ತುಮಕೂರು: ಸುಪ್ರಿಂ ಕೋರ್ಟಿನ ತೀರ್ಪಿನ ನಡುವೆಯೂ ಒಳಮೀಸಲಾತಿ ಜಾರಿಗೆ ವಿವಿಧ ಕಾರಣಗಳನ್ನು ನೀಡಿ ನಿರ್ಲಕ್ಷ ತೋರಿರುವ ರಾಜ್ಯ ಸರಕಾರದ ವಿರುದ್ದ ಅಂಬೇಡ್ಕರ್ ಪರಿನಿಬ್ಬಾಣದ ದಿನವಾದ ಡಿಸೆಂಬರ್ ೦೬ ರಿಂದ ೧೧ರವರೆಗೆ ಮೈಸೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಕೈಗೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಸಂಚಾಲಕರಾದ ಕೇಶವಮೂರ್ತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಡಿಸೆಂಬರ್ ೬ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನ ಹುಂಡಿಯಿ0ದ “ಪೂರ್ಣ ಪ್ರಮಾಣದ ಒಳಮೀ ಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ”ಎಂಬ ಘೋಷ ವಾಕ್ಯ ದೊಂದಿಗೆ ಮೈಸೂರು ಚಲೋ ಜಾಥಾ ಆರಂಭಿಸಿ,ಡಿಸೆ0ಬರ್ ೧೧ ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಮುಕ್ತಾಯಗೊಳಿಸಲಾಗುವುದು ಎಂದರು.
ಸರಕಾರ ಹೇಳುತ್ತಿರುವಂತೆ ಒಳಮೀಸಲಾತಿ ಯನ್ನು ಕೇವಲ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಮಿತಗೊಳಿಸುವುದು ಸರಿಯಲ್ಲ. ರಾಜಕೀಯ ಸೇರಿದಂತೆ ಎಲ್ಲಾ ರಂಗದಲ್ಲಿಯೂ ಒಳಮೀಸಲಾತಿ ಪರಿಪೂರ್ಣವಾಗಿ ಜಾರಿಗೆ ಬರಬೇಕು ಎಂಬುದು ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಗಳ ಜನರ ಒತ್ತಾಯವಾಗಿದೆ.ಕೆಲ ಪಟ್ಟಭದ್ರ ಹಿತಾಸಕ್ತಿಗಳು ಒಳಮೀಸಲಾತಿ ಜಾರಿಗೆ ಅಡ್ಡಿಯಾ ಗುತ್ತಿದ್ದು,ಅಂತಹ ಹಿತಾಸಕ್ತಿಗಳಿಗೆ ಸರಕಾರ ಬಲಿಯಾಗದೆ,ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೂಡಲೇ ಒಳಮೀಸಲಾತಿ ಜಾರಿಗೆ ತರಬೇಕೆಂಬುದು ನಮ್ಮ ಆಗ್ರಹ.ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಒಳಮೀಸಲಾತಿಗೆ ಅಡ್ಡಿಯಾ ಗಿರುವ ದುಷ್ಟ ಶಕ್ತಿಗಳನ್ನು ಮೆಟ್ಟಿನಿಂತು ನ್ಯಾಯ ಒದಗಿಸಬೇಕೆಂದರು.
ಒಳಮೀಸಲಾತಿ ಹೋರಾಟಗಾರರಾದ ಪಾವಗಡ ಶ್ರೀರಾಮ್ ಮಾತನಾಡಿ,ಪರಿಶಿಷ್ಟ ಜಾತಿಯ ಜನರು ಒಳಮೀಸಲಾತಿಯನ್ನು ಪ್ರತಿ ಹಂತದಲ್ಲಿಯೂ ಹೋರಾಟ ಮಾಡಿಯೇ ಪಡೆಯಲಾಗಿದೆ.ಆದರೆ ಅತಿ ಹೆಚ್ಚು ಮೋಸವಾಗಿರುವುದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಾಲದಲ್ಲಿಯೇ ಎಂಬುದನ್ನು ಹೋರಾಟಗಾರರು ಮನಗಂಡಿದ್ದಾರೆ.ಸರಕಾರಕ್ಕೆ ಇದು ಕೊನೆಯ ಅವಕಾಶ. ಡಿಸೆಂಬರ್ ೧೦ ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಒಳಮೀಸಲಾತಿಯನ್ನು ಪರಿಪೂರ್ಣವಾಗಿ ಜಾರಿಗೆ ತರದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಕಾಲ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡAತೆ ಎಂದು ಎಚ್ಚರಿಕೆ ನೀಡಿದರು.
ಒಳಮೀಸಲಾತಿ ಹೋರಾಟಗಾರರಾದ ಸಿದ್ದಗಂಗಾ ಶಿವಯೋಗಿ ಮಾತನಾಡಿ, ಒಳಮೀ ಸಲಾತಿಗಾಗಿ ಕಳೆದ ಮೂರು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದೆ.ಅನೇಕ ಜೀವಗಳು ಬಲಿಯಾಗಿವೆ.ಇದನ್ನು ಸಚಿವ ಸಂಪುಟದಲ್ಲಿರುವ ಹೆಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್ ಅರ್ಥ ಮಾಡಿಕೊಡಬೇಕು.ಎಡ,ಬಲಗಳ ಕಚ್ಚಾಟದಿಂದ ನೇಮಕಾತಿಗಳು ನಡೆಯದೆ ಯುವಜನತೆ ತತ್ತರಿಸಿ ಹೋಗಿದ್ದಾರೆ. ಸರಕಾರಕ್ಕೆ ಸುಪ್ರಿಂಕೋರ್ಟಿ ತೀರ್ಪುಗೆ ಮಾಡಿದ ಅಪಮಾನದ ಜೊತೆಗೆ, ಪರಿಶಿಷ್ಟ ಜನಾಂಗಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ.ಹಾಗಾಗಿ ಚಳಿಗಾಲದ ಅಧಿವೇಶನದಲ್ಲಿ ಸರಕಾರವೇ ತಿಳಿಸಿದಂತೆ ಒಳಮೀಸಲಾತಿ ಜಾರಿಗೆ ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ದಸಂಸದ ಪಿ.ಎನ್.ರಾಮಯ್ಯ ಮಾತನಾಡಿ ದರು.ದಲಿತ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

(Visited 1 times, 1 visits today)