ತುಮಕೂರು: ಬಂಜಾರ ಸಮಾಜದ ಹಲವು ಆಚಾರ-ವಿಚಾರಗಳು ನಶಿಸಿ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇವುಗಳನ್ನು ಮುಂದಿನ ತಲೆಮಾರಿಗೆ ಕಾಪಾಡಿ ಉಳಿಸಲೆಂದು ನಿಗಮವು ಒಂದು ಕೋಟಿ ಇಪ್ಪತ್ತು ಲಕ್ಷ ರೂ. ವೆಚ್ಚ ಮಾಡಿ ರಾಜ್ಯದಾದ್ಯಂತ ಕಲಾ ಮೇಳಗಳನ್ನು ಆಯೋಜಿಸುತ್ತಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷೆನ್.ಜಯದೇವ್ ನಾಯಕ್ ತಿಳಿಸಿದ್ದಾರೆ
ನಗರದ ಬಂಜಾರ ಭವನದಲ್ಲಿ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ವಲಯ ಕಚೇರಿಯ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಲಾ ಮೇಳ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಯುವಕರು ಈ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು
ಕಾರ್ಯಕ್ರಮದಲ್ಲಿ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಡಿ. ನಾರಾಯಣ ನಾಯ್ಕ್, ಪ್ರಧಾನ ಕಾರ್ಯದರ್ಶಿ ಶಂಕರ್ ಬಿ, ತುಮಕೂರು ವಲಯ ಅಧಿಕಾರಿ ಸಂಗಮೇಶ, ಶ್ರೀ ಸೇವಾಲಾಲ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಬೇಂದ್ರ ನಾಯ್ಕ್, ನಿರ್ದೇಶಕರು ದೇಶ್ಯಾ ನಾಯ್ಕ್, ಸಕ್ರ ನಾಯ್ಕ್, ಮಾಜಿ ಜಿ.ಪಂ. ಸದಸ್ಯರು ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಇಂದಿರಾ ದೇನಾ ನಾಯ್ಕ್, ಮಹಿಳಾ ಸಂಘದ ಅಧ್ಯಕ್ಷರು ಶಾಂತ ಜಯರಾಮ್,
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರು ಚಂದ್ರ ನಾಯಕ್, ಜಿಲ್ಲಾ ಕಾರ್ಯಾಧ್ಯಕ್ಷರು ಕುಮಾರ್ ನಾಯ್ಕ್ (ಬಾಂಬೆ),ಕರ್ನಾಟಕ ಬಂಜಾರ ಜಾಗೃತಿ ದಳಸಂಸ್ಥಾಪಕ ರಾಜ್ಯದಕ್ಷರಾದ ತಿಪ್ಪ ಸರ್ ನಾಯ್ಕ್, ಮುಖಂಡರ ಜನಾಂಗದ ಬಸವರಾಜ್ ನಾಯ್ಕ್, ಗುಬ್ಬಿ ತುಳಸಿ ನಾಯಕ್, ಶೇಷ ನಾಯಕ್, ದೇವಿ ಭಾಯಿ ಸಹಾಯಕ ಅಭಿಯಂತರ ಮೋಹನ್ ಎಸ್. ಸಿಬ್ಬಂದಿ ಓಂಪ್ರಕಾಶ್, ರುಕ್ಮಿಣಿ, ಪುಷ್ಪ, ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಕಲಾ ಮೇಳದಲ್ಲಿ ಬಂಜಾರರ ಪರಂಪರೆಯ ನೃತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕಲೆಗಳು ವಿಶೇಷ ಆಕರ್ಷಣೆಯಾಗಿದ್ದವು.

(Visited 1 times, 1 visits today)