
ಹುಳಿಯಾರು: ಹುಳಿಯಾರಿನ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಈ ವೇಳೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿಯಾದ ಮಂಜು ಭಾರ್ಗವಿಯವರು ಮಾತನಾಡುತ್ತ ರಾಷ್ಟ್ರೀಯ ಸೇವಾ ಯೋಜನೆಯು ಸೆ.೨೪ ೧೯೬೯ ರಲ್ಲಿ ಮಹಾ ತ್ಮಗಾಂಧಿ ಜನ್ಮ ಶತಮಾನೋತ್ಸವ ಸ್ಮರಣಾ ರ್ಥವಾಗಿ ಜಾರಿಯಾಗಿ ದೇಶದಾದ್ಯಂತ ಸೇವಾ ಮನೋಭಾವವನ್ನು ಬೆಳೆಸಿ ಆ ಮೂಲಕ ದೇಶ ನಿರ್ಮಾಣ ಮತ್ತು ಸಮಾಜ ಹಿತ ಕಾಯುವ ಒಂದು ಕಲ್ಯಾಣ ಕಾರ್ಯಕ್ರಮವಾಗಿದ್ದು ಯುವ ಮನಸ್ಸಿನಲ್ಲಿ ಸಾವಿರಕ್ಕೂ ಹೆಚ್ಚು ಕ್ರಿಯಾಶೀಲ ಕಾರ್ಯಗಳನ್ನು ಈ ಯೋಜನೆಯ ಮೂಲಕ ಸೇವೆ ಮಾಡಬಹುದಾಗಿದ್ದು ಸಮಾಜದ ಕನಸನ್ನು ನನಸು ಮಾಡಲು ಈ ಯೋಜನೆ ಸಹಾಯಕವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ ವೀರಣ್ಣ ಎಸ್.ಸಿ ರವರು ಈ ಯೋಜನೆ ಯುವ ಮನಸ್ಸುಗಳಲ್ಲಿ ಉತ್ಸಾಹದ ಬುಗ್ಗೆಯನ್ನು ತುಂಬುವ, ನಾಯಕತ್ವದ ಗುಣಗಳನ್ನು ಬೆಳೆಸುವ, ಜಾಗೃತಿ ಮೂಡಿಸುವ ಮುಂದಾಳು, ಈ ಯೋಜನೆ ಯಾಗಿದ್ದು ಬದುಕಿನ ಭಾಗವಾದಾಗ ಮಾತ್ರ ಯೋಜನೆ ಸಾಕಾರವಾಗಬಲ್ಲದು ಎಂದು ನುಡಿದರು.
ಕಾರ್ಯಕ್ರಮಾಧಿಕಾರಿಗಳಾದ ರಮೇಶ್ ಎಸ್ ರವರು ರಾಷ್ಟ್ರೀಯ ಸೇವಾ ಯೋಜನೆ ಅದು ಔಪಚಾರಿಕ ಯೋಜನೆ ಮಾತ್ರವಲ್ಲ ಅದೊಂದು ಜವಬ್ದಾರಿ. ಇಂತಹ ಜವಬ್ದಾರಿ ಶಿಬಿರಗಳಿಗೆ ಮಾತ್ರ ಸೀಮಿತವಾಗಬಾರದು ಶಿಬಿರಾರ್ಥಿಯ ಕಣಕಣದಲ್ಲೂ ಜವಬ್ದಾರಿ ಅಡಗಿರಬೇಕು ಎಂದು ಬಡಿದೆಚ್ಚರಿಸುವ ಕೆಲಸವನ್ನು ಮಾಡಿದರು.
ಮತ್ತೋರ್ವ ಕಾರ್ಯಕ್ರಮಾಧಿಕಾರಿ ರವರು ರಾಷ್ಟ್ರೀಯ ಸೇವಾ ಯೋಜ ನೆಯು ವಿದ್ಯೆಯ ಜೊತೆಗೆ ಸೇವಾ ಪರಿಕಲ್ಪನೆಯು ವಿದ್ಯಾರ್ಥಿಗಳಲ್ಲಿ ಬೆಳೆಯುವ ಹಿತದೃಷ್ಟಿಯಿಂದ ಇದ್ದು ಸೇವಾ ಮನೋಭಾವ ಇದ್ದವರು ಶಾಶ್ವತ ಹೆಸರುಗಳಿಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕ ರಾದ ಡಾ.ಸರಸ್ವತಿ.ಕೆ.ಬಿ. ಶೈಕ್ಷಣಿಕ ಮುಖ್ಯ ಸಲಹೆಗಾರರಾಗಿ ಡಾ.ಸುಷ್ಮಾ.ಎಲ್ ಬಿರಾಧರ್, ಡಾ.ಸಂಗೀತಾ ಪಿ, ಜಯಪ್ರಕಾಶ್, ಕುಮಾರ ಸ್ವಾಮಿ.ಕೆ.ಸಿ. ಚಂದ್ರಹಾಸ್, ಬಿ.ಆರ್. ರಾಜ್ಯಶಾಸ್ತç ಉಪನ್ಯಾಸಕರಾದ ತಿಪ್ಪೇಸ್ವಾಮಿ ಎಂ.ಕೆ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.



