
ತುಮಕೂರು: ಜಿಲ್ಲೆಯ ನಿರಾಶ್ರಿತರು, ಬಡವರು ನಿರ್ಗತಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಸತಿ ನಿವೇಶನದ ಜಾಗಗಳನ್ನು ಗುರುತಿಸಿದ್ದು ಅಲೆಮಾರಿ, ಅರೆ ಅಲೆಮಾರಿ ಅಕ್ಕಿ ಪಿಕ್ಕಿ ಹಂದಿ ಜೋಗಿ ಸಮುದಾಯಗಳಿಗೆ ನಿವೇಶನ ಕಲ್ಪಿಸಲು ತುಮಕೂರು ಹೊರವ ಲಯದ ಕೇಂದ್ರೀಯ ವಿದ್ಯಾಲಯದ ಬಳಿ ಅಮಲಾಪುರದ ಸರ್ವೆ ನಂ. ೩೧ ರಲ್ಲಿ ಈಗಾಗಲೇ ಒಂದು ಎಕ್ಕರೆ ಜಮೀನು ನೀಡಿದ್ದು ಆದರೆ ಇಲ್ಲಿಗೆ ಮೂಲ ಭೂತ ಸೌಕರ್ಯ ಕಲ್ಪಿಸುವಲ್ಲಿ ಜಿಲ್ಲಾ ಆಡಳಿತದ ಅಧಿಕಾರಿಗಳು ವಿಫಲವಾಗಿದ್ದು ಕೂಡಲೇ ಮೂಲಭೂತ ಸೌಕರ್ಯ ಕಲ್ಪಿಸಿ ಹಕ್ಕುಪತ್ರ ನೀಡದೆ ಹೋದರೆ ಜನವರಿ ೧೦ ರಿಂದ ಇಲ್ಲಿ ಅನಿರ್ದಿಷ್ಟ ಅವಧಿ ಹೋರಾಟ ನಡೆಸಲಾಗುವುದು ಎಂದು ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಕೆ.ಎಮ್.ಸಂದೇಶ್ ಅವರು ತಿಳಿಸಿದರು.
ತುಮಕೂರು ನಗರ ಹೊರವಲಯದ ಅಮಲಾಪುರ ಕೇಂದ್ರೀಯ ವಿದ್ಯಾಲಯದ ಬಳಿ ಇರುವ ಹಂದಿ ಜ್ಯೋಗಿಗಳ ವಾಸಸ್ಥಾನಕ್ಕೆ ಭೇಟಿ ಸುದ್ದಿಗಾರರ ಬಳಿ ಮಾತನಾಡಿದರು ತುಮಕೂರು ಜಿಲ್ಲೆಯ ಸುಮಾರು ೫೦ಕ್ಕೂ ಹೆಚ್ಚು ನಿರ್ಗತಿಕರು ಅಲೆಮಾರಿಗಳಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಒಂದು ಎಕ್ಕರೆ ಜಮೀನು ಮಂಜೂರು ಮಾಡಿದ್ದು ಇದನ್ನು ಅಭಿವೃದ್ಧಿಗೊಳಿಸಲು ಸಮಾಜ ಕಲ್ಯಾಣ ಇಲಾಖೆಯ ಸುಬರ್ದಿಗೆ ನೀಡಿದ್ದರು ಆದರೆ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಜಮೀನು ಅಭಿವೃದ್ಧಿಗೊಳಿಸಲು ಇಲಾಖೆಯಲ್ಲಿ ಹಣ ವಿಲ್ಲ ಅನುದಾನ ಬಿಡುಗಡೆಯಾದ ನಂತರ ಅಭಿವೃದ್ಧಿಗೊಳಿಸಲಾಗುವುದು ಎಂಬ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ ಇಲ್ಲಿನ ಅಧಿಕಾರಿಗಳು ಲಂಚ ದ ಆಸೆಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಅಲೆಮಾರಿ ಹಂದಿ ಜೋಗಿ ಸಮುದಾಯದ ಮುಖಂಡ ನಾಗರಾಜ್ ಅವರು ಮಾತನಾಡಿ ಸುಮಾರು ವರ್ಷಗಳಿಂದಲೂ ನಾವು ಬೀದಿಯಲ್ಲಿ ಬದುಕುತ್ತಿದ್ದೇವೆ. ಇಲ್ಲಿನ ಹೆಣ್ಣು ಮಕ್ಕಳು ಹೊರ ಹೋಗಲು ಭಯಪಡುತ್ತಿದ್ದಾರೆ ಅನೇಕ ಹೋರಾಟಗಳ ನಂತರ ನಮಗೆ ನಿವೇ ಶನ ನೀಡಲು ಒಂದು ಎಕ್ಕರೆ ಜಾಗವನ್ನು ಗುರುತಿಸಿದ್ದು ಇದನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ ಇದರಿಂದ ನಮಗೆ ತುಂಬಾ ಸಮಸ್ಯೆ ಉಂಟಾಗಿದೆ ಹಾಗಾಗಿ ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಸಂದೇಶ್ ಅವರನ್ನು ಭೇಟಿ ಮಾಡಿದಾಗ ಅವರು ಇಲ್ಲಿಗೆ ಬಂದು ಹೋರಾಟ ಮಾಡಿ ಹಕ್ಕು ಪತ್ರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಈಗಲಾದರೂ ಅಧಿಕಾರಿಗಳು ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.





