ಹುಳಿಯಾರು: ರೈತ ಸಂಘ ಒತ್ತಾಯದಿಂದಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹುಳಿಯಾರು ಗಾಂಧಿ ಪೇಟೆಯಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಎಪಿಎಂಸಿಗೆ ಬದಲಾಯಿಸಲು ನಿರ್ಧರಿಸಿದ್ದರು. ಎಪಿಎಂಸಿಯಲ್ಲಿ ಸಂತೆ ಮೈದಾನದ ಜಾಗ ಫಿಕ್ಸ್ ಮಾಡಿ ನೆಲ ಸಮತಟ್ಟು ಮಾಡಲು ನೂರಾರು ಲೋಡ್ ಮಣ್ಣು ಸಹ ಹೊಡೆಸಲಾಗಿತ್ತು. ಅಲ್ಲದೆ ಪಟ್ಟಣ ಪಂಚಾಯ್ತಿಯಲ್ಲಿ ತುರ್ತು ಸಭೆ ನಡೆಸಿ ನೆಲ ಬಾಡಿಗೆಯನ್ನೂ ಸಹ ನಿರ್ಧರಿಸಿದ್ದರು. ಆದರೆ ಈಗ ಈ ಎಲ್ಲಾ ಕೆಲಸಕ್ಕೆ ತಣ್ಣೀರೆರಚುವಂತೆ ಎಪಿಎಂಸಿ ಹೆಜ್ಜೆ ಇಟ್ಟಿದೆ.
ಎಪಿಎಂಸಿಯ ಕಾರ್ಯದರ್ಶಿ ಡಾ.ರಾಜಣ್ಣ ಅವರು ಪಟ್ಟಣ ಪಂಚಾಯ್ತಿಗೆ ಪತ್ರ ಬರೆದು ನೆಲ ಬಾಡಿಗೆ ನಿಗದಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಪಿಎಂಸಿಗಳು ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ ೧೯೬೬, ನಿಯಮಗಳು ೧೯೬೮ ರಡಿ ಕಾರ್ಯನಿರ್ವಹಿಸುತ್ತಿದ್ದು ಎಪಿಎಂಸಿಯಲ್ಲಿರುವ ಆಸ್ತಿ-ಪಾಸ್ತಿಗಳು ಸಂಪೂರ್ಣವಾಗಿ ಸ್ಥಳೀಯ ಪ್ರಾಧಿಕಾರಕ್ಕೆ ಸೇರಿರುತ್ತವೆ. ಎಪಿಎಂಸಿಯ ನಿವೇಶನವನ್ನಾಗಲಿ, ಕಟ್ಟಡಗಳನ್ನಾಗಲಿ ಹಂಚಿಕೆ ಮಾಡುವ ಪ್ರಾಧಿಕಾರದ್ದಾಗಿರುತ್ತದೆ. ಹಾಗಾಗಿ ಪಟ್ಟಣ ಪಂಚಾಯ್ತಿ ಯಾವ ಕಾನೂನಿನಡಿ ಎಪಿಎಂಸಿಯ ಖಾಲಿ ಜಾಗಕ್ಕೆ ದರ ನಿಗದಿ ಮಾಡಲಾಗಿರುತ್ತದೆ ಎಂದು ತಿಳಿದು ಬಂದಿಲ್ಲ. ಈ ಬಗ್ಗೆ ಲಿಖಿತವಾಗಿ ಸೂಕ್ತ ದಾಖಲೆಗಳೊಂದಿಗೆ ವರದಿ ನೀಡುವಂತೆ ಪಟ್ಟಣ ಪಂಚಾಯ್ತಿಗೆ ಪತ್ರ ಬರೆದಿದ್ದಾರೆ.
