
ಮಧುಗಿರಿ: ಅಸ್ಪೃಶ್ಯರ ಸ್ವಾಭಿಮಾನಕ್ಕಾಗಿ ಶೂರರಾದ ಮಹಾರರು ಸಿದ್ದನಾಕ ಮುಖಂಡತ್ವದಲ್ಲಿ ೧೮೧೮ ಜನವರಿ ೧ ರಂದು ಭೀಮಾಕೋರೆಗಾಂವ್ ಯುದ್ದದಲ್ಲಿ ಬಾಜಿರಾವ್ ಪೇಶ್ವೆಯ ೩೦ ಸಾವಿರ ಸೈನಿಕರ ವಿರುದ್ದ ಜಯಭೇರಿ ಬಾರಿಸಿದರು ಯುದ್ದದಲ್ಲಿ ಮಡಿದ ೨೨ ಮಹಾರ್ ವೀರ ಸೈನಿಕರ ಹೆಸರುಗಳನ್ನು ಸರ್ಕಾರಿ ಅಜ್ಞೆಯಂತೆ ವಿಜಯ ಸ್ತಂಭವನ್ನು ಸ್ಥಾಪಿಸಲಾಗಿದೆ ಎಂದು ದ.ಸಂ.ಸ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಲ್ಲದಮಡು ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿವತಿಯಿಂದ ಆಯೋಜಿಸಲಾಗಿದ್ದ ಜನವರಿ ೧೮೧೮ ರ ಭೀಮಾಕೋರೆಗಾಂವ್ ಯುದ್ದದಲ್ಲಿ ಮಹಾರ್ ಸ್ವಾಭಿಮಾನಿ ವೀರಯೋದರ ವಿಜಯೋತ್ಸವದ ನೆನಪಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಡಾ.ಬಿ.ಆರ್.ಅಂಬೇಡ್ಕರ್ ರವರು ಬ್ರಿಟಿಷ್ ರ ಮತ್ತು ಮಹಾರರ ಸಂಪೂರ್ಣ ಇತಿಹಾಸ ತಿಳಿದುಕೊಳ್ಳಲು ಅಧ್ಯಯನ ಮಾಡುವಾಗ ಮಹಾರ್ ಯುದ್ಧದ ಪರಿಚಯ ವಾಯಿತು ಇಲ್ಲವಾದರೆ ಚರಿತ್ರೆಯಲ್ಲಿ ಮುಚ್ಚಿಹೋಗಿದ್ದ ಈ ವಿಚಾರ ಬೆಳಕಿಗೆ ಬರುತ್ತಿರಲಿಲ್ಲ ಎಂದರು.ಈ ದೇಶದಲ್ಲಿ ಯಾವುದೇ ತರಹದ ಸಮಸ್ಯೆಗಳನ್ನು ಕೊನೆಗಾಣಿಸಲು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ಸತ್ಯವನ್ನು ಬರೆದು ಸಮಾಜಕ್ಕೆ ಕಣ್ಣಾಗಬೇಕು ಅನ್ಯಾಯದ ವಿರುದ್ಧ ಮರೆಮಾಚದೆ ಪತ್ರಿಕೆಗಳಲ್ಲಿ ಬರೆಯಬೇಕು.
ಬಾಬಾ ಸಾಹೇಬರು ಶೂದ್ರರಿಗೆ ,ಮಹಿಳೆಯರಿಗೆ ಓಟಿನ ಹಕ್ಕು ತಂದು ಕೊಟ್ಟರು ಆದರೆ ಅದೇ ಓಟುಗಳನ್ನು ಇಂದು ಮಾರಾಟ ಮಾಡಿಕೊಳ್ಳುತ್ತಿರುವುದು ವಿಷಾದಕರ ಓಟಿನ ಮೌಲ್ಯ ಗೊತ್ತಿಲ್ಲದೆ ಕೆಲವರಿಗೆ ಮತ ಚಲಾಯಿಸು ತ್ತಿದಾರೆ ಇದು ನಮ್ಮ ಬೆಳವಣಿಗೆಗೆ ಹಿನ್ನೆಡೆಯಾಗುತ್ತದೆ ನಮ್ಮ ಪರವಾಗಿ ದನಿ ಎತ್ತುವ ಮುಖಂಡರಿಗೆ ಮತ ಚಲಾಯಿಸಬೇಕು ಭೀಮಾ ಕೋರೆಗಾಂವ್ ಯುದ್ದ ಅಸಮಾನತೆ,ಅಸ್ಪ್ರಶ್ಯತೆ,ವಿರುದ್ದ ಮಹಾರ್ ಸೈನಿಕರು ಹೋರಾಡಿ ಸಮಾನತೆ ಹಾಗೂ ಶೂದ್ರರ ಮಕ್ಕಳಿಗೆ ಶಿಕ್ಷಣದ ಹಕ್ಕು ತರಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ವೀರರು ಎಂದರು.
