ಚಿಕ್ಕನಾಯಕನಹಳ್ಳಿ: ನಮ್ಮ ದೇಸಿ ಕ್ರೀಡೆಗಳಿಗೆ ಅವಕಾಶಗಳನ್ನು ನೀಡಿ ಅವುಗಳನ್ನು ಉಳಿಸಿ ಬೆಳೆಸುತ್ತಿರುವುದು ನಮ್ಮ ಗ್ರಾಮೀಣ ಭಾಗದಲ್ಲಿ ಅಂತಹ ಕೆಲಸವನ್ನು ಗೋಡೆಕೆರೆಯ ಶ್ರೀಲಾಲ್ಬಹದ್ದೂರ್ಶಾಸ್ತ್ರೀ ಕ್ರೀಡಾ ಸಂಘ ಕಳೆದ ೪೯ ವರ್ಷಗಳಿಂದ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆಯಲ್ಲಿ ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿ ದಿವ್ಯ ಸಾನಿದ್ಯದಲ್ಲಿ ಸೋವವಾರ ರಾತ್ರಿ ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವದ ಅಂಗವಾಗಿ ಶ್ರೀಲಾಲ್ ಬಹದ್ದೂರ್ಶಾಸ್ತ್ರೀ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಜಗೋಸಿರಾ ಕಪ್ನ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡರೆ ನಮ್ಮ ಸಾಧನೆ ಸಾದ್ಯ ಎಂಬುದಕ್ಕೆ ಕಳೆದ ೪೯ ವರ್ಷಗಳಿಂದ ಈ ದೇಸಿ ಕ್ರೀಡೆಯನ್ನು ಏರ್ಪಡಿಸುತ್ತಾ ಈ ಕ್ಷೇತ್ರದ ಇಬ್ಬರು ಗುರುಗಳ ನೇತೃತ್ವದಲ್ಲಿ ನಡೆಯುತ್ತಿದೆ ಈ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಾ ಇಲ್ಲಿಗೆ ೨ ಕೋಟಿ ವೆಚ್ಚವನ್ನು ನೀಡಲಾಗಿದ್ದು ಈ ಸುಕ್ಷೇತ್ರದಲ್ಲಿನ ಮೃತ್ಯುಂಜಯಸ್ವಾಮಿಗಳು ನಿತ್ಯ ದಾಸೋಹವನ್ನು ಮಾಡುತ್ತಾ ಸ್ವತಃ ತಾವೇ ಕಾಯಕವನ್ನು ಮಾಡುತ್ತಾ ಮಾದರಿಯಾಗಿದ್ದಾರೆ. ಇಲ್ಲಿನ ಕಬ್ಬಡಿ ಆಟಗಾರರು ಸರ್ಕಾರಿ ಕೆಲಸಗಳಿಗೆ, ಉನ್ನತ ಹುದ್ದೆಗಳಿಗೆ ಹೋಗಿದ್ದಾರೆ ಎಂದ ಅವರು ಧಾರ್ಮಿಕವಾಗಿ ನಮ್ಮ ಕ್ಷೇತ್ರವನ್ನು ಅಭಿವೃದ್ದಿ ಪಡಿಸುತ್ತಾ ನಮ್ಮ ಐದುಜನ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಾಡುತ್ತಿದ್ದು ಇದೇ ರೀತಿಯಲ್ಲಿ ಮುಂದೆಯು ಕೆಲಸ ಮಾಡುತ್ತೇನೆ ಎಂದ ಅವರು ದೇಸಿ ಕ್ರೀಡೆಗಳಿಗೆ ಒತ್ತು ನೀಡುತ್ತಿದ್ದು ಮುಂದೆಯು ಇದಕ್ಕೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಉಪಾದ್ಯಕ್ಷ ಮುರುಳಿಧರ ಹಾಲಪ್ಪ ಮಾತನಾಡಿ, ೪೯ ವರ್ಷಗಳಿಂದ ಕಬ್ಬಡಿ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿರುವುದು ಸುಲಭವಲ್ಲ ಮುಂದಿನ ವರ್ಷ ೫೦ನೇ ವರ್ಷದ ಈ ಕಬ್ಬಡಿ ಕ್ರೀಡೆಗೆ ಜಿಲ್ಲಾ, ತಾಲ್ಲೂಕು ಆಡಳಿತಗಳು ಇದಕ್ಕೆ ಸಹಕಾರ ನೀಡಲಿ ಈ ಗ್ರಾಮೀಣ ಕ್ರೀಡೆಯು ಇನ್ನು ಹೆಚ್ಚು ಜನಪ್ರಿಯವಾಗಬೇಕಾಗಿದ್ದು ಇದಕ್ಕೆ ನಮ್ಮ ಸಹಕಾರ ಇದ್ದು ಇಲ್ಲಿ ಶಿಸ್ತು, ಸಂಯಮದಿ0ದ ಉತ್ತಮವಾದ ಆರೋಗ್ಯದಾಯಕ ಕ್ರೀಡೆ ನಡೆಸಿ ಸೌಜನ್ಯದಿಂದ ವರ್ತಿಸುವ ಮೂಲಕ ಈ ಕ್ಷೇತ್ರ ಇನ್ನು ಒಳ್ಳೆಯ ಹೆಸರನ್ನು ತರುವಂತಹ ಕೆಲಸಗಳನ್ನು ಮಾಡಿ ಎಂದರು.
