ಗುಬ್ಬಿ: ಎಚ್ ಎ ಎಲ್ ನಲ್ಲಿ ಸೈನಿಕರಿಗೆ ಆರು ಎಕರೆ ಜಮೀನು ಮೀಸಲು ಇರಿಸಿದ್ದು ಹಸ್ತಾಂತರಿಸುವ0ತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಎಸ್ಸಿಎಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ನಡೆದ ನಿವೃತ ಸೈನಿಕ ದಿವಾಕರ್ ಬಿ ಟಿ ರವರಿಗೆ ಸ್ವಾಗತ ಹಾಗೂ ಅಭಿನಂದನಾ ಸಮಾರಂಭ ಮತ್ತು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ರೈತ ದೇಶಕ್ಕೆ ಅನ್ನವನ್ನು ನೀಡಿದರೆ ದೇಶವನ್ನು ಕಾಯುವಲ್ಲಿ ಸೈನಿಕರ ಪಾತ್ರ ಮಹತ್ತರವಾದದ್ದು. ಪ್ರತಿಯೊಬ್ಬರೂ ಸೈನಿಕರಿಗೆ ಗೌರವ ನೀಡುವ ಮೂಲಕ ಅವರನ್ನು ಗೌರವಿಸಬೇಕು. ಭಾರತದಲ್ಲಿ ಮಿಲಿಟರಿ ವ್ಯವಸ್ಥೆ ಸುಭದ್ರವಾಗಿದ್ದು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಭಾರತದ ಸೈನಿಕರ ಶೌರ್ಯ, ಧೈರ್ಯ ಎಂತದು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹಿಂದಿನ ಯುವ ಪೀಳಿಗೆಗೆ ದೇಶ ಹಾಗೂ ಸೈನಿಕರ ಮೇಲೆ ಅಭಿಮಾನ ಗೌರವವನ್ನು ಬೆಳೆಸಿಕೊಳ್ಳಬೇಕು. ನಾವು ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತ ಪ್ರತಿಯೊಬ್ಬರಲ್ಲೂ ಇರಬೇಕು ಎಂದ ಅವರು ದೇಶ ಸೇವೆ ಮಾಡಿ ತಾಯ್ನಾಡಿಗೆ ಹಿಂದುರಿಗಿದ ದಿವಾಕರ್ ಅವರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದರು.
ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಶಿವಣ್ಣ ಮಾತನಾಡಿ ಯುವಕರು ಸೈನ್ಯಕ್ಕೆ ಸೇರುವ ಮೂಲಕ ದೇಶ ಸೇವೆಯನ್ನು ಮಾಡಬೇಕು. ಪ್ರತಿಯೊಬ್ಬರು ದೇಶ ಪ್ರೇಮ ಯವನ್ನು ಬೇಳಸಿಕೊಳ್ಳಬೇಕು. ಸರ್ಕಾರ ನಟನೆ ಮಾಡುವವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾರೆ. ದೇಶ ಕಾಯುವವರಿಗೂ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸವಾಗಬೇಕು ಎಂದು ತಿಳಿಸಿದರು.
ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ ಮಾತನಾಡಿ ದೇಶ ನೆಮ್ಮಯಾಗಿದೆ ಎಂದರೆ ಅದಕ್ಕೆ ಭಾರತೀಯ ಸೈನ್ಯವೇ ಪ್ರಮುಖ ಕಾರಣ. ಪ್ರತಿಯೊಬ್ಬರು ಸೈನ್ಯಕ್ಕೆ ಸೇರುವ ಚಿಂತನೆಯನ್ನು ಬೆಳೆಸಿಕೊಳ್ಳಬೇಕು.
ವೃತ್ತಿ ಘನತೆಯೊಂದಿಗೆ ದೇಶ ಭಕ್ತಿಯೂ ಇರಬೇಕು. ಆರಪೇಷನ್ ಸಿಂಧೂರ ಯಶಸ್ವಿಯಾಗಿದೆ. ಇಡೀ ದೇಶಕ್ಕೆ ದೇವರೆಂದರೆ ಒಬ್ಬ ರೈತ ಹಾಗೂ ಒಬ್ಬ ಸೈನಿಕ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ದಿವಾಕರ್ ಅವರನ್ನು ಶ್ರೀ ಚನ್ನಬಸವೇಶ್ವರಸ್ವಾಮಿ ದೇವಸ್ಥಾನದಿಂದ ಬೃಹತ್ ಮೆರವಣಿಗೆಯೊಂದಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಸದಸ್ಯರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಅಟವಿ ಚನ್ನಬಸವ ಸ್ವಾಮೀಜಿ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಪ್ರಾಂಶುಪಾಲ ಡಾ ಪ್ರಸನ್ನ, ಮಾಜಿ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಬಿದರೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯತೀಶ್, ಯತೀಶ್ ಬಿದರೆ, ಪಪಂ ಸದಸ್ಯರು, ಇತರರು ಉಪಸ್ಥಿತರಿದ್ದರು.



