ಮಧುಗಿರಿ: ಜನವರಿ ೧ರಂದು ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ದೇಶದಾದ್ಯಂತ ಶೋಷಿತ ಸಮುದಾಯಗಳು ಆಚರಣೆ ಮಾಡುತ್ತಿವೆ. ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದವರ ಪ್ರತಿ ಗ್ರಾಮದಲ್ಲಿ ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವದ ಚರಿತ್ರೆಯನ್ನು ಜನರಿಗೆ ತಿಳಿಸಬೇಕು ಎಂದು ದ.ಸಂ.ಸ ಜಿಲ್ಲಾ ಸಂಚಾ ಲಕ ದೊಡ್ಡೇರಿ ಕಣಿಮಯ್ಯ ತಿಳಿಸಿದರು
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಬಳಿ ಸಮಾಜಕಲ್ಯಾಣ ಇಲಾಖೆ ಹಾಗೂ ದಲಿತಪರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿ ಕೊಂಡಿದ್ದ ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧವಾಗಿದೆ ಭೀಮಾ ನದಿ ದಡದಲ್ಲಿ ಪೇಶ್ವೆ ಸೇನೆ ಹಾಗೂ ಮಹಾರ್ ಸೈನಿಕರ ಮಧ್ಯೆ ನಡೆದ ಯುದ್ದದಲ್ಲಿ ಮಹರ್ ಸೈನಿಕರು ಶೌರ್ಯ ಮೆರೆದಿದ್ದಾರೆ ೩೦ ಸಾವಿರ ಪೇಶ್ವೆಗಳನ್ನು ೫೦೦ ಮಹಾರ್ ಸೈನಿ ಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು ಮಾನವೀ ಯ ವೌಲ್ಯಗಳನ್ನು ಪಡೆದು ಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟವಾಗಿದ್ದು ಇದು ಅಸ್ಪೃಶ್ಯತೆಯ ವಿರುದ್ದ ಸಮಾನತೆಗಾಗಿ ನೆಡೆದ ಯುದ್ದವಾಗಿದ್ದು ಇಂತಹ ಇತಿಹಾಸಗಳನ್ನು ತಿಳಿಯಬೇಕಿದೆ ಎಂದರು.
ದ.ಸಾ.ಪ ತಾಲ್ಲೂಕು ಅಧ್ಯಕ್ಷ ಮಹರಾಜು ಮಾತನಾಡಿ ದಲಿತರ ಸ್ವಾಭಿಮಾನದ ಪ್ರತೀಕ, ದಲಿತರ ಅಸ್ಮಿತೆಯ ಸಂಕೇತವಾಗಿರುವ ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಇಂದಿನ ಯುವ ಪೀಳಿಗೆ ತಿಳಿಯಬೇಕಿದೆ ಕೋರೆಗಾಂವ್ ಯುದ್ಧದ ಇತಿಹಾಸವನ್ನು ಈ ದೇಶದ ಮೇಲ್ವರ್ಗದ ಪರವಾಗಿರುವ ಇತಿಹಾಸಕಾರರು ಮರೆಮಾಚಿದ್ದರು ಅಂಬೇ ಡ್ಕರ್ ಅವರು ಮಹಾರ್ ಇತಿಹಾಸವನ್ನು ಅಧ್ಯಯನ ಮಾಡುವ ಸಮಯದಲ್ಲಿ ಕೋರೆಗಾಂವ್ ಯುದ್ದದ ಇತಿಹಾಸವನ್ನು ತಿಳಿದು ಅದನ್ನು ಇಡೀ ಜಗ್ಗತ್ತಿಗೆ ತಿಳಿಸದರು ಕೋರೆಗಾಂವ್ ಯುದ್ದದಲ್ಲಿ ೩೦ ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿದ ೫೦೦ ಮಹಾರ್ ಸೈನಿಕರ ಪೈಕಿ ೨೨ ಮಂದಿ ಸೈನಿಕರು ಮರಣ ಹೊಂದುತ್ತಾರೆ. ಅವರ ನೆನಪಿಗಾಗಿ ಭೀಮನದಿ ತೀರದಲ್ಲಿ ವಿಜಯಸ್ಥಂಭ ಸ್ಥಾಪಿಸಲಾಗಿದ್ದು, ಪ್ರತಿವರ್ಷ ಕೋರೆಗಾಂವ್‌ಗೆ ಜನವರಿ೧ರಂದು ಸುಮಾರು ೫ ಲಕ್ಷದಿಂದ ೬ ಲಕ್ಷದವರಗೆ ಜನರು ಸೇರಿ ಇತಿಹಾಸದ ಸಂಕೇತವಾದ ಈ ದಿನವನ್ನು ಸ್ಮರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಎಸ್.ಕೆ.ರಂಗನಾಥ್, ಎಂ.ವೈ. ಶಿವಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಹೆಚ್.ಚಂದ್ರಕಾ0ತ್, ಕೆಪಿಸಿಸಿ ಶಿಕ್ಷಕರ ಘಟ ಕದ ಜಿಲ್ಲಾಧ್ಯಕ್ಷ ವೆಂಕಟರಾಮು, ಸಮಾಜ ಕಲ್ಯಾ ಣ ಇಲಾಖೆಯ ವ್ಯವಸ್ಥಾಪಕ ರಾಮ್ ಪ್ರಸಾದ್, ಮಹೇಶ್,ಮನೋಜ್ ಇನ್ನಿತರರು ಇದ್ದರು.

(Visited 1 times, 1 visits today)