ಚಲನಚಿತ್ರ ಯುವ ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ತುಮಕೂರು ಜಿಲ್ಲೆಗೂ ನಮ್ಮ ಕುಟುಂಬಕ್ಕು ಉತ್ತಮ ಬಾಂದವ್ಯ ಇದೆ ನಮ್ಮ ತಂದೆಯವರಿಗೆ ಈ ಜಿಲ್ಲೆಯಲ್ಲಿ ಒಳ್ಳೆಯ ಅಭಿಮಾನ ತೋರಿಸಿದಂತೆ ನನಗೂ ನೀಡಿ ಮುಂದಿನ ದಿನಗಳಲ್ಲಿ ನಮ್ಮ ದೇಸಿ ಕ್ರೀಡೆಯನ್ನೇ ಅದಾರವಾಗಿಟ್ಟುಕೊಂಡು ತೆಗೆದಿರುವ ಕರಾವಳಿ ಚಿತ್ರದಲ್ಲಿ ಕಂಬಳ ಕ್ರೀಡೆಯನ್ನು ತೋರಿಸಿದ್ದು ಈ ಕಬ್ಬಡಿ ಪಂದ್ಯವಳಿಯ0ತೆ ಅದು ಮಲೆನಾಡಿನ ಕ್ರೀಡೆಯಾಗಿದೆ. ಈ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮ ಕರ್ತವ್ಯ ಮುಂದಿನ ೫೦ನೇ ವರ್ಷದ ಈ ಆಚರಣೆಗೆ ನಾನು ಬರುತ್ತೆನೆ ಎಂದ ಅವರು ಕ್ರೀಡೆಗೆ ಬೆನ್ನ ಹಿಂದೆ ಪ್ರೋತ್ಸಾಹ ನೀಡುವುದು ಮುಖ್ಯ ಕ್ರೀಡಾಪಟುಗಳಿಗೆ ಆ ರೀತಿಯಲ್ಲಿ ಹುರುಪು ನೀಡಿದರೆ ಇನ್ನು ಸಾಧನೆ ತೊರಿಸುತ್ತಾರೆ. ಅದೇ ರೀತಿ ಈ ಚಿಕ್ಕನಾಯಕನಹಳ್ಳಿಯ ಭಾಗದ ತೆಂಗಿಗೆ ರಾಜ್ಯದಲ್ಲೇ ಹೆಚ್ಚು ಮಹತ್ವವಿದೆ ಇಲ್ಲಿರುವ ನೀವು ಕಲಾಭಿಮಾನಿಗಳು ಕಬ್ಬಡಿಯನ್ನು ಪ್ರೋತ್ಸಾಹ ನೀಡಿದಂತೆ ಕಂಬಳದ ಬಗ್ಗೆ ಮಾಡಿರುವಂತಹ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ ಎಂದರು.
ಈ ಸಂದರ್ಭದಲ್ಲಿ ಬೆಲೂರಿನ ಶಾಸಕ ಸುರೇಶ್, ಪಿ.ಎಲ್.ಡಿ ಬ್ಯಾಂಕ್ನ ಅಧ್ಯಕ್ಷ ಹೆಚ್.ಆರ್.ಶಶಿಧರ್, ಗುಬ್ಬಿಯ ಬಿ.ಜೆ.ಪಿ ಮುಖಂಡ ದಿಲೀಪ್ ಕುಮಾರ್, ಬಿಜೆಪಿ ವಕ್ತಾರ ಚಂದ್ರಶೇಖರ್, ಕಾಂಗ್ರೇಸ್ ಮುಖಂಡ ನಿಖಿಲ್ ರಾಜಣ್ಣ, ಸಾಗರನಹಳ್ಳಿ ನಟರಾಜ್, ಮಧುಸೂದನ್, ಪ್ರದೀಪ್, ತಹಸೀಲ್ದಾರ್ ಪುರಂದರ್ ಸೇರಿದಂತೆ ಇತರರು ಭಾಗವಹಿಸಿದ್ದರು.

(Visited 1 times, 1 visits today)