
ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಚೌಡನಕುಪ್ಪೆ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷ ಮತ್ತು ಪಿಡಿಒ ಕಾರಣದಿಂದ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಮಾಡಿ ಕಳೆದ ನಾಲ್ಕು ವರ್ಷಗಳಿಂದ ಕಾದುಕುಳಿತಿದ್ದ ಸದಸ್ಯರು ಹಾಗು ರೈತರಿಗೆ ಇತ್ತಿಚೇಗೆ ಸಾಮಗ್ರಿ ವೇಚ್ಚ ಬಿಡುಗಡೆಯಾದರು ಸಹ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣೇಗೌಡ, ಸಾಮಗ್ರಿ ವೇಚ್ಚದ ಬಿಲ್ ಪಾವತಿಸಲು ಬಯೋಮೇಟ್ರಿಕ್ ಮೂಲಕ ಸಹಿ ಮಾಡದ ಕಾರಣ ನರೇಗಾ ಯೋಜನೆಯಡಿ ಬಿಡುಗಡೆಯಾಗಿದ್ದ ೨೪ ಲಕ್ಷ ರೂಪಾಯಿ ಹಣ ಸರ್ಕಾರ ಹಿಂತೆಗೆದುಕೊ0ಡಿದ್ದು, ರಸ್ತೆ,ಚರಂಡಿ,ದನದ ಕೋಟ್ಟಿಗೆ,ಶಾಲಾ ಕಾಂಫೌ0ಡ್ ಸೇರಿ ಇತರೆ ಕಾಮಗಾರಿಗಳನ್ನು ಮಾಡಿ ಕಳೆದ ನಾಲ್ಕುವರ್ಷಗಳಿಂದ ಕಾದು ಕುಳಿತಿದ್ದ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ರೈತರು ಹಣ ಬಿಡುಗಡೆಯಾದರು ಬಿಲ್ ಮಾಡದ ಕಾರಣ, ಬುಧವಾರ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಕುಳಿತಿದ್ದ ಅಧ್ಯಕ್ಷ ಕಾರ್ಯದರ್ಶಿ ಸಿಬ್ಬಂದಿಗಳನ್ನು ಕೂಡಿ ಬೀಗ ಹಾಕಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣೇಗೌಡ ವಿರುದ್ದ ಧಿಕ್ಕಾರ ಕೂಗಿದ ಘಟನೆ ನಡೆಯಿತು ಒಂದು ಗಂಟೆಯ ಕಾಲ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ದಿಗ್ಬಂಧನ ವಿಧಿಸಲಾಗಿತ್ತು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹುಲಿಯೂರುದುರ್ಗ ಪಿ.ಎಸ್.ಐ ಪ್ರಶಾಂತ್ ಸದಸ್ಯರ ರೈತರ ಮನವೊಲಿಸಿ ಕಚೇರಿಗೆ ಹಾಕಲಾಗಿದ್ದ ಬೀಗ ತೆಗೆಸಿದರು,
ಬಳಿಕ ಮಾತನಾಡಿದ ಅವರು ಸಂಬ0ಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವವಂತೆ ಸದಸ್ಯರಿಗೆ ಸೂಚಿಸಿದರು ಸ್ಥಳಕ್ಕೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಹಾಗೂ ಪಿಡಿಒ ಬರುವಂತೆ ಒತ್ತಾಯಿಸಿದರು ಸಹ ಸ್ಥಳಕ್ಕೆ ಯಾವುದೆ ಅಧಿಕಾರಿಗಳು ಬರಲಿಲ್ಲ ಈ ವೇಳೆ ಸದಸ್ಯ ಹುಲಿಕಟ್ಟೆ ರವಿ ಮಾತನಾಡಿ ಪಿಡಿಒ ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ಹದಿನೈದು