ಹುಳಿಯಾರು: ತುಮಕೂರು ಜಿಲ್ಲೆ ಚಿ.ನಾ.ಹಳ್ಳಿ ತಾಲ್ಲೂಕಿನ ಬರಗೂರು-ಬೆಳಗುಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ೨೦೧೮-೧೯ ನೇ ಸಾಲಿನಲ್ಲಿ ವಾಣಿಜ್ಯ ವಿಭಾಗ ಸಂಯೋಜನೆ ಮಂಜೂರಾಗಿದ್ದರೂ ಸಹ ಇಲ್ಲಿಯವರೆವಿಗೆ ಉಪನ್ಯಾಸಕರ ಹುದ್ದೆ ಮಂಜೂರು ಮಾಡದೆ ಕಲಿಕೆಗೆ ತೊಡಕಾಗಿದ್ದು ತಕ್ಷಣ ಹುದ್ದೆಯನ್ನು ಮಂಜೂರು ಮಾಡಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಈ ಸಂಬ0ಧ ಪತ್ರಿಕಾ ಹೇಳಿಕೆ ನೀಡಿರುವ ಪೋಷಕರು ವಾಣಿಜ್ಯ ವಿಭಾಗ ಆರಂಭವಾದ ದಿನದಿಂದಲೂ ವಾಣಿಜ್ಯ ಉಪನ್ಯಾಸಕರ ಹುದ್ದೆ ಮಂಜೂರಾಗಿರುವುದಿಲ್ಲ. ಆದರೂ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳಿಗೆ ತೊಂದರೆಯಾಗದ0ತೆ ವಾಣಿಜ್ಯ  ವಿಷಯಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆದರೆ ಇವರಿಗೆ ಸಮಯಕ್ಕೆ ಸರಿಯಾಗಿ ಗೌರವಧನ ಬಿಡುಗಡೆಯಾಗದೆ ತೊಂದರೆಯಾಗುತ್ತಿದ್ದರೂ ವಿದ್ಯಾರ್ಥಿಗಳಿಗೆ ತೊಂದರೆ ಮಾಡದೆ ಉಪನ್ಯಾಸ ನೀಡುತ್ತಿದ್ದಾರೆ.
ಪರಿಣಾಮ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಳೆದ ಐದು ವರ್ಷಗಳಿಂದ ಶೇ.೧೦೦ ಫಲಿತಾಂಶ ಬರುತ್ತಿದೆ. ಫಲಿತಾಂಶದ ಜೊತೆಗೆ ಉತ್ತಮ ಅಂಕಗಳನ್ನು ಪಡೆಯುವ ಹಾಗೂ ಮತ್ತೊಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆದು ಗ್ರಾಮೀಣ ಪ್ರದೇಶದಲ್ಲಿನ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಉಳಿಯುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ವಾಣಿಜ್ಯ ಉಪನ್ಯಾಸಕರ ಹುದ್ದೆಯನ್ನು ಮಂಜೂರು ಮಾಡುವ ಅಗತ್ಯವಿದೆ. ವಾಣಿಜ್ಯ ವಿಭಾಗ ಸಂಯೊಜನೆ ಮಂಜೂರಾಗಿ ಸುಮಾರು ಏಳೆಂಟು ವರ್ಷ ಕಳೆದರೂ ಸಹ ಹುದ್ದೆ ಮಂಜೂರು ಮಾಡದೇ ಇರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಯಾಗುತ್ತಿದೆ. ಸರ್ಕಾರ ಇನ್ನಾದರೂ ಮನಗಂಡು ತಕ್ಷಣ ಹುದ್ದೆ ಮಂಜೂರು ಮಾಡುವಂತೆ ಪೋಷಕರು ಒತ್ತಾಯಿಸಿದ್ದಾರೆ.

(Visited 1 times, 1 visits today)