
ಶಿರಾ: ಗ್ರಾಮಸ್ವರಾಜ್ ಕನಸು ಕೈಗೂಡಬೇಕೆಂದರೆ, ಗ್ರಾಮ ಪಂಚಾ ಯಿತಿ ಹಾಗೂ ಸ್ಥಳೀಯ ಆಡಳಿತ ಸ್ವ ಕಾರ್ಯನಿರ್ವ ಹಿಸುವಂ ತಾಗಬೇಕು. ಶಿರಾ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಮಾದರಿಯಾದ ಗ್ರಾಮ ಪಂಚಾಯಿತಿ ಕಟ್ಟಡಗಳು ಅತ್ಯಂತ ಗುಣ ಮಟ್ಟದಲ್ಲಿ ನಿರ್ಮಾಣವಾಗುತ್ತಿವೆ. ಇದು ಗ್ರಾಮ ಸ್ವರಾಜ್ ಯಶಸ್ವಿಯಾಗಲು ಉತ್ತಮ ಕಟ್ಟಡ ಅಗತ್ಯ ಎಂದು ವಿಧಾನ ಪರಿಷತ್ ಶಾಸಕ ಚಿದಾನಂದ ಎಂ ಗೌಡ ತಿಳಿಸಿದರು.
ಅವರು ಶಿರಾ ತಾಲೂಕು ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸ್ಥಳೀಯ ಸಂಪನ್ಮೂಲಕ್ಕೆ ಹೆಚ್ಚಿಗೆ ಆದ್ಯತೆ ನೀಡಿ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ನೂತನವಾಗಿ ಉದ್ಘಾಟನೆಯಾಗಿರುವ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಗೆ ಮೂಲಭೂತ ಸೌಲಭ್ಯಗಳಿಗೆ ೫ ಲಕ್ಷ ರೂ. ಅನುದಾನ ನೀಡುತ್ತೇನೆ. ಇದನ್ನು ಮೂಲಭೂತ ಸೌಲಭ್ಯ ಮಾಡಲು ಬಳಸಿಕೊಳ್ಳಿ ಎಂದರು.
ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಅವರು ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಗ್ರಾಮ ಪಂಚಾಯಿತಿಯದ್ದು ಆಗಿದ್ದರೂ ಗ್ರಾಮಸ್ಥರು ಸಣ್ಣ ಪುಟ್ಟ ಕೆಲಸಗಳಿಗೆ ಕೈಜೋಡಿಸಬೇಕು, ಆಗ ಮಾತ್ರ ಪಂಚಾಯಿತಿ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಮಾತನಾಡಿ ಕನಸುಗಳನ್ನು ನಾವು ಬಿತ್ತಬಹುದು ಆದರೆ ಅಲ್ಲಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯಿಂದ ಮಾತ್ರ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯ ಎಂದರು. ಶಿರಾ ತಾಲೂಕಿನ ಅತ್ಯಂತ ಹಲವು ಶಿಥಿಲಗೊಂಡ ಗೊಂಡ ಗ್ರಾಮ ಪಂಚಾಯತಿಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವ ಕಾರ್ಯಗಳಿಗೆ ನಮ್ಮ ಶಾಸಕರು ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ತಮ್ಮ ಅನುದಾನದಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ರೂಪಶ್ರೀ ವಹಿಸಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೆಆರ್ ಲೋಕೇಶ್, ಸದಸ್ಯರಾದ ಪಿ ಶಾಂತರಾಜು, ಕೆ ಆರ್ ಅರುಣಕುಮಾರ, ಕೆ ಎನ್ ಉಮೇಶ್ ನಾಗರಾಜು ಕಾವೇರಿ ಬೇಟೆ ಗೌಡ ಪಿಎನ್ ಸರೋಜಾ ಉಮೇಶ್ ಜಿ ಈ, ಪಿಡಿಒ ಮಂಜುನಾಥ್, ನಾಗರಾಜ್, ಕಾರ್ಯದರ್ಶಿ ಟಿ ಹೆಚ್ ಸುನಿತಾ, ಲೆಕ್ಕ ಸಹಾಯಕಿ ಆರ್ ಭಾಗ್ಯಮ್ಮ ಸೇರಿದಂತೆ ಹಲವರು ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಸದಸ್ಯರು ಹಾಗೂ ಪಿಡಿಒಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.