ದಿನ ಕಳೆದಿದೆ ಇಲ್ಲಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳದ್ದೆ ದರ್ಬಾರ್ ಆಗಿದೆ ನರೇಗಾ ಯೋಜನೆಯಡಿ ಕಾಮಗಾರಿ ಮಾಡದೆ ಲಕ್ಷಾಂತರ ರೂಪಾಯಿ ಬಿಲ್ ಮಾಡಲಾಗಿದೆ ಅಧ್ಯಕ್ಷ ಕೃಷ್ಣೇಗೌಡ ಹಾಗೂ ಪಿಡಿಒ ನಾರಯಣ್ ಸೇರಿ ಗ್ರಾಮ ಪಂಚಾಯಿತಿಯ ಹದಿನೈದನೆ ಹಣಕಾಸು ಮತ್ತು ವರ್ಗ ಒಂದರ ಹಣವನ್ನು ದುರುಪಯೋಗ ಮಾಡಿದ್ದಾರೆ ಶಾಸಕರು ಹೇಳಿದರು ಸಹ ಬಿಲ್ ಮಾಡಲಿಲ್ಲ ಕ್ಷೇತ್ರದ ಶಾಸಕರಿಗೆ ಗೌರವ ಕೊಡದ ಅಧ್ಯಕ್ಷನಿಂದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜನ ಸಾಮಾನ್ಯರ ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಅಭಿವೃದ್ದಿ ಹೆಸರಲ್ಲಿ ಅನುದಾನ ದುರುಪಯೋಗ ಮಾಡಲಾಗುತ್ತಿದೆ, ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೆ ರೀತಿಯ ಪ್ರಯೋಜನ ಇಲ್ಲವಾಗಿದೆ,ಇದುವರೆಗೆ ಸುಮಾರು ೫೬ ಲಕ್ಷ ರೂಪಾಯಿ ಸಾಮಗ್ರಿ ವೇಚ್ಚ ಬಿಡುಗಡೆಯಾಗಬೇಕು ಇದರಲ್ಲಿ ಅಧ್ಯಕ್ಷ ಕೃಷ್ಣೇಗೌಡ ನನಗೆ ೧೮ ಲಕ್ಷ ರೂಪಾಯಿ ಮೊದಲು ಬಿಲ್ ಮಾಡುವವರೆಗೆ ಬೇರೆ ಯಾರಿಗೂ ಬಿಲ್ ಮಾಡದಂತೆ ಪಿಡಿಒಗೆ ತಾಕಿತು ಮಾಡಿದ್ದಾನೆ,ಕಳೆದ ಹದಿನೈದು ದಿನಗಳ ಹಿಂದಷ್ಟೆ ಗ್ರಾಮ ಪಂಚಾಯ್ತಿ ಹಳೆಯ ಕಚೇರಿಯಲ್ಲಿದ್ದ ವಸ್ತುಗಳನ್ನು ಸದಸ್ಯರ ಗಮನಕ್ಕೆ ತರದೆ ಮಾರಾಟ ಮಾಡಲಾಗಿದೆ,ಒಂದು ಬೀದಿ ದೀಪಕ್ಕೆ ೩೫೦ ರೂಪಾಯಿ ಬಿಲ್ ಮಾಡಲಾಗಿದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಕೋಳವೆ ಬಾವಿಗಳಿಗೆ ಮೋಟರ್ ಪಂಪ್ ಬಿಡುವಲ್ಲು ಭ್ರಷ್ಟಾಚಾರ ನಡೆದಿದೆ ಅಧ್ಯಕ್ಷ ಹಾಗೂ ಪಿಡಿಒ ನಡವಳಿಕೆಯ ಕಾರಣದಿಂದ ಸದಸ್ಯರು ಸಾರ್ವಜನಿಕರು ಹೈರಾಣಾಗಿದ್ದು ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಸದ್ಯದಲ್ಲೇ ಲೋಕಾಯುಕ್ತಕ್ಕೆ ದೂರು ನೀಡಿಲಾಗುವುದು ಎಂದರು
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ
ವೀರೇಶ್.ಸಾವಂದಿ.ರವಿ.ಭಾಗ್ಯ.ಶಿವಣ್ಣ.ಲೋಕೇಶ್.ಚಿಕ್ಕೆಗೌಡ. ರೈತರಾದ ನಿಂಗರಾಜು. ನರಸಿಂಹಯ್ಯ. ಕೃಷ್ಣೇಗೌಡ. ಸ್ವಾಮಿ.ನಟರಾಜು. ನಂಜುAಡಯ್ಯ. ನಾಗರಾಜು.ನವಿನ್ ಕುಮಾರ್.ಸುನಿಲ್ ಕುಮಾರ್ ಉಪಸ್ಥಿತರಿದ್ದರು



