
ತುಮಕೂರು: ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಯು ಹಾಗೂ ಮಿತ್ರ ಪಕ್ಷಗಳು ಭಾರಿ ವಿಜಯದತ್ತ ದಾಪುಗಾಲು ಹಾಕಿರುವುದಕ್ಕೆ ತುಮಕೂರಿನ ವಿವೇಕಾನಂದ ರಸ್ತೆಯ ವರ್ತಕರ ಸಂಘದ ವತಿಯಿಂದ ಸಂಭ್ರಮಾಚರಣೆ ಯನ್ನು ಸಿಹಿ ಅಂಚಿ ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಲಾಯಿತು.
ವಿವೇಕಾನಂದ ರಸ್ತೆಯ ವರ್ತಕರು ಸಾರ್ವಜನಿಕರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಶಿವಶಕ್ತಿ ಎಲೆಕ್ಟ್ರಿಕಲ್ ಮಾಲೀಕರಾದ ಬಿ.ಎಸ್ ಪಣಿಂದ್ರ ಮಾತನಾಡಿ ಬಿಹಾರದಲ್ಲಿ ಎನ್ ಡಿ ಎ ಬಾರಿ ಮತ ಗಳಿಕೆ ಮಾಡಿ ಮೂರನೇ ಎರಡರಷ್ಟು ಶಾಸಕರನ್ನು ಆಯ್ಕೆ ಮಾಡಿದ ಮತದಾರರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಕೆ.ಪಿ ಮಹೇಶ್ ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮತ್ತು ಮಿತ್ರ ಪಕ್ಷಗಳ ಅಭೂತಪೂರ್ವ ಬಹುಮತಕ್ಕೆ ಅಭಿನಂದಿಸಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯ ಮಂತ್ರಿ ನಿತೀಶ್ ಕುಮಾರ್ ರವರುಗಳ ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಜನಾಹಿತ ಕಾರ್ಯಕ್ರಮಗಳನ್ನು ಮೆಚ್ಚಿ ಮತ ನೀಡಿದ ಬಿಹಾರದ ಮತದಾರರು ಅದರಲ್ಲೂ ಮಹಿಳೆಯರು ಯುವ ಮತದಾರರಿಗೆ ಕೃತಜ್ಞತೆ ಅರ್ಪಿಸಿದರು.
ಬಿಜೆಪಿ ಮುಖಂಡರು ಹಾಗೂ ಅಂಬೇಡ್ಕರ್ ಪ್ರಚಾರ ಸಮಿತಿಯ ಒಬಿಸಿ ಘಟಕದ ಜಿಲ್ಲಾಧ್ಯಕ್ಷರಾದ ಎಸ್ ರಾಮಚಂದ್ರರಾವ್ ಮಾತನಾಡಿ ಬಿಹಾರದಲ್ಲಿ ನರೇಂದ್ರ ಮೋದಿ ಹಾಗೂ ನಿತೇಶ್ ಕುಮಾರ್ ರವರ ಡಬಲ್ ಇಂಜಿನ್ ಸರ್ಕಾರವು ಬಾರಿ ಅಭಿವೃದ್ಧಿಯತ್ತ ಬಿಹಾರ ರಾಜ್ಯವನ್ನು ತೆಗೆದುಕೊಂಡು ಹೋಗಿದ್ದರು, ಇದರ ಹಿನ್ನೆಲೆಯಲ್ಲಿ ಬಿಹಾರ ಮತದಾರರು ಬಾರಿ ಜನಮನ್ನಣೆ ನೀಡಿದ್ದಾರೆ ಎಂದರು. ಹಾಗೂ ಈ ವಿಜಯಕ್ಕೆ ಕಾರಣಿಭೂತರಾದ ಬಿಹಾರ ಜನತೆಯ ಎಲ್ಲಾ ಮತದಾರರಿಗೂ, ಏನ್ ಡಿ ಎ ಯ ಎಲ್ಲಾ ಕಾರ್ಯಕರ್ತರುಗಳಿಗೂ, ಎಲ್ಲಾ ನಾಯಕರುಗಳಿಗೂ ಹಾಗೂ ವಿಜಯಶಾಲಿಯಾದ ಎಲ್ಲಾ ಶಾಸಕರುಗಳಿಗೂ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ವಕ್ ಬೋರ್ಡಿನ ಉಪಾಧ್ಯಕ್ಷರಾದ ಶಬ್ಬೀರ್ ಅಹ್ಮದ್, ಬಿಜೆಪಿ ಮುಖಂಡರಾದ ರಾಜೀವ್ ಕೆ, ನವೀನ್, ಜಿತೇಂದ್ರ, ರಮೇಶ್, ಶೈಲೇಶ್, ಆರಾಧ್ಯ, ಪ್ರಶಾಂತ್, ಮಧುಕರ್, ಸಂಜಯ್, ದೇವಿ ಸಿಂಗ್, ಯದುನಂದನ್, ಮಹೇಶ್, ನಿರ್ಮಲ್ ಕುಮಾರ್, ಸಂತೋಷ್ ( ಚಮ್ಮಿ), ತುಕರಾಮ್, ರಾಮಣ್ಣ, ಕಿಶನ್, ಮಹೇಂದರ್, ಪ್ರಸಾದ್, ಮುಂತಾದವರು ಉಪಸ್ಥಿತರಿದ್ದರು.