ಮತ್ತೊಂದು ಪತ್ರದಲ್ಲಿ ಎಪಿಎಂಸಿ ಹೊರ ಭಾಗದಲ್ಲಿರುವ ಜಾಗವನ್ನು ವಾರದ ಸಂತೆ ನಡೆಸಲು ಗುರುತು ಮಾಡಿ, ಸಮತಟ್ಟು ಮಾಡಲು ಗ್ರಾವಲ್ ಹೊಡೆದು ಸದರಿ ಜಾಗವನ್ನು ಹಸ್ತಾಂತರ ಮಾಡಿಕೊಳ್ಳುವುದಾಗಿ ತಿಳಿಸಿದ್ದೀರಿ. ಆದರೆ ಕಾನೂನಿನ್ವಯ ಸದರಿ ಜಾಗವನ್ನು ಹಸ್ತಾಂತರ ಮಾಡಿಕೊಡಲು ಪ್ರಸ್ತುತ ಸಾಧ್ಯವಿರುವುದಿಲ್ಲ. ಅಲ್ಲದೆ ಈ ಬಗ್ಗೆ ಕೇಂದ್ರ ಕಛೇರಿಯೊಂದಿಗೆ ಪತ್ರ ವ್ಯವಹಾರ ನಡೆಸಿ ಅವರ ಆದೇಶದನ್ವಯ ಕ್ರಮ ಜರುಗಿಸಲಾಗುವುದು. ಅಲ್ಲಿಯ ವರೆವಿಗೆ ಎಪಿಎಂಸಿ ಜಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಬಾರದೆಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ಎಪಿಎಂಸಿ ಕಾರ್ಯದರ್ಶಿ ತಿಳಿಸಿದ್ದಾರೆ.
ಎಪಿಂಸಿಯ ಈ ಎರಡು ಪತ್ರದ ಪ್ರಕಾರ ಸದ್ಯಕ್ಕೆ ವಾರದ ಸಂತೆ ಎಪಿಎಂಸಿಗೆ ಬದಲಾವಣೆ ಅಸಾಧ್ಯವಾಗಿದೆ. ಅಲ್ಲದೆ ವಾರದ ಸಂತೆ ವ್ಯಾಪಾರಿಗಳೂ ಸಹ ನಾವೆಲ್ಲರೂ ಹಾಲಿ ಸಂತೆ ಮೈದಾನದಲ್ಲೇ ಸಂತೆ ನಡೆಸಿಕೊಂಡು ಹೋಗುತ್ತೇವೆ ಎಂದು ಮನವಿ ಸಹ ಮಾಡಿರುವುದರಿಂದ ಎಂದಿನAತೆ ಪೇಟೆ ಬೀದಿಯಲ್ಲೇ ವಾರದ ಸಂತೆ ನಿರಾತಂಕವಾಗಿ ನಡೆಯುವ ಲಕ್ಷಣಗಳು ಕಾಣಸಿಗುತ್ತಿದೆ.
ಕೆಡವಿದ ಕಾಂಪೌAಡ್ ಸಹ ಕಟ್ಟಲಾಗಿದೆ: ಪಟ್ಟಣ ಪಂಚಾಯ್ತಿಯವರು ಎಪಿಎಂಸಿಯಲ್ಲಿ ಸಂತೆ ಜಾಗ ಗುರುತು ಮಾಡಿ ಜೆಸಿಬಿ ಮೂಲಕ ಕ್ಲೀನ್ ಮಾಡುವಾಗ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಹೋಗಲು ಹಾಗೂ ಎಪಿಎಂಸಿಯಲ್ಲಿರುವ ಶೌಚಾಲಯ ಬಳಸಿಕೊಳ್ಳಲು ಅನುಕೂಲ ಆಗುವಂತೆ ಕಾಂಪೌAಡ್ ಕೆಡವಲಾಗಿತ್ತು. ಈ ಬಗ್ಗೆ ಎಪಿಎಂಸಿ ಆಕ್ಷೇಪ ವ್ಯಕ್ತಪಿಡಿಸಿದ ಪರಿಣಾಮ ಒಂದೇ ದಿನದಲ್ಲಿ ಕೆಡವಿದ್ದ ಕಾಂಪೌAಡ್ ಅನ್ನು ಪುನಃ ನಿರ್ಮಿಸಿ ಕೊಡಲಾಯಿತು.

(Visited 1 times, 1 visits today)