ಪಾವಗಡ:ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಆಲದ ಮರದಂತೆ ರಾಜ್ಯದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದು ಇಂದು ನಮ್ಮನ್ನು ಅಗಲಿರುವುದು ದುಃಖದ ಸಂಗತಿ ಎಂದು ಪಾವಗಡ ಬಿ.ಇ.ಓ. ರೇಣುಕಮ್ಮ ವಿಷಾದ ವ್ಯಕ್ತಪಡಿಸಿದರು.
ಶನಿವಾರ ಶಮಿ ವೃಕ್ಷ ಅಭಿವೃದ್ಧಿ ಸಮಿತಿ ವತಿಯಿಂದ ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಪಾಠಶಾಲಾ ಮೈದಾನದಲ್ಲಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದಂದು ಕೇಕ್ ಕಟ್ ಮಾಡುವ ಬದಲು ಸಸಿಗಳನ್ನು ನೆಟ್ಟು ಪೋಷಿಸಿ, ಬೆಳೆಸಿದರೆ, ಮುಂದೊAದು ದಿನ ಆ ಸಸಿಗಳು ದೊಡ್ಡ ಹೆಮ್ಮೆರವಾಗಿ ಬೆಳೆದು ಪರಿಸರವನ್ನ ಸಂರಕ್ಷಿಸಿ ದಂತಾಗುತ್ತದೆ ಎಂದರು.
ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಜಿ.ವಿ .ವೆಂಕಟೇಶ್ ಮಾತನಾಡಿ, ಸಾಲುಮರದ ತಿಮ್ಮಕ್ಕ ಮರಣದಿಂದ ರಾಜ್ಯಕ್ಕೆ ದೊಡ್ಡ ಅಘಾತ ವಾಗಿದೆ, ಮಾಗಡಿ ಯಿಂದ ಕುದೂರು ರಸ್ತೆಯ ಪಕ್ಕದಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ವರೆಗೂ ೪೦೦ ಆಲದ ಮರಗಳನ್ನ ಕಾಲ್ನಡಿಗೆಯಲ್ಲಿ ಸಾಗಿ ನೀರನ್ನು ಹಾಕಿ ಬೆಳೆಸಿದ ಸಾಲುಮರದ ತಿಮ್ಮಕ್ಕ, ವೃಕ್ಷ ಮಾತೆ ಯಾಗಿದ್ದಾಳೆ, ಪದ್ಮಶ್ರೀ ಪ್ರಶಸ್ತಿಯು ಸೇರಿದಂತೆ ಹದಿನಾರು ವಿವಿಧ ಪ್ರಶಸ್ತಿಗಳನ್ನು ಮುಡಿ ಗೇರಿಸಿಕೊಂಡು ಕರ್ನಾಟಕ ರಾಜ್ಯದ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಕೊಂಡಾಡಿದರು.
ಶಮಿ ವೃಕ್ಷ ಅಭಿವೃದ್ಧಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸತ್ಯಲೋಕೇಶ್ ಮಾತನಾಡಿ, ಕಳೆದ ಎಂಟು ವರ್ಷಗಳ ಹಿಂದೆ ಪುರಸಭಾ ಮಾಜಿ ಸದಸ್ಯರಾದ ಮನು ಮಹೇಶ್ ,ಮತ್ತು ರಿಜ್ವಾನ್ ಉಲ್ಲಾ ಅವರು ದಸರಾ ಹಬ್ಬದಂದು ಕಾರ್ಯಕ್ರಮ ನಿಮಿತ್ತ ಕರೆಸಿದ್ದರು, ಅಂದು ಇದೇ ಮೈದಾನದಲ್ಲಿ ಎರಡು ಗಿಡಗಳನ್ನು ನಡೆಸಿದ್ದರು ಎಂದು ತಿಳಿಸಿದರು,
ಮುಖಂಡ ರಿಜ್ವಾನ್ ಉಲ್ಲಾ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಆರ್. ಟಿ. ಖಾನ್ ಮಾತನಾಡಿದರು, ಈ ವೇಳೆ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಗೋರಸ್ ಮಾವು ಹನುಮಂತ ರಾಯಪ್ಪ, ಕಸ್ತೂರಿ ಬಾ ಗಾಂಧಿ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಮ್ಮ,ಆದರ್ಶ ಶಾಲೆಯ ಎಸ್ .ಡಿ .ಎಂ. ಸಿ ಅಧ್ಯಕ್ಷ ಪ್ರಕಾಶ ನಾಯಕ, ಐ. ಆರ್. ಟಿ ಸಿ. ಸಂಯೋಜಕಿ. ವಿಶಾಲಾಕ್ಷಿ, ಪತ್ರಕರ್ತರಾದ ಮೈಕಲ್ ನಾಡಾರ್, ಚಂದ್ರಪ್ಪ, ಸಾಯಿ ಹನುಮಂತರಾಯಪ್ಪ, ಕೌಶಿಕ್, ಮತ್ತು ಆದರ್ಶ ಶಾಲೆಯ ಶಿಕ್ಷಕರು ಹಾಗೂ ಕಸ್ತೂರಿ ಬಾ ಗಾಂಧಿ ಶಾಲೆಯ ಶಿಕ್ಷಕರು ಹಾಗೂ ಬಿ. ಆರ್. ಸಿ .ಕಚೇರಿಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

(Visited 1 times, 1 visits today)