ತುಮಕೂರು: ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು,.ಮೊದಲಿಗೆ ಕಾಲೇಜಿನ ಆವರಣದಲ್ಲಿ ಧ್ವಜಾರೋಹಣ ಹಾಗೂ ನಾಡಗೀತೆ ಹಾಡುವುದರ ಮೂಲಕ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಹಂಪಿ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಖ್ಯಾತ ಕಥೆಗಾರರಾದ ಡಾ. ಕರಿಗೌಡ ಬೀಚನಹಳ್ಳಿ ಹಾಗೂ ವೇದಿಕೆಯ ಗಣ್ಯರಿಂದ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು,
ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಕವಿಗಳು ಹಾಗೂ ಮುಖ್ಯ ಅತಿಥಿಗಳನ್ನು ಪ್ರೊ.ರಮೇಶ್ ಮಣ್ಣೇ ರವರು ಪ್ರಾಸ್ತಾವಿಕ ನುಡಿಗಳ ಮೂಲಕ ಅವರನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಡಾ.ಕರಿಗೌಡ ಬೀಚನಹಳ್ಳಿ ಇವರು ಕನ್ನಡ ಭಾಷಾ ಚಳುವಳಿ , ಕನ್ನಡದ ಏಕೀಕರಣ, ಹಾಗೂ ರಾಜ್ಯೋತ್ಸವದ ಹಿನ್ನೆಲೆ ,ಪ್ರಾಮುಖ್ಯತೆ ,ಗ್ರಾಮೀಣ ಬದುಕು ,ಗ್ರಾಮೀಣ ಮಕ್ಕಳಿಂದ ಕನ್ನಡ ಉಳಿದಿದೆ ,”ಕನ್ನಡ ಜೀವಂತ ಭಾಷೆ “ಎಂದು ಭಾಷೆಯ ಒಲವನ್ನು ಹಾಗೂ ಅಖಂಡ ಕರ್ನಾಟಕವನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಅರ್ಥಪೂರ್ಣವಾಗಿ ಹೇಳಿದರು .
ತದನಂತರ ನಾನು ದಿಗ್ಗಜ ಅಲ್ಲ ಕೇವಲ ಗಜ ಎಂಬ ಮಾತು ಹೇಳಿ ಆ ಗಜಗಂಭೀರ್ಯದೊ0ದಿಗೆ ಲಘು ಹಾಸ್ಯದ ಮೂಲಕ ಭಾಷೆಗೆ ಇರುವ ಶಕ್ತಿ ,ಸಾಹಿತ್ಯ ಸೃಷ್ಟಿ ,ಭಾಷೆ ಜೊತೆಗೆ ಭಾಷೆಗಳ ಪ್ರಯೋಗ ಶಾಲೆ ನಮ್ಮ ಭಾರತ ಎಂಬುದರ ಕುರಿತಂತೆ ಡಾ.ಅಗ್ರಹಾರ ಕೃಷ್ಣಮೂರ್ತಿ ಲೇಖಕರು ,ನಿವೃತ್ತ ಕಾರ್ಯದರ್ಶಿ, ಕೇಂದ್ರ ಸಾಹಿತ್ಯ ಅಕಾಡೆಮಿ ,ದೆಹಲಿ ಇವರು ವಿಸ್ತಾರವಾಗಿ ಉಣಬಡಿಸಿದರು .ಕನ್ನಡ ಅಭಿಮಾನವನ್ನು ಮಕ್ಕಳು ಹೇಗೆ ಬೆಳೆಸಿಕೊಳ್ಳುವುದು ಎಂಬುದರ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತಾ ಪಿ ರವರು ತಿಳಿಸಿದರು
ಇದರೊಂದಿಗೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೃತ್ಯ, ಹಾಡು ಹಾಗೂ ನಾಟಕದ ಮೂಲಕ ವಿದ್ಯಾರ್ಥಿಗಳನ್ನು ರಚಿಸಲಾಯಿತು ಜೊತೆಗೆ ವಿದ್ಯಾರ್ಥಿಗಳಿಗಾಗಿ ಗ್ರಾಮೀಣ ಆಟಗಳಾದ ಹಸು-ಹುಲಿ ಆಟ ,ಲಗೋರಿ ,ಚಿನ್ನಿ-ದಾಂಡು ,ಕಣ್ಣಿಗೆ ಬಟ್ಟೆ ಕಟ್ಟಿ ಹುಡುಕುವ ಆಟ ,ರಾಮ ಸೋಮ ಭೀಮ ,ಮಡಿಕೆ ಹೊಡೆಯುವುದು ಆಟಗಳನ್ನು ಏರ್ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ.ಕರಿಗೌಡ ಬೀಚನಹಳ್ಳಿ ಖ್ಯಾತ ಕಥೆಗಾರರು ಹಾಗೂ ವಿಶ್ರಾಂತ ಪ್ರಾಧ್ಯಾಪಕರು ,ಕನ್ನಡ ವಿಶ್ವವಿದ್ಯಾನಿಲಯ ಹಂಪಿ , ಲೇಖಕರು ,ನಿವೃತ್ತ ಕಾರ್ಯದರ್ಶಿ ,ಕೇಂದ್ರ ಸಾಹಿತ್ಯ ಅಕಾಡೆಮಿ ,ದೆಹಲಿ ಡಾ. ಅಗ್ರಹಾರ ಕೃಷ್ಣಮೂರ್ತಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ.ಹೇಮಲತಾ, ಸಾಂಸ್ಕೃತಿಕ ಕಾರ್ಯದರ್ಶಿಗಳು ,ಮುಖ್ಯಸ್ಥರು ಕನ್ನಡ ವಿಭಾಗ ಪ್ರೊ. ರಮೇಶ್ ಮಣ್ಣೆ , ಹಾಗೂ ಎಲ್ಲ ವಿಭಾಗದ ಮುಖ್ಯಸ್ಥರು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು ,ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

(Visited 1 times, 1 visits today)