಕನಹಳ್ಳಿ: ವಿಶೇಷ ಚೇತನರ, ವೃದ್ದರ, ಮಕ್ಕಳ ಸೇವೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಮಾಜ ಮುಖಿಯಾಗಿ ಕೆಲಸ ಮಾಡಬೇಕಿದೆ ಈ ನಿಟ್ಟಿನಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ತಾಲ್ಲೂಕಿನ ಹಂದನಕೆರೆ ಹೋಬಳಿಯ ಗೂಬೆಹಳ್ಳಿಯ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮೊಬಿಲಿಟಿ ಸಂಸ್ಥೆಯವರು ಏರ್ಪಡಿಸಲಾಗಿದ್ದ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಹಲವಾರು ವರ್ಷಗಳಿಂದ ನಮ್ಮ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ಉತ್ತಮವಾಗಿದೆ ಪ್ರತಿಯೊ ಬ್ಬರು ಸಮಾಜಮುಖಿಯಾಗಿ ವೃದ್ದರ, ಮಕ್ಕಳ , ವಿಶೇಷ ಚೇತನರ ಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕಿದೆ ಇಂದು ಕಣ್ಣಿನ ಪೊರೆ ಚಿಕತ್ಸೆ ಆಗಿರುವವರಿಗೆ ಕನ್ನಡಕ, ಊರುಗೋಲು, ವೀಲ್ಚೇರ್, ನೀಡುವಂತಹ ಹಲವಾರು ಕೆಲಸಗ ಳನ್ನು ಮಾಡುತ್ತಿರುವ ಈ ಸಂಸ್ಥೆಯೊAದಿಗೆ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಸುಮಾರು ೫೦೦ ಜನ ವಿಶೇಷ ಚೇತನರಿಗೆ ಪುನಃಶ್ಚೇತನ ಗೊಳಿಸುವಂತಹ ಒಂದು ವಿಶೇಷ ಕೇಂದ್ರವನ್ನು ೫ ಎಕರೆ ಜಾಗದಲ್ಲಿ ಮಾಡುವ ಮೂಲಕ ಇಲ್ಲಿ ಎಲ್ಲ ಸೌಲಭ್ಯವನ್ನು ನೀಡುವದರೊಂದಿಗೆ ಇಲ್ಲಿ ವೃದ್ದರು ನೆಮ್ಮದಿಯಾಗಿ ಬದುಕುವಂತಹ ಒಂದು ವಾತವರಣವನ್ನು ನಿರ್ಮಿಸುವುದಾಗಿ ತಿಳಿಸಿದರು.
ಸಂಸ್ಥೆಯ ಮುಖ್ಯಸ್ಥೆ ಮುಬಿನಾ ಮಾತನಾಡಿ, ಗ್ರಾಮೀಣ ಭಾಗದ ಜನರಿಗಾಗಿ ಅವರಿಗೆ ಅವಶ್ಯಕತೆ ಇರುವಂತಹ ವೃದ್ದರಿಗೆ, ಮಕ್ಕಳಿಗೆ ವಿಶೇಷ ಚೇತನರಿಗೆ ಅಗತ್ಯವಿರುವಂತಹ ಸಾಧನ ಸಲಕರಣೆಗಳನ್ನು ನೀಡುತ್ತಿದೆ. ಈ ಸಂಸ್ಥೆ ಈ ಹಿಂದಿನಿ0ದ ಕೇವಲ ವಿಶೇಷ ಚೇತನರಿಗೆ ಮಾತ್ರ ಸೇವೆ ಮಾಡುತ್ತಿದ್ದು ನಂತರದಲ್ಲಿ ಪ್ರತಿದಿನದಲ್ಲಿ ಅತ್ಯವಶ್ಯಕವಾಗಿರುವಂತಹ ಸಲಕರಣೆಗಳನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದು ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮೊಬಿಲಿಟಿ ಇಂಡಿ ಯಾ ಸಂಸ್ಥೆಯ ಆನಂದ್, ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ, ಮುಖಂಡರುಗಳಾದ ಹನುಮ ಂತಪ್ಪ, ಸುರೇಶ್, ಸೇರಿದಂತೆ ಇತರರು ಇದ್ದರು.



