ತುಮಕೂರು: ನಗರದ ಮರಳೂರಿನ ಎಸ್.ಎಸ್. ಐ.ಟಿ ಹಿಂಭಾಗದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಅವರ ೧೦೮ನೇ ಜನ್ಮಜಯಂತಿ ಕಾರ್ಯಕ್ರಮವನ್ನು ಡಿಸಿಸಿ ಅಧ್ಯಕ್ಷ ಚಂದ್ರ ಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಇಂದಿರಾಗಾ0ಧಿ ಅವರ ಭಾವಚಿತ್ರಕ್ಕೆ ಹಿರಿಯಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸುವ ಮೂಲಕ ಇಂದಿರಾಗಾ0ಧಿ ಯವರ ಆಡಳಿತದ ಕಾಲಾವಧಿಯಲಿ ್ಲತೆಗೆದುಕೊಂಡ ನಿರ್ಧಾರಗಳು, ಅದರಿಂದಜನರಿಗೆಆದ ಅನುಕೂಲಗಳ ಕುರಿತುಗುಣಗಾನ ಮಾಡಿದರು.
ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್ ಮಾತನಾಡಿ,ತಮ್ಮ ಹುಟ್ಟಿನಿಂದ ಜೀವಿತದ ಅವಧಿಯವರೆಗೂ ಭಾರತಕ್ಕಾಗಿ ದುಡಿದು, ಮಡಿದವರು ಇಂದಿರಾಗಾ0ಧಿ ಅವರು ಜಾರಿಗೆ ತಂದ ರೀಬೋ ಹಠಾವೋ,೨೦ ಅಂಶಗಳ ಕಾರ್ಯಕ್ರಮಗಳು ಭಾರತದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರಕಡಿಮೆ ಮಾಡಿ, ದೇಶದ ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿ ಕವಾಗಿ, ಕೈಗಾರಿಕೆಯಲ್ಲಿ ಅಭಿವೃದ್ದಿ ಹೊಂದಲು ಭದ್ರ ಬುನಾದಿಯನ್ನು ಹಾಕಿದರು ಎಂದರು.
ಡಿಸಿಸಿ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿ, ಭಕ್ತರಿಂದ ವಿಶ್ವಗುರು ಎಂದು ಕರೆಯಿಸಿಕೊಳ್ಳುವ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೂ, ವಿರೋಧ ಪಕ್ಷದ ನಾಯಕರಿಂದಲೇ ದುರ್ಗಿಯ ಅವತಾರ ಎಂದು ಕರೆಯಿಸಿಕೊಂಡ ಇಂದಿರಾಗಾ0ದಿ ಅವರ ಆಡಳಿತಕ್ಕೂ ಸಾಕಷ್ಟು ವೆತ್ಯಾಸವಿದೆ. ಅಮೇರಿಕಾದ ಬ್ಲಾಕ್ ಮೇಲ್‌ತಂತ್ರಕ್ಕೆ ಎಂದಿಗೂ ಬಗ್ಗದಇಂದಿರಾ, ಬಾಂಗ್ಲಾ ವಿಭಜನೆ ವೇಳೆ ಅಮೇರಿಕದ ಬೆದರಿಕೆಗೆ ಹೆದರದೆ ಪಾಕಿಸ್ಥಾನದ ವಿರುದ್ದಯುದ್ದ ಮಾಡಿ, ಭಾಂಗ್ಲಾ ಉದಯಕ್ಕೆ ಕಾರಣರಾದರು ಎಂದರು.
ಮುಖAಡರಾದಅಸ್ಲಾ0 ಪಾಷ ಮಾತನಾಡಿ, ದೇಶದಲ್ಲಿ ಬಡತನವನ್ನು ನೀಗಿಸಬೇಕು ಎಂಬ ಕಾರಣಕ್ಕೆ ವಿದೇಶದಿಂದ ಕೆಂಪು ಜೋಳ ತಂದು ನೀಡುವ ಮೂಲಕ ಹಸಿವು ನೀಗಿಸಿದರು ಎಂದರು.
ಮುಖ0ಡರಾದ ವಾಲೆಚಂದ್ರಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ ದರು.
ಕಾರ್ಯಕ್ರಮದಲ್ಲಿ ಹೆಚ್.ಸಿ.ಹನುಮಂತಯ್ಯ, ಕೆಂಪಣ್ಣ, ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷ ಮಹೇಶ್,ಬಿ.ಎಸ್.ದಿನೇಶ್, ಸೇವಾದಳದ ಶಿವಪ್ರಸಾದ್, ಅಮ್ಜಾದ್ ವುಲ್ಲಾ,ಮಹಮದ್ ಮುಜಾಹಿದ್, ದೀಪಕ್, ಮಂಜುನಾಥ್,ಶಿವಾಜಿ, ಮೆಹಬೂಬ್ ಪಾಷ, ಆಟೋರಾಜು, ಮೊಹಮ್ಮದ್ ಜೈದ್ ಮುಬೀನಾಭಾನು, ಸೌಭಾಗ್ಯ, ಸುಜಾತ, ಯಶೋಧ, ಭಾಗ್ಯ, ನಟರಾಜಶೆಟ್ಟರು, ಮುರುಳಿ, ಸುಲ್ತಾನ್, ಆದಿಲ್,  ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

(Visited 1 times, 1 visits today)