ದಲಿತ ಮುಖಂಡ ಅಣ್ಣೇನಹಳ್ಳಿ ಗೋಪಾಲ್ ಮಾತ ನಾಡಿ, ದಲಿತ ಸಂಘಟನೆಗಳು ಇಂದು ಒಡೆದು ಹನ್ನೆರಡು ಭಾಗವಾಗಿವೆ ದಲಿತ ಸಂಘರ್ಷ ಸಮಿತಿ ಯಾವತ್ತು ಶೋಷಿತರ ಪರವಾಗಿ ಹೋರಾಟಮಾಡಬೇಕು. ಸಂಘಟ ನೆಗಳು ಎಂದರೆ ಅಂದಿನ ಕಾಲದಲ್ಲಿ ರಾಜಕೀಯ ಪಕ್ಷ ಗಳು ಎದುರುತ್ತಿದ್ದವು ಈಗ ಅಂತಹ ವಾತಾವರಣ ಕಣ್ಮರೆ ಯಾಗಿದೆ ಹೋರಾಟಗಾರರು ಇಂದು ಕೆಲ ರಾಜಕೀಯ ನಾಯಕರ ಪರವಾಗಿ ಜೈಕಾರಗಳನ್ನು ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ ದಲಿತ ಸಮುದಾಯದ ಹಿತ ಕಾಯಬೇಕಿದ್ದ ಸಂಘಟನೆಗಳ ಮುಖಂಡರು ಅದನ್ನು ಮರೆತಬಿಟ್ಟಿದ್ದಾರೆ ಎಂದರು.
ರೈತ ಸಂಘಟನೆಯ ಹಿರಿಯ ಹೋರಾಟಗಾರ ನೀರಕಲ್ಲು ರಾಮಕೃಷ್ಣಪ್ಪ, ಬಿಎಸ್ಪಿ ಜಿಲ್ಲಾ ಸಂಯೋಜಕ ಶಿವಕುಮಾರ್ ಬೆಲ್ಲದಮಡು, ಜಿಲ್ಲಾಧ್ಯಕ್ಷ ಶಿರಾ ರಂಗನಾಥ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತರಾಯಪ್ಪ, ಖಜಾಂಚಿ ಕೆ ಪಿ ಲಿಂಗಣ್ಣ, ದಲಿತ ಮಹಿಳಾ ಒಕ್ಕೂಟದ ಪಾರ್ವತಮ್ಮ, ಬಿ ಎಸ್ ಪಿ ಜಿಲ್ಲಾಧ್ಯಕ್ಷ ಡಿ ಭರತ್ ಕುಮಾರ್, ವಿಭಾಗ ಅಧ್ಯಕ್ಷ ಜಯರಾಮಯ್ಯ, ನಗರಾಧ್ಯಕ್ಷ ದಸ್ತಗೀರ್, ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ವೆಂಕಟೇಶ್, ವಕೀಲರುಗಳಾದ ತೆರಿಯೂರು ಶಿವಣ್ಣ, ಬಿ ಎಂ ರಂಗನಾಥ್ಮು ಮುಖಂಡರುಗಳಾದ ಅಶ್ವತಪ್ಪ, ರವಿಕುಮಾರ್, ನೀರಕಲ್ಲು ನರಸಿಂಹಯ್ಯ, ಅಡವೀಶಯ್ಯ, ಹಾಗೂ ದಲಿತ ಸಂಘಟನೆಯ ಮುಖಂಡರು ಹಾಜರಿದ್ದರು.



