
ತುಮಕೂರು: ಜಾಗತೀಕರಣದ ಹೆಸರಿನಲ್ಲಿ ಭೂಮಿಯನ್ನು ವ್ಯಾಪಾರ ವಸ್ತುವನ್ನಾಗಿ ಮಾಡಿದರೆ ಮಾನವನ ಅಂತ್ಯ ಕಟ್ಟಿಟ್ಟ ಬುತ್ತಿ ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ. ಡಿ.ನಂಜು0ಡಸ್ವಾಮಿ ಅಧ್ಯಯನ ಪೀಠ ಹಾಗೂ ಸ್ನಾತಕೋತ್ತರ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಜಾಗತೀಕರಣ- ಪ್ರತಿರೋಧ ಮತ್ತು ಪರ್ಯಾಯ: ನಂಜು0ಡಸ್ವಾಮಿಯವರ ಚಿಂತನೆ’ ಕುರಿತು ಮಾತನಾಡಿದರು.
ಜಾಗತೀಕರಣವು ೯೦ರ ದಶಕದಲ್ಲಿ ಅನಿವಾರ್ಯವಾಯಿತು. ಆರ್ಥಿಕವಾಗಿ ದೇಶವು ಪ್ರಬಲಗೊಳ್ಳಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವಸಾಹತುಶಾಹಿಯನ್ನು ಕೊನೆಗೊಳಿಸಿ, ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯನ್ನು ಕಾಣಬೇಕೆಂಬುದು ಪ್ರೊ. ಎಂ. ಡಿ. ನಂಜು0ಡಸ್ವಾಮಿಯವರ ಚಿಂತನೆಯಾಗಿತ್ತು. ಅವರು ರೈತ ಸಂಘದ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ ಅವರ ಧ್ವನಿಯಾಗಿದ್ದರು ಎಂದರು.
ಯಾವುದೇ ನಿಬಂಧನೆಗಳಿಲ್ಲದೆ ನಮ್ಮ ವಸ್ತುಗಳ ವ್ಯಾಪಾರ ಮಾಡುವುದಕ್ಕೆ ಮುಕ್ತ ಮಾರುಕಟ್ಟೆ ಸಹಾಯವಾಗುತ್ತದೆ. ಸುಂಕರಹಿತ ಮಾರುಕಟ್ಟೆ ಅರ್ಥಶಾಸ್ತçದ ಬೆಳವಣಿಗೆಗೆ ಮುಖ್ಯವಾದದ್ದು. ಅರ್ಥವ್ಯವಸ್ಥೆಯು ರಾಷ್ಟç್ರದ ಗಡಿಗಳನ್ನು ದಾಟಬೇಕು. ಇದರಿಂದ ಹೊಸ ಆರ್ಥಿಕ ನೀತಿಗಳು ಉಂಟಾಗಿ ಉತ್ತಮ ಸಂಬAಧ ಮೂಡುತ್ತದೆ. ಜಾಗತೀಕರಣದ ವಿರುದ್ಧದ ಪ್ರತಿರೋಧವು ಪ್ರತಿಭಟನೆಯ ಜೊತೆಗೆ ಪರಿಹಾರ ಕೂಡ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಕೊಟ್ರೇಶ್ ಎಂ. ಮಾತನಾಡಿ, ರೈತರು ಜಾಗತೀಕರಣದ ಹೊಡೆತಕ್ಕೆ ಸಿಲುಕಿದ್ದಾರೆ. ಆಹಾರದ ವೈವಿಧ್ಯತೆಯ ಜೊತೆಗೆ ಜಾನಪದ ವೈವಿಧ್ಯತೆಯನ್ನು ಸಹ ಕಳೆದುಕೊಳ್ಳುತ್ತಿದ್ದಾರೆ ಎಂದರು ವಿಷಾದಿಸಿದರು.
ಪ್ರೊ. ಎಂ. ಡಿ.ನಂಜು0ಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ. ಎಂ. ಮುನಿರಾಜು, ಸ್ನಾತಕೋತ್ತರ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ. ರವೀಂದ್ರಕುಮಾರ್ ಬಿ., ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಣಿ ಉಪಸ್ಥಿತರಿದ್ದರು